ಬೆಂಗಳೂರು: ಫ್ಯಾಷನ್ ಐಕಾನ್ ಎಂತಲೇ ಕರೆಯಲ್ಪಡುವ ಉರ್ಫಿ ಜಾವೇದ್ (Urfi Javed) ಸದಾ ತಮ್ಮ ಉಡುಪಿನ ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಸಾರ್ವಜನಿಕವಾಗಿ ನಟಿ ಅಶ್ಲೀಲವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರವಾಗಿ ಅದೆಷ್ಟೋ ಬಾರಿ ನಟಿಯ ವಿರುದ್ಧ ಹಲವರು ದೂರು ದಾಖಲಿಸಿದ್ದಾರೆ. ಇದೀಗ ಕಪ್ಪು ಬಣ್ಣದ ಬ್ರಾಗೆ ಬಾಡಿ ಫಿಟ್ ಆಗಿರುವ ಬ್ಲಾಕ್ ನೆಟ್ ಬಟ್ಟೆಯನ್ನು ಧರಿಸಿ ಉರ್ಫಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ನಟಿ ಬೀದಿ ನಾಯಿಯನ್ನು ಮುದ್ದಿಸುತ್ತಿರುವುದನ್ನು ಕಾಣಬಹುದು. ವಿಡಿಯೊವನ್ನು ಪೋಸ್ಟ್ ಮಾಡಿದ ಕೂಡಲೇ, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ‘ಅರ್ಧಂಬರ್ಧ ಬಟ್ಟೆ ಧರಿಸುವುದರಲ್ಲಿ ಏನ್ ಮಜಾ ಇದೆ?’, ‘ಇಷ್ಟೊಂದು ವಿಚಿತ್ರ ಸ್ಟೈಲಿಂಗ್ ಮಾಡಲು ತಲೆ ಹೇಗೆ ವರ್ಕ್ ಆಗುತ್ತೆ’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಾಲೇಜಿನಲ್ಲಿ ಅರ್ಧ ಅಸೈನ್‌ಮೆಂಟ್ ಯಾವಾಗ ಕೊಡಲು ಶುರು ಮಾಡಿದ್ರಿ? ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಉರ್ಫಿ ತನ್ನ ಉಡುಪಿನ ಆಯ್ಕೆಗಾಗಿ ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ.
ಕೆಲಸದ ಮುಂಭಾಗದಲ್ಲಿ, ಖತ್ರೋನ್ ಕೆ ಖಿಲಾಡಿಯ ಮುಂಬರುವ ಸೀಸನ್‌ಗಾಗಿ ಉರ್ಫಿ ಜಾವೇದ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ. ಇದುವರೆಗೆ ಅವರು ಪ್ರದರ್ಶನದಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಇದನ್ನೂ ಓದಿ:Urfi Javed: ಬಟ್ಟೆಯೇ ನಿನ್ನನ್ನು ನೋಡಿ ನಾಚಿಕೆ ಪಡುತ್ತೆ ಅಂದ್ರು ನೆಟ್ಟಿಗರು; ಟ್ರೋಲ್‌ಗೆ ಗುರಿಯಾದ ಉರ್ಫಿ
ಉರ್ಫಿ ವೈರಲ್ ಪೋಸ್ಟ್
ಕೆಲವು ದಿನಗಳ ಹಿಂದೆ, ‘ನನಗೆ ಉರ್ಫಿ ಸ್ಟೈಲಿಂಗ್ ಅಷ್ಟಾಗಿ ಇಷ್ಟ ಆಗುವುದಿಲ್ಲ. ಅದೊಂಥರಾ ವಿಚಿತ್ರವಾಗಿದೆ’ ಎಂದು ರಣಬೀರ್ ಕಪೂರ್ kಮೆಂಟ್ ಮಾಡಿದ್ದರು. ಹೆಣ್ಣು ಮಕ್ಕಳ ಮನಸ್ಥಿತಿಯನ್ನು ಉರ್ಫಿ ಹಾಳು ಮಾಡುತ್ತಿದ್ದಾರೆ ಎಂದು ಫೈಜಾನ್ ಅನ್ಸಾರಿ ದೂರು ದಾಖಲಿಸಿ ಕೋರ್ಟ್ ಮೆಟ್ಟಿಲು ಏರಿದ್ದಾರೆ.
ಉರ್ಫಿ ವಿರುದ್ಧ ನಟ ಫೈಜಾನ್ ಅನ್ಸಾರಿ ಶಾಕಿಂಗ್ ಹೇಳಿಕೆ
ಕೆಲ ದಿನಗಳಿಂದ ಉರ್ಫಿ ಜಾವೇದ್ ವಿರುದ್ಧ ಹೋರಾಟ ನಡೆಸುತ್ತಿರುವ ನಟ ಫೈಜಾನ್, “ಧರ್ಮವನ್ನು ಪದೇಪದೆ ಅವಮಾನಿಸಿದ್ದಾರೆ. ಮುಸ್ಲಿಂ ಹುಡುಗಿಯೊಬ್ಬಳು ಬೆತ್ತಲೆಯಾಗಿ ತಿರುಗಾಡುತ್ತಿದ್ದಾಳೆ ಎಂದು ಯಾರಾದರೂ ಹೇಳಿದಾಗ ನನಗೆ ತುಂಬಾ ನಾಚಿಕೆಯಾಗುತ್ತದೆ. ಉರ್ಫಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಾರೆ, ಆದ್ದರಿಂದ ಅವರನ್ನು ಯಾವುದೇ ಸ್ಮಶಾನದಲ್ಲಿ ಸಮಾಧಿ ಮಾಡಲು ಬಿಡಬಾರದು ಎಂದು ಮನವಿ ಮಾಡಿದ್ದೇನೆʼʼ ಎಂದು ಹೇಳಿಕೆ ನೀಡಿದ್ದಾರೆ.
ಉರ್ಫಿ ಸತ್ತಾಗ ಸ್ಮಶಾನದಲ್ಲಿ ಜಾಗವನ್ನೂ ಕೊಡುವುದಿಲ್ಲ ಎಂದು ನಟ ಹೇಳಿದ್ದಾರೆ. ʻʻಆಕೆ ತೊಟ್ಟಿರುವ ಬಟ್ಟೆಗಳು ಜಗತ್ತಿನಾದ್ಯಂತ ಇರುವ ಮುಸ್ಲಿಮರನ್ನು ಕೆಣಕುತ್ತಿವೆ. ಅವಳು ಇಸ್ಲಾಂನಲ್ಲಿ ನಂಬಿಕೆಯಿಲ್ಲ ಎಂದು ಹೇಳಿದರೆ, ಮೊದಲು ಅವಳ ಹೆಸರನ್ನು ಬದಲಿಸಿಕೊಳ್ಳಬೇಕು. ಮುಸ್ಲಿಂ ಹುಡುಗಿ ಇಂತಹ ಬಟ್ಟೆಗಳನ್ನು ಧರಿಸುತ್ತಾಳೆ ಎಂದು ಯಾರಾದರೂ ಹೇಳಿದಾಗ ನಮಗೆ ತುಂಬಾ ಬೇಸರವಾಗುತ್ತದೆ. ಫತ್ವಾ ಹೊರಡಿಸಿದ್ದಕ್ಕಾಗಿ ದೆಹಲಿಯ ಮೌಲಾನಾ ಮತ್ತು ಮುಂಬೈನ ಸಿಟಿ ಖಾಜಿಗೂ ದೂರು ನೀಡಿದ್ದೇನೆ ಎಂದು ಫೈಜಾನ್ ಅನ್ಸಾರಿʼʼ ತಿಳಿಸಿದ್ದಾರೆ.