Site icon Vistara News

Urfi Javed: ತಂದೆಯಿಂದಲೇ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳಕ್ಕೊಳಗಾದ ಉರ್ಫಿ ಜಾವೇದ್‌!

Uorfi Javed Says She Was Mentally And Physically Abused By Her Father

ಬೆಂಗಳೂರು: ಫ್ಯಾಷನ್‌ ಐಕಾನ್‌ ಉರ್ಫಿ ಜಾವೇದ್ (Urfi Javed) ಯಾವಾಗಲೂ ತಮ್ಮ ಉಡುಪಿನ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸಂದರ್ಶನವೊಂದರಲ್ಲಿ ತನ್ನ ತಂದೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿ ಮನೆಯಿಂದ ಓಡಿಹೋಗಿರುವ ಕುರಿತು ನಟಿ ಮತ್ತೆ ನೆನಪಿಸಿದ್ದಾರೆ. ಈ ಬಗ್ಗೆ ನಟಿ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ನೀಡಿದ ಸಂದರ್ಶನವೊಂದನ್ನು ಮತ್ತೆ ನೆನಪಿಸಿದ್ದಾರೆ. ʻಲಕ್ನೋದಲ್ಲಿ ಬೆಳೆದಿದ್ದು ನಾನು. ನಾನು ಯಾವಾಗಲಾದರೂ ಕ್ರಾಪ್ ಟಾಪ್‌ಗಳನ್ನು ಧರಿಸಿದ್ದರೆ ಅದರ ಮೇಲೆ ಜಾಕೆಟ್‌ಗಳನ್ನು ಹಾಕಿಕೊಳ್ಳುತ್ತಿದ್ದೆ. ಮನೆಯಲ್ಲಿ ಅಂತಹ ಬಟ್ಟೆಗಳನ್ನು ನನಗೆ ಧರಿಸಲು ಬಿಡದೇ ಇದ್ದಾಗ, ಕಾರಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ತಂದೆ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸುತ್ತಿದ್ದರು. ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ನನ್ನನ್ನು ಹೊಡೆಯುತ್ತಿದ್ದರು. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ ಎಂದುʼʼ ಉರ್ಫಿ ಜಾವೇದ್ ಹೇಳಿಕೊಂಡಿದ್ದಾರೆ.

ʻʻನನಗೆ 15 ವರ್ಷದವಳಿದ್ದಾಗ ಯಾರೋ ಪೋರ್ನ್ ಸೈಟ್‌ನಲ್ಲಿ ನನ್ನ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಇದು ಸಾಮಾನ್ಯ ಚಿತ್ರವಾಗಿತ್ತು. ನಾನು ಅದನ್ನು ನನ್ನ ಫೇಸ್‌ಬುಕ್ ಪ್ರೊಫೈಲ್ ಫೋಟೊವಾಗಿ ಟ್ಯೂಬ್ ಟಾಪ್ ಧರಿಸಿ ಅಪ್‌ಲೋಡ್ ಮಾಡಿದ್ದೇನೆ. ಯಾರೋ ಅದನ್ನು ಡೌನ್‌ಲೋಡ್ ಮಾಡಿ ಪೋರ್ನ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದರಿಂದ ಎಲ್ಲರೂ ನನ್ನನ್ನು ತುಂಬಾ ದೂಷಿಸಲು ಪ್ರಾರಂಭಿಸಿದರು. ನಾನು ಪೋರ್ನ್ ಸ್ಟಾರ್ ಎಂದು ಕರೆಯಲು ಶುರು ಮಾಡಿದರು ಎಂದು ಬರೆದುಕೊಂಡಿದ್ದಾರೆ.

ನನ್ನ ತಂದೆ ಕೂಡ ‘ಅವಳು ಪೋರ್ನ್ ಸ್ಟಾರ್’ ಅಂತಿದ್ದರು. ನನ್ನ ತಂದೆ ಇದೆಲ್ಲದರಿಂದ ಲಾಭ ಪಡೆದುಕೊಳ್ಳಲು ಹೀಗೆ ಹೇಳುತ್ತಿದ್ದರು. ಪೋರ್ನ್ ಸೈಟ್ ನವರು 50 ಲಕ್ಷ ರೂ. ಕೇಳುತ್ತಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದರು. ಅವರು ನಮ್ಮ ಸಂಬಂಧಿಕರಿಗೆ ತಿಳಿಸಿದರು. ಮನೆಯಲ್ಲಿ ಅವರು ನನ್ನನ್ನು ಹೊಡೆಯುತ್ತಿದ್ದರಿಂದ ನಾನು ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ‘ಇಲ್ಲಿ ನಾನೇ ಬಲಿಪಶು, ಯಾಕೆ ಹೊಡೆಯುತ್ತಿದ್ದೀಯಾ?’ ಎನ್ನುವಷ್ಟು ಗೊಂದಲದಲ್ಲಿದ್ದೆ. ಎರಡು ವರ್ಷಗಳ ಕಾಲ ಅದನ್ನು ಸಹಿಸಿಕೊಂಡೆ. ಸಂಬಂಧಿಕರಿಂದ, ನನ್ನ ಸ್ವಂತ ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋದೆ. ಆಗ ನನಗೆ 17 ವರ್ಷ ಎಂದು ಹೇಳಿದರು.

“ನಾನು ನನ್ನ ಜೀವನಕ್ಕೆ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಿದೆ. ನಾನು ದೆಹಲಿಗೆ ಓಡಿಹೋದೆ. ಆಗ ನನಗೆ ಕೇವಲ 17 ವರ್ಷ. ನಾನು ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. ತನ್ನ ತಾಯಿಯೊಂದಿಗೆ ರಾಜಿ ಮಾಡಿಕೊಂಡೆ. ಮತ್ತೆ ಮುಂಬೈಗೆ ತೆರಳಿದೆ. ವಿವಿಧ ಪಾತ್ರಗಳಿಗಾಗಿ ಆಡಿಷನ್ ಕೊಟ್ಟೆ. ನನ್ನ ಬಳಿ ಹಣ ಅಥವಾ ವಾಸಿಸಲು ನೆಲೆ ಇರಲಿಲ್ಲ. ನನ್ನ ಸ್ನೇಹಿತರ ಮನೆಯಲ್ಲಿ ಇರುತ್ತಿದ್ದೆ. ಸ್ವಲ್ಪ ಸಮಯದ ನಂತರ ಧಾರಾವಾಹಿಯಲ್ಲಿ ನನಗೆ ಅವಕಾಶ ಸಿಕ್ಕಿತು. ಬಿಗ್ ಬಾಸ್ ಒಟಿಟಿಯಲ್ಲಿಯೂ ಬಂದೆ. ನನಗೆ ಬಿಗ್‌ಬಾಸ್‌ ಖ್ಯಾತಿ ಜತೆ ಮನ್ನಣೆಯೂ ಕೊಟ್ಟಿತುʼʼಎಂದರು.

“ಕೈಯಲ್ಲಿ ಯಾವುದೇ ಕೆಲಸವಿಲ್ಲದೆ, ನಾನು ಉತ್ತಮವಾದ ವಸ್ತುಗಳನ್ನು ಪ್ರಯೋಗಿಸಲು ಪ್ರಾರಂಭಿಸಿದೆ. ನಾನು ನನ್ನ ಪ್ರಯೋಗಾತ್ಮಕ ಫ್ಯಾಷನ್‌ಗಳಿಂದ ಟ್ರೋಲ್‌ಗೆ ಒಳಗಾದೆʼʼಎಂದು ಹೇಳಿಕೊಂಡಿದ್ದಾರೆ.

Exit mobile version