ಬೆಂಗಳೂರು: ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Urfi Javed) ಮತ್ತು ನೀಲಿ ತಾರೆ ಸನ್ನಿ ಲಿಯೋನ್ ಮಾರ್ಚ್ 26 ರಂದು ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಇಬ್ಬರೂ ಒಟ್ಟಿಗೆ ಫೋಸ್ ನೀಡಿದ್ದಾರೆ. ಇದೀಗ ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಕೆಲವು ಅಭಿಮಾನಿಗಳು ಸಂಭ್ರಮದಿಂದ ಕಿರುಚಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮಾಧ್ಯಮಗಳು ಹಂಚಿಕೊಂಡ ವಿಡಿಯೊದಲ್ಲಿ, ಉರ್ಫಿ ಜಾವೇದ್ ಮತ್ತು ಸನ್ನಿ ಲಿಯೋನ್ ಸ್ಟೈಲಿಶ್ ಬಟ್ಟೆಗಳಲ್ಲಿ ಒಟ್ಟಿಗೆ ಪೋಸ್ ನೀಡುತ್ತಿದ್ದಾರೆ. ಸಿಲ್ವರ್ ಹೀಲ್ಸ್‌ನೊಂದಿಗೆ ಸಿಲ್ವರ್ ಆಫ್ ಶೋಲ್ಡರ್ ಗೌನ್‌ನಲ್ಲಿ ಸನ್ನಿ ಸುಂದರವಾಗಿ ಕಾಣುತ್ತಿದ್ದಾರೆ. ಎಂದಿನಂತೆ ಉರ್ಫಿ ವಿಭಿನ್ನ ರೀತಿಯ ಉಡುಗೆಯನ್ನು ಧರಿಸಿಕೊಂಡಿದ್ದಾರೆ.
ಸನ್ನಿ ಮತ್ತು ಉರ್ಫಿ ನಗುತ್ತಿರುವ ಮತ್ತು ಒಬ್ಬರನ್ನೊಬ್ಬರು ಹಿಡಿದು ಕೊಂಡಿದ್ದಾರೆ. ಸನ್ನಿ ಮತ್ತು ಉರ್ಫಿಯ ಒಟ್ಟಿಗೆ ಇರುವ ಫೋಟೊವನ್ನು ನೋಡಿ ʻʻಇಬ್ಬರೂ ನನ್ನ ಮೆಚ್ಚಿನವರುʼʼಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ‘ಬಾರ್ಬಿ ಡಾಲ್ ಬಾರ್ಬಿ ಡಾಲ್’ ಎಂದು ಕಿರುಚಾಡಿದ್ದಾರೆ.
ಇದನ್ನೂ ಓದಿ: Urfi Javed: ರಿಲೇಶನ್‌ಶಿಪ್‌ನಲ್ಲಿದ್ದಾರಾ ಉರ್ಫಿ ಜಾವೇದ್? ಪೋಸ್ಟ್‌ನಲ್ಲಿ ನಟಿ ಹೇಳಿದ್ದೇನು?
ವೈರಲ್ ಪೋಸ್ಟ್
ಬಾಲಿವುಡ್ ಖ್ಯಾತ ನಟ ಅರ್ಜುನ್ ಕಪೂರ್ ಜತೆ ಉರ್ಫಿ ಜಾವೇದ್ ಫೋಟೊ ತೆಗೆಸಿಕೊಂಡಿದ್ದು, ಸಖತ್ ಸುದ್ದಿಯಾಗಿದ್ದರು. ಆ ವಿಡಿyಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇದೀಗ ಸನ್ನಿ ಜತೆಗೆ ನಟಿ ಕಾಣಿಸಿಕೊಂಡಿದ್ದು, ಅತೀ ಶೀಘ್ರದಲ್ಲೇ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ. ಯಾವಾಗ ಮದುವೆ ಎಂದು ಕೇಳಿದ ಪ್ರಶ್ನೆಗೆ ‘ಅವನು ಯಾವಾಗ ಮದುವೆ ಆಗುತ್ತಾನೋ ಆವಾಗ. ಈಗಾಗಲೇ ಅವನಿಗೆ ಎರಡು ಮದುವೆ ಆಗಿದೆ. ಈಗಾಗಲೇ ಡಿವೋರ್ಸ್ ಕೂಡ ಮಾಡಿಕೊಂಡಿದ್ದಾನೆ” ಎಂದು ಹೇಳಿಕೊಂಡಿದ್ದಾರೆ.