Site icon Vistara News

Urfi Javed: ನೀರಜ್‌ ಪಾಂಡೆ ಕಡೆಯಿಂದ ಕಿರುಕುಳ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಉರ್ಫಿ ಜಾವೇದ್

Uorfi Javed says Neeraj Pandey's office is harassing her

ಬೆಂಗಳೂರು: ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಸ್ಟೈಲಿಶ್ ಫ್ಯಾಶನ್ ಸ್ಟೈಲ್‌ಗಾಗಿ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಆದರೆ ಇದೀಗ ಕೆಲವು ಬೆದರಿಕೆ ಕರೆಗಳು ಬಂದ ನಂತರ ಉರ್ಫಿ ಜಾವೇದ್ ಏಪ್ರಿಲ್‌ 16ರಂದು ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜ್ವರದಿಂದ ಬಳಲುತ್ತಿದ್ದರೂ ಉರ್ಫಿ ಜಾವೇದ್‌ ಪೊಲೀಸ್‌ ಠಾಣೆಯ ಹೊರಗೆ ಕಾರಿನಲ್ಲಿ ಕುಳಿತಿರುವ ವಿಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ತನಗೆ ಥಳಿಸುವುದಾಗಿ ಬೆದರಿಕೆ ಹಾಕುವ ವ್ಯಕ್ತಿಯಿಂದ ಕರೆಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.

ಉರ್ಫಿ ಪೋಸ್ಟ್‌ನಲ್ಲಿ, “ಯಾರೋ ನನಗೆ ನೀರಜ್ ಪಾಂಡೆ ಅವರ ಕಚೇರಿಯಿಂದ ಕರೆ ಮಾಡಿದರು. ಅವರ ಸಹಾಯಕ ಮತ್ತು ಸರ್ ಒಬ್ಬರು ನನ್ನನ್ನು ಭೇಟಿಯಾಗಲು ಬಯಸುತ್ತಾರೆ ಎಂದು ಹೇಳಿದರು. ಇದಾದ ಬಳಿಕ ನಾನು ಭೇಟಿಯಾಗುವ ಮೊದಲು ಅವರ ಪ್ರಾಜೆಕ್ಟ್‌ ವಿವರಗಳನ್ನು ನನಗೆ ಕಳುಹಿಸಬೇಕು ಎಂದು ಹೇಳಿದ್ದೇನೆ. ಈ ಸಮಯದಲ್ಲಿ ಸಹಾಯಕ, ನೀರಜ್ ಪಾಂಡೆಯನ್ನು ಅಗೌರವಿಸಲು ಎಷ್ಟು ಧೈರ್ಯ ಎಂದು ಹೇಳಿದರು. ಅಷ್ಟೇ ಅಲ್ಲದೇ ತನಗೆ ನಿನ್ನ ಕಾರ್‌ ನಂಬರ್‌ ಸಹ ತಿಳಿದಿದೆ ಎಂದು ಧಮ್ಕಿ ಹಾಕಿರುವುದಾಗಿʼʼ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Urfi Javed: ಉರ್ಫಿ ಜಾವೇದ್‌ ಫ್ಯಾಷನ್ ʻಬ್ಯಾಡ್ ಟೇಸ್ಟ್ʼ ಎಂದು ರಣಬೀರ್‌ ಅಂದಿದಕ್ಕೆ ಉರ್ಫಿ ಪ್ರತಿಕ್ರಿಯೆ ನೀಡಿದ್ದೇನು?

ಈ ಬಗ್ಗೆ ನೀರಜ್‌ ಪಾಂಡೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೀರಜ್‌ ಪಾಂಡೆ ಎ ವೆಡ್‌ನೆಸ್‌ ಡೇ, ಬೇಬಿ ಮತ್ತು ಸ್ಪೆಷಲ್ 26 ನಂತಹ ಹಿಟ್‌ ಚಿತ್ರಗಳ ನಿರ್ದೇಶಕರಾಗಿದ್ದಾರೆ. ಉರ್ಫಿ ಜಾವೇದ್ (Urfi Javed) ಆಗಾಗ ಹೊಸ ಅವತಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಉರ್ಫಿ ಜಾವೇದ್‌ ಎಷ್ಟೇ ಟ್ರೋಲ್‌ ಆದರೂ ಅವರ ಫ್ಯಾಷನ್‌ ಸೆನ್ಸ್‌ಗೆ ಅದೆಷ್ಟೋ ಬಾಲಿವುಡ್‌ ತಾರೆಯರು ಸೆರಿದಂತೆ ಅನೇಕರು ಹೊಗಳಿದ್ದಾರೆ.

ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡರು ಬಳಿಕ ಮೊದಲ ವಾರದಲ್ಲೇ ಈ ಕಾರ್ಯಕ್ರಮದಿಂದ ಹೊರಬಂದರು. ಆದರೆ ಬಳಿಕ ಉರ್ಫಿ ತನ್ನ ಫ್ಯಾಶನ್ ಮತ್ತು ಸ್ಟೈಲ್​ನಿಂದ ಭಾರೀ ಜನಪ್ರಿಯತೆ ಪಡೆದಿದ್ದಾರೆ.

Exit mobile version