Site icon Vistara News

Urfi Javed | ಲೇಖಕ ಚೇತನ್‌ ಭಗತ್‌ ಮೇಲೆ ಗರಂ ಆದ ಉರ್ಫಿ ಜಾವೇದ್‌: ವೈರಲ್‌ ಆಯ್ತು ಸ್ಕ್ರೀನ್‌ ಶಾಟ್‌!

Urfi Javed

ಬೆಂಗಳೂರು: ಉರ್ಫಿ ಜಾವೇದ್‌ (Urfi Javed) ತಮ್ಮ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಲೇಖಕ ಚೇತನ್‌ ಭಗತ್‌ ಅವರು ಉರ್ಫಿ ಕುರಿತಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದೇ ವಿಚಾರವನ್ನು ಇಟ್ಟುಕೊಂಡು ಉರ್ಫಿ ಜಾವೇದ್‌ ಗರಂ ಆಗಿದ್ದಾರೆ. ಚೇತನ್ ಭಗತ್ ಅವರ ಮೀಟು ಆರೋಪದ ವೇಳೆಯಲ್ಲಿ ಹರಿದಾಡಿದ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಉರ್ಫಿ ಮತ್ತೆ ಶೇರ್ ಮಾಡಿದ್ದಾರೆ.

ಚೇತನ್‌ ಭಗತ್‌ ಕಾರ್ಯಕ್ರಮವೊಂದರಲ್ಲಿ ಯುವಕರ ಬಗ್ಗೆ ಮಾತನಾಡುವಾಗ ʻʻಈಗಿನ ಯುವಕರು ಮೊಬೈಲ್‌ಗೆ ಅಡಿಕ್ಟ್‌ ಆಗಿದ್ದಾರೆ. ಬಹಳ ಹೊತ್ತು ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಉರ್ಫಿ ಜಾವೇದ್‌ ಕಾಸ್ಟ್ಯೂಮ್‌ಗೆ ಲೈಕ್‌ ಹಾಗೂ ಕಮೆಂಟ್‌ ಮಾಡುವುದರಲ್ಲಿಯೇ ದಿನಗಳೆಯುತ್ತಾರೆ. ಅದು ನಿಮ್ಮ ಅಧ್ಯಯನಗಳಲ್ಲಿ ಬರುವುದಿಲ್ಲ. ಯಾವುದೇ ಸಂದರ್ಶನದಲ್ಲಿ ನೀವು ಹೋದಾಗ ಅವರ ಕುರಿತು ಪ್ರಶ್ನೆ ಕೇಳುವುದಿಲ್ಲʼʼಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ | Urfi Javed | ʻಭಾರತದಿಂದ ಹೊರಗಟ್ಟಿʼ ಅಂದ್ರು ನೆಟ್ಟಿಗರು: ಬೇಕಾಬಿಟ್ಟಿ ಡ್ರೆಸ್‌ ಹಾಕುವ ಉರ್ಫಿಗೆ ವಾರ್ನಿಂಗ್‌!

ಇದರ ಬಗ್ಗೆ ಉರ್ಫಿ ಗರಂ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಚೇತನ್‌ ಭಗತ್‌ ಅವರಿಗೆ ಉರ್ಫಿ ಖಡಕ್‌ ಉತ್ತರವನ್ನು ನೀಡಿದ್ದಾರೆ ʻʻಕಾರ್ಯಕ್ರಮದಲ್ಲಿ ನನ್ನ ಹೆಸರು ಹೇಳಬಾರದಿತ್ತು. ಯುವಕರ ಮನಸ್ಸನ್ನು ನಾನು ಹಾಳು ಮಾಡಿಲ್ಲ. ನನ್ನ ಚಿಕ್ಕಪ್ಪನ ವಯಸ್ಸಿನ ಚೇತನ್‌ ಅವರು, ಈ ಹಿಂದೆ ಹುಡುಗರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿ ಮೀಟೂ ಆರೋಪಿಯಾಗಿದ್ದರು. ನನ್ನ ಬಟ್ಟೆಯ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಅವರಿಗಿಲ್ಲʼʼ ಎಂದು ಬರೆದುಕೊಂಡಿದ್ದಾರೆ.

Urfi Javed

ಈ ಬಗ್ಗೆ ಚೇತನ್‌ ಭಗತ್‌ ಪ್ರತಿಕ್ರಿಯೆ ನೀಡಿದ್ದು, ʻʻನಾನು ಹೇಳಿದ್ದು ಬೇರೆ ಅರ್ಥದಲ್ಲಾಗಿದೆ. ಸಮಯಕ್ಕೆ ಮೌಲ್ಯವನ್ನು ನೀಡಿ ಎಂದು ಯುವಕರಿಗೆ ಹೇಳಿದ್ದು. ನನ್ನ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ. ಉರ್ಫಿ ಬೇರೆ ರೀತಿಯಲ್ಲಿ ಈ ವಿಷಯವನ್ನು ತೆಗೆದುಕೊಂಡಿರುವುಕ್ಕೆ ವಿಷಾದವಿದೆʼʼ ಎಂದಿದ್ದಾರೆ.

ಇದನ್ನೂ ಓದಿ | Urfi Javed | ರಿಯಾಲಿಟಿ ಶೋದUrfi Javedತ್ತ ಮುಖ ಮಾಡಿದ ಉರ್ಫಿ ಜಾವೇದ್‌: ಟ್ರೋಲ್‌ ಆಗಿದ್ಯಾಕೆ?

Exit mobile version