ಬೆಂಗಳೂರು; ಉರ್ಫಿ ಜಾವೇದ್ (Urfi Javed) ಸದಾ ತಮ್ಮ ಔಟ್ ಫಿಟ್ ಕುರಿತು ಟ್ರೆಂಡ್‌ನಲ್ಲಿ ಇರುತ್ತಾರೆ. ಅನೇಕರು ಅವರನ್ನು ಟ್ರೋಲ್ ಮಾಡಿದರೆ, ಇತರರು ಅವರ ಫ್ಯಾಷನ್‌ಗೆ ಫಿದಾ ಆಗಿದ್ದಾರೆ. ಇದೀಗ ಉರ್ಫಿ ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದಿದ್ದಾರೆ. ಅನೇಕರು ಉರ್ಫಿ ಜತೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.
ಟಾಪ್‌ಲೆಸ್ ವಿಡಿಯೊ, ಫೋಟೊಗಳನ್ನು ಉರ್ಫಿ ಜಾವೇದ್ (Urfi Javed) ಹಂಚಿಕೊಳ್ಳುವುದು ಮೊದಲೇನಲ್ಲ. ಸಾಕಷ್ಟು ಬಾರಿ ತಮ್ಮ ಬಟ್ಟೆಯ ವಿಚಾರವಾಗಿ ಫ್ಯಾಷನ್ ಐಕಾನ್ ಎಂದೇ ಖ್ಯಾತಿ ಪಡೆದ ಉರ್ಫಿ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಉರ್ಫಿ ಜಾವೇದ್ ತನ್ನ ಫೋಟೊಶೂಟ್‌ನಿಂದ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರಿಸ್ಕ್ ಕಟ್-ಔಟ್ ಬಿಳಿಯ ಉಡುಪನ್ನು ಧರಿಸಿದ್ದಾರೆ. ಕೈಯಲ್ಲಿ ಕೆಂಪು ದುಪಟ್ಟಾವನ್ನು ಸಹ ಹಿಡಿದಿದ್ದಾರೆ.
ಈ ರೀತಿ ಟಾಪ್‌ಲೆಸ್ ಆದಂತಹ ಹಲವಾರು ವಿಡಿಯೊಗಳನ್ನು ನಟಿ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವಿಡಿಯೊಗಳಲ್ಲಿ ಟಾಪ್ ಲೆಸ್ ಆದರೆ ಕೆಲವಲ್ಲಿ ಬಾಟಮ್ ಲೆಸ್ ಆಗಿ, ಇನ್ನು ಕೆಲವಲ್ಲಿ ಬ್ಯಾಕ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಬಟ್ಟೆಯೇ ಇಲ್ಲದೆ, ವೈಯರ್, ಬಟ್ಟೆ ಒಣೆಸುವ ಕ್ಲಿಪ್, ಬ್ಲೇಡ್, ಪಿನ್ನುಗಳು, ಹೂವು ಸೇರಿ ಬೇರೆ ಬೇರೆ ವಸ್ತುಗಳನ್ನೇ ತೊಟ್ಟು ವಿಡಿಯೊ ಮಾಡುವಲ್ಲಿಯೂ ಉರ್ಫಿ ಫೇಮಸ್ ಆಗಿದ್ದಾರೆ.
ಇದನ್ನೂ ಓದಿ: Urfi Javed : ಟಾಪ್ ಬೇಡವೆಂದು ಬರೀ ಪ್ಯಾಂಟ್‌ನಲ್ಲಿ ಬಂದ ಉರ್ಫಿ! ಸಕತ್ ಹಾಟ್ ಎನ್ನುತ್ತಿದ್ದಾರೆ ನೆಟ್ಟಿಗರು
ಉರ್ಫಿ ಜಾವೇದ್ ಬದುಕಿನಲ್ಲಿ ಅನೇಕ ಕಹಿ ಘಟನೆಗಳು ಕೂಡ ನಡೆದಿವೆ. ಆ ಬಗ್ಗೆ ‘ಹ್ಯೂಮನ್ಸ್ ಆಫ್ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಬೆದರಿಕೆ ಕರೆಗಳು ಬಂದ ಕಾರಣ ಏಪ್ರಿಲ್ 16ರಂದು ಮತ್ತೊಮ್ಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಿಗ್ ಬಾಸ್ ಒಟಿಟಿಯಲ್ಲಿ ಉರ್ಫಿ ಜಾವೇದ್ ಕಾಣಿಸಿಕೊಂಡಿದ್ದರು. ಆ ಬಳಿಕ ಮೊದಲ ವಾರದಲ್ಲೇ ಈ ಕಾರ್ಯಕ್ರಮದಿಂದ ಹೊರಬಂದರು. ಆದರೆ ಬಳಿಕ ಉರ್ಫಿ ತನ್ನ ಫ್ಯಾಷನ್ ಮತ್ತು ಸ್ಟೈಲ್ನಿಂದ ಭಾರೀ ಜನಪ್ರಿಯತೆ ಪಡೆದಿದ್ದಾರೆ.