ಬೆಂಗಳೂರು: ಹಿಂದಿ ಬಿಗ್‌ಬಾಸ್ ಕ್ವೀನ್ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಜಾಲತಾಣಗಳಲ್ಲಿ ಸದಾ ಮಿಂಚುತ್ತಿರುವಂತಹ ನಟಿ. ಫ್ಯಾಷನ್ ಐಕಾನ್ ಉರ್ಫಿ ಜಾವೇದ್ ತಮ್ಮ ಉಡುಗೆಗಳಿಂದ ಸಖತ್ ಸುದ್ದಿಯಲ್ಲಿರುತ್ತಾರೆ. ನಟಿ ಇತ್ತೀಚೆಗೆ ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ನಟ ಅರ್ಜುನ್ ಕಪೂರ್ ಅವರೊಂದಿಗೆ ಕಾಣಿಸಿಕೊಂಡು ಸಖತ್ ಸುದ್ದಿಯಲ್ಲಿದ್ದರು. ಇದೀಗ ಉರ್ಫಿ ಬಿದಿರಿನ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಸಖತ್ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಈ ಬಗ್ಗೆ ನಟಿ ಮಾತನಾಡಿ ʻʻಈ ಉಡುಪನ್ನು ಬಿದಿರಿನಿಂದ ತಯಾರಿಸಿದ್ದೇನೆ. ಈ ಕಲೆ ನಶಿಸಿ ಹೋಗುತ್ತಿದೆ. ಈ ರೀತಿ ಬಿದಿರಿನಿಂದ ಪಾತ್ರೆಗಳು, ಕುರ್ಚಿಗಳು, ಟೇಬಲ್‌ಗಳನ್ನು ಕುಶಲಕರ್ಮಿಗಳು ತಯಾರಿಸುವಾಗ ನನಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ.,ʼ ಎಂದು ತಮ್ಮ ವಿಡಿಯೊಗೆ ಕ್ಯಾಪ್ಷನ್ ನೀಡಿದ್ದಾರೆ.
ಇದನ್ನೂ ಓದಿ: Urfi Javed: ಇಲ್ಲಿದೆ ಉರ್ಫಿ ಜಾವೇದ್ ಜೀವನ ಚಿತ್ರ
ಉರ್ಫಿ ವಿಡಿಯೊ ವೈರಲ್ ಆಗುತ್ತದ್ದಂತೆ ನೆಟ್ಟಿಗರು ಕಮೆಂಟ್ ಮೂಲಕ ʻʻಇದೊಂದು ನೋಡುವುದು ಬಾಕಿ ಇತ್ತುʼʼ ಎಂದು ಹೇಳುತ್ತಿದ್ದಾರೆ. ಇನ್ನೊಬ್ಬರು ಉರ್ಫಿಯ ಕ್ರಿಯೇಟಿವಿಟಿಗೆ ಮೆಚ್ಚಿಗೆ ಸೂಚಿಸಿದ್ದಾರೆ. ಉರ್ಫಿ ಕೆಲವು ದಿನಗಳ ಹಿಂದೆಯಷ್ಟೇ ಮ್ಯಾಗಜಿನ್‌ಗಾಗಿ ಫೋಟೊಶೂಟ್ ಮಾಡಿಸಿಕೊಂಡಿದ್ದರು. ಅವರ ಫೋಟೊ ಶೂಟ್ ಬಗ್ಗೆ, ಫ್ಯಾಶನ್ ಡಿಸೈನರ್ ಅನಿತಾ ಶ್ರಾಫ್ ಅದಾಜಾನಿಯಾ (Anaita Shroff Adajania) ಇನ್‌ಸ್ಟಾದಲ್ಲಿ ಉರ್ಫಿಗಿರುವ ಫ್ಯಾಷನ್ ಆಸಕ್ತಿ ಬಗ್ಗೆ ಹೊಗಳಿದ್ದರು.