Site icon Vistara News

Urfi Javed: ಉರ್ಫಿಯ ಮಾನ ಮುಚ್ಚಿದ ಕಿವಿ ಹಣ್ಣು; ರುಚಿ ನೋಡುವ ಭಾಗ್ಯ ಇಲ್ವಲ್ಲಾ ಎಂದು ಬೇಸರಿಸಿದ ನೆಟ್ಟಿಗರು!

Urfi Javed top made of kiwis Fruits

ಬೆಂಗಳೂರು: ಚಿತ್ರವಿಚಿತ್ರ ಸ್ಟೈಲ್‌ಗಳಿಂದ ಫ್ಯಾಷನ್‌ ಐಕಾನ್‌ ಎಂತಲೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Urfi Javed) ಇಷ್ಟು ದಿನ ಉಡುಪಿನಿಂದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಹಣ್ಣುಗಳಿಂದ ಮಾನ ಮುಚ್ಚಿಕೊಂಡು ಸಖತ್‌ ಸುದ್ದಿಯಾಗಿದ್ದಾರೆ. ಕಿವಿ ಹಣ್ಣಿನಿಂದ ಮಾಡಿದ ಟಾಪ್‌ನಲ್ಲಿ ಪೋಸ್ ಮಾಡುತ್ತಿರುವ ಹೊಸ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.

ಉರ್ಫಿ ಅವರು ಕಿವಿ ತಿನ್ನುತ್ತಿರುವುದರೊಂದಿಗೆ ಹಣ್ಣಿನಿಂದ ಮಾಡಿದ ಟಾಪ್‌ನಲ್ಲಿ ಮಾನ ಮುಚ್ಚಿಕೊಂಡಿದ್ದಾರೆ. ಪೋಸ್ಟ್‌ಗೆ ಕ್ಯಾಪ್ಷನ್‌ ನೀಡಿ ʻʻಈ ಟಾಪ್ ಅನ್ನು ಯಾವುದರಿಂದ ಮಾಡಲಾಗಿದೆ ಎಂದು ಊಹಿಸಿ?” ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬಾರಿ ಕೂಡ ಉರ್ಫಿ ನೆಟ್ಟಿಗರಿಂದ ಕ್ಲಾಸ್‌ ಜತೆ ಪ್ರಶಂಸೆಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಒಬ್ಬರು “ನಾನು ಈ ಹೊಸ ಸಸ್ಯಾಹಾರಿ ಫ್ಯಾಷನ್ ಅನ್ನು ಇಷ್ಟಪಡುತ್ತೇನೆ” ಎಂದು ಕಮೆಂಟ್‌ ಮಾಡಿದರೆ ಇನ್ನೊಬ್ಬರು “ಈ ಹುಡುಗಿ ಹಣಕ್ಕಾಗಿ ಏನು ಬೇಕಾದರೂ ಮಾಡಬಹುದು.” ಎಂದಿದ್ದಾರೆ. ಮತ್ತೊಬ್ಬರು ʻʻಈ ರೀತಿಯ ಆಹಾರವನ್ನು ಅವಮಾನಿಸಬೇಡಿ, ಸ್ವಲ್ಪ ನಾಚಿಕೆ ಇರಲಿ” ಎಂದು ಒಬ್ಬರು ಬರೆದಿದ್ದಾರೆ. ‘ಇಷ್ಟೊಂದು ದುಬಾರಿ ಹಣ್ಣಿನ ರುಚಿ ನೋಡುವ ಭಾಗ್ಯ ನಮಗಿಲ್ಲ. ನೀವು ಯಾಕೆ ವೇಸ್ಟ್‌ ಮಾಡುವುದು’ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Urfi Javed: ಬೀದಿ ನಾಯಿಯನ್ನು ಮುದ್ದಿಸಿದ ಉರ್ಫಿ, ವಿಚಿತ್ರ ಸ್ಟೈಲಿಂಗ್ ಮಾಡಲು ತಲೆ ಹೇಗೆ ವರ್ಕ್‌ ಆಗುತ್ತೆ ಅಂದ್ರು ನೆಟ್ಟಿಗರು?

ಉರ್ಫಿ ಜಾವೇದ್‌ ಪೋಸ್ಟ್‌

ಕೆಲವು ದಿನಗಳ ಹಿಂದೆ, ಉರ್ಫಿ ತನ್ನ ಸ್ತನಗಳನ್ನು ತನ್ನ ಕೈಗಳಿಂದ ಮುಚ್ಚಿಕೊಂಡಿದ್ದ ಟಾಪ್‌ಲೆಸ್ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್ ಆಗಿದ್ದರು. ಸಾರ್ವಜನಿಕವಾಗಿ ನಟಿ ಅಶ್ಲೀಲವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರವಾಗಿ ಅದೆಷ್ಟೋ ಬಾರಿ ನಟಿಯ ವಿರುದ್ಧ ಹಲವರು ದೂರು ದಾಖಲಿಸಿದ್ದಾರೆ. ಕೆಲಸದ ಮುಂಭಾಗದಲ್ಲಿ, ಖತ್ರೋನ್ ಕೆ ಖಿಲಾಡಿಯ ಮುಂಬರುವ ಸೀಸನ್‌ಗಾಗಿ ಉರ್ಫಿ ಜಾವೇದ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ. ಇದುವರೆಗೆ ಅವರು ಪ್ರದರ್ಶನದಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Exit mobile version