Site icon Vistara News

Urfi Javed | ರಿಯಾಲಿಟಿ ಶೋದತ್ತ ಮುಖ ಮಾಡಿದ ಉರ್ಫಿ ಜಾವೇದ್‌: ಟ್ರೋಲ್‌ ಆಗಿದ್ಯಾಕೆ?

Urfi Javed MTV Splitsvilla X4's

ಬೆಂಗಳೂರು: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಉರ್ಫಿ ಜಾವೇದ್‌ (Urfi Javed) ತಮ್ಮ ಉಡುಗೊರೆಗಳಿಂದ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಇದೀಗ ಮತ್ತೆ ರಿಯಾಲಿಟಿ ಶೋ ಕಡೆ ಮುಖ ಮಾಡಿದ್ದಾರೆ. ಬಾಲಿವುಡ್‌ನ ʻಪಟಾಕಾʼ ಎಂದೇ ಹೆಸರುವಾಸಿಯಾಗಿರುವ ಉರ್ಫಿ ಜಾವೇದ್‌ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆ ಹಾಗೂ ಪೈಪೋಟಿಯನ್ನು ನೀಡಲಿದ್ದಾರೆ. ರಿಯಾಲಿಟಿ ಶೋ ಸ್ಪ್ಲಿಟ್ಸ್‌ವಿಲ್ಲಾದಲ್ಲಿ X4ರಲ್ಲಿ (MTV Splitsvilla X4) ಉರ್ಫಿ ಭಾಗವಹಿಸಿದ್ದಾರೆ. ಇದೀಗ ಈ ವಿಚಾರಕ್ಕೆ ಉರ್ಫಿ ಜಾವೇದ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ.

ʻʻಬರು ಬರುತ್ತಿದ್ದಂತೆ ನಾನೇ ಒಂದು ಬಾಂಬ್ ಆಗಿರುವೆ, ನಾನು ಎಲ್ಲಿ ಯಾವಾಗ ಸ್ಫೋಟಗೊಳ್ಳುತ್ತೇನೆ ಎಂಬುದು ನನಗೆ ತಿಳಿದಿಲ್ಲʼʼ ಎಂದು ಶೋನಲ್ಲಿ ಖಡಕ್‌ ಹೇಳಿಕೆ ನೀಡಿದ್ದಾರೆ ಉರ್ಫಿ. ಸ್ಪ್ಲಿಟ್ಸ್‌ವಿಲ್ಲಾದ 14 ನೇ ಸೀಸನ್‌ಗೆ ಉರ್ಫಿ ಜಾವೇದ್‌ ಬಂದಿದ್ದು, ಅಲ್ಲಿಯೂ ತಮ್ಮ ಬಟ್ಟೆಗಳಿಂದ ಸುದ್ದಿ ಆಗುತ್ತಿದ್ದಾರೆ.

ಇದನ್ನೂ ಓದಿ | Urfi Javed | ಮೊಬೈಲ್‌ಗಳಿಂದ ಮಾನ ಮುಚ್ಚಿಕೊಂಡ ಉರ್ಫಿ: ʻಲ್ಯಾಪ್‌ಟಾಪ್‌ ಇನ್ಮುಂದೆ ಸ್ಕರ್ಟ್‌ʼ ಅಂದ್ರು ನೆಟ್ಟಿಗರು!

ಏನಿದು ಸ್ಪ್ಲಿಟ್ಸ್‌ವಿಲ್ಲಾ X4 ?
ಎರಡು ದ್ವೀಪಗಳಲ್ಲಿ (ಗೋವಾದಲ್ಲಿ) ವಾಸಿಸುವ 10 ಹುಡುಗಿಯರು ಹಾಗೂ 10 ಹುಡುಗರು ಬೇರೆ ಬೇರೆ ಮಾದರಿಯ ಸವಾಲುಗಳ ಮೂಲಕ ತಮ್ಮ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಒಂದು ಜೋಡಿ ಸಿಂಹಾಸನವನ್ನು ಪಡೆದುಕೊಳ್ಳಲಿದ್ದು, ಅವರೇ ಕಾರ್ಯಕ್ರಮದ ಅಂತಿಮ ವಿಜೇತರಾಗುತ್ತಾರೆ. ನವೆಂಬರ್ 12ರಂದು ಆರಂಭಗೊಂಡಿರುವ ಸ್ಪ್ಲಿಟ್ಸ್‌ವಿಲ್ಲಾ X4 ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.

MTV ಸ್ಪ್ಲಿಟ್ಸ್‌ವಿಲ್ಲಾ X4 ನ ಅಧಿಕೃತ ಇನ್‌ಸ್ಟಾಗ್ರಾಮ್ ಹೈ ಹೀಲ್ಸ್ ಧರಿಸಿ ಉರ್ಫಿ ಜಾವೇದ್ ನಡೆಯುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದೆ. ಇದೀಗ ನೆಟ್ಟಿಗರು ಉರ್ಫಿ ಜಾವೇದ್‌ ಅವರನ್ನು ಟ್ರೋಲ್‌ ಮಾಡಿದ್ದಾರೆ. ಕೆಲವರು ʻಉರ್ಫಿ ಜಾವೇದ್‌ ಎಷ್ಟು ಕುಳ್ಳಗಿದ್ದಾಳೆʼ ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ʻಮೇಕಪ್ ಇಲ್ಲದೆಯೇ ಓಡಾಡುತ್ತಿದ್ದಾರೆʼ ಎಂದು ಹೇಳಿದ್ದಾರೆ.

ಈಗಾಗಲೇ ಉರ್ಫಿ ತುಂಡು ಬಟ್ಟೆಯ ವಿಚಾರಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ರಿಯಾಲಿಟಿ ಶೋ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ.

ಇದನ್ನೂ ಓದಿ | Urfi Javed | ಜೈಲಿಗೆ ಕಳುಹಿಸಬಲ್ಲೆ: ಹಿಂದೂಸ್ತಾನಿ ಭಾವುಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಉರ್ಫಿ ಜಾವೇದ್!

Exit mobile version