Site icon Vistara News

Urfi Javed | ನನಗೆ ಬಟ್ಟೆಯ ಅಲರ್ಜಿ ಇದೆ: ಅರೆ ಬೆತ್ತಲೆಯ ಹಿಂದಿನ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್‌!

Urfi Javed

ಬೆಂಗಳೂರು : ಫ್ಯಾಷನ್‌ ಐಕಾನ್‌ ಉರ್ಫಿ ಜಾವೇದ್ (Urfi Javed ) ಅವರು ತಮ್ಮ ಬಟ್ಟೆ ವಿಚಾರಕ್ಕಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಉರ್ಫಿ ವಿರುದ್ಧ ದೂರು ದಾಖಲಾಗಿದೆ. ಇದೀಗ ಬಟ್ಟೆಯ ವಿಚಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೆ ನೀಡಿದ್ದು, ತನಗೆ ಬಟ್ಟೆಯ ಅಲರ್ಜಿ ಇದೆ. ಆದ್ದರಿಂದ ನಾನು ಪೂರ್ತಿ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಇನ್‌ಸ್ಟಾ ಸ್ಟೋರಿಯಲ್ಲಿ ಅಲರ್ಜಿ ಆಗಿರುವ ಫೋಟೊ ಶೇರ್‌ ಮಾಡಿ, ʻʻನಾನು ಬಟ್ಟೆಗಳನ್ನು ಏಕೆ ಧರಿಸುವುದಿಲ್ಲ ಎಂದು ಈಗ ನಿಮಗೆ ತಿಳಿದಿದೆ. ಅಲ್ಲವೆ?ʼʼ ಎಂದು ಪ್ರಶ್ನಿಸಿದ್ದಾರೆ. ʻʻನಾನು ಆಗಾಗ ಅರೆ ಬೆತ್ತಲೆ ಆಗುವ ಕಾರಣವಿಷ್ಟೇ ನನಗೆ ಉಣ್ಣೆಯ ಬಟ್ಟೆಗಳನ್ನು ಧರಿಸಿದಾಗ ಈ ರೀತಿ ಅಲರ್ಜಿ ಆಗುತ್ತದೆ. ಪ್ರೂಫ್‌ ಕೂಡ ನಾನು ಫೋಟೊ ಮೂಲಕ ನಿಮಗೆ ಕೊಡುತ್ತಿದ್ದೇನೆ. ನನ್ನ ದೇಹಕ್ಕೆ ಬಟ್ಟೆ ಅಲರ್ಜಿ,” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | Urfi Javed | ʻಬೇಷರಮ್‌ ರಂಗ್‌ʼ ಹಾಡಿಗೆ ಕೇಸರಿ ಬಣ್ಣದ ತುಂಡು ಬಟ್ಟೆ ಧರಿಸಿ ಕ್ಯಾಟ್‌ ವಾಕ್‌ ಮಾಡಿದ ಉರ್ಫಿ!

Urfi Javed

ಉರ್ಫಿ ಜಾವೇದ್‌ (Urfi Javed ) ಕೇಸರಿ ಕಟ್-ಔಟ್ ಟಾಪ್‌ನಲ್ಲಿ ʻಬೇಷರಮ್‌ ರಂಗ್‌ʼ ಸಾಂಗ್‌ಗೆ ಕ್ಯಾಟ್‌ ವಾಕ್‌ ಮಾಡಿರುವ ವಿಡಿಯೊ ಇನ್‌ ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರು. ಉರ್ಫಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ನಟಿ ಕೇಸರಿ ಕಟ್-ಔಟ್ ಟಾಪ್ ಮತ್ತು ಮ್ಯಾಚಿಂಗ್ ಹೀಲ್ಸ್‌ನೊಂದಿಗೆ ಜೋಡಿಯಾಗಿರುವ ಸಣ್ಣ ಸ್ಕರ್ಟ್‌ನಲ್ಲಿ ಕ್ಯಾಟ್‌ ವಾಕ್‌ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಊರ್ಫಿಗೆ ಕ್ಲಾಸ್‌ ತೆಗೆದುಕೊಂಡಿದ್ದರು.

ಬಿಜೆಪಿ ಮಹಾರಾಷ್ಟ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಅವರು ಉರ್ಫಿ ವಿರುದ್ಧ “ಇವರು ಮುಂಬೈನ ಬೀದಿಗಳಲ್ಲಿ ದೇಹವನ್ನು ಪ್ರದರ್ಶಿಸುತ್ತಾ ತಿರುಗಾಡುತ್ತಿದ್ದಾರೆ” ಎಂದು ದೂರು ದಾಖಲಿಸಿದ್ದರು. ಇದಕ್ಕೆ ಖಡಕ್‌ ಆಗಿ ಪ್ರತಿಕ್ರಿಯಿಸಿದ ಉರ್ಫಿ “ಸಂವಿಧಾನದಲ್ಲಿ ಇದನ್ನು ತಡೆಯುವ ಯಾವುದೇ ವಿಧಿ ಇಲ್ಲ’ ಎಂದಿದ್ದರು.

ಇದನ್ನೂ ಓದಿ | Urfi Javed | ʻʻನನ್ನನ್ನು ಯಾರೂ ಬಂಧಿಸಿಲ್ಲ, ಆಗಿದ್ದೇ ಬೇರೆʼʼ: ಉರ್ಫಿ ಜಾವೇದ್‌ ಹೇಳಿದ್ದೇನು?

Exit mobile version