ಬೆಂಗಳೂರು: ಉರ್ಫಿ ಜಾವೇದ್ (Urfi Javed) ಆಗಾಗ ಟ್ರೋಲ್‌ಗೆ ಗುರಿಯಾಗುವುದು ಹೊಸತೇನಲ್ಲ. ಫ್ಯಾಷನ್ ಐಕಾನ್ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿ, ಅಮೃತಸರದ ಗೋಲ್ಡನ್ ಟೆಂಪಲ್‌ಗೆ ತನ್ನ ಸಹೋದರಿ ಡಾಲಿಯೊಂದಿಗೆ ಭೇಟಿ ಕೊಟ್ಟಿದ್ದಾರೆ. ಇದೀಗ ಉರ್ಫಿಯ ಈ ಹೊಸ ಅವತಾರಕ್ಕೆ ನೆಟ್ಟಿಗರು ಹಾಡಿ ಹೊಗಳಿದ್ದಾರೆ.
ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಭೇಟಿಯ ಕ್ಷಣಗಳನ್ನು ಉರ್ಫಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗುಲಾಬಿ ಬಣ್ಣದ ಸಾಂಪ್ರದಾಯಿಕ ಸಲ್ವಾರ್ ಸೂಟ್‌ನಲ್ಲಿ ಬೆರಗುಗೊಳಿಸಿದ್ದಾರೆ. ಪವಿತ್ರ ಸ್ಥಳದಲ್ಲಿ ಕೈ ಜೋಡಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೊ ಸಹ ಹಂಚಿಕೊಂಡಿದ್ದಾರೆ. ಅವರ ಫ್ಯಾನ್ಸ್ ಕಮೆಂಟ್ ಮೂಲಕ ʻಉರ್ಫಿ ಧಾರ್ಮಿಕಕ್ಕೂ ಸೈʼʼಎಂದು ಹಾಡಿ ಹೊಗಳಿದ್ದಾರೆ. ಇನ್ನೊಬ್ಬರು ʻʻಉರ್ಫಿ ಸುಂದರವಾಗಿ ಕಾಣುತ್ತಿದ್ದಾರೆʼʼಎಂದು ಕಮೆಂಟ್ ಮಾಡಿದ್ದಾರೆ.
ಉರ್ಫಿ ಜಾವೇದ್ ಅವರು ‘ಬಿಗ್ ಬಾಸ್ ಒಟಿಟಿ’ಯ ಬಳಿಕ ಖ್ಯಾತಿಯನ್ನು ಗಳಿಸಿದರು. ಉರ್ಫಿ ಜಾವೇದ್ ʼಬಿಗ್ ಬಾಸ್ ಒಟಿಟಿ’ಯಲ್ಲಿ ಭಾಗವಹಿಸಿದ ನಂತರ ಖ್ಯಾತಿ ಗಳಿಸಿದರು. ಹಲವಾರು ಟಿವಿ ಶೋಗಳಲ್ಲಿಯೂ ನಟಿಸಿದ್ದಾರೆ. ಅವರು ‘ಬಡೆ ಭಯ್ಯಾ ಕಿ ದುಲ್ಹನಿಯಾ’ ಚಿತ್ರದಲ್ಲಿ ಅವ್ನಿ ಪಾತ್ರವನ್ನು ಮರು ಸೃಷ್ಟಿಸುವ ಮೂಲಕ ಪ್ರವರ್ದಮಾನಕ್ಕೆ ಬಂದಿದ್ದರು. ಜತೆಗೆ ಹಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಎಂಟಿವಿ ಸ್ಪಿಲ್ಟ್‌ವಿಲ್ಲಾ ಸೀಸನ್-14 (MTV Splitsvilla-season 14)ರಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: Urfi Javed: ಬಂಧನದ ಬಗ್ಗೆ ‘ರೀಲ್’ ಬಿಟ್ಟ ಉರ್ಫಿಗೆ ಎದುರಾಯ್ತು ‘ರಿಯಲ್’ ಸಂಕಷ್ಟ!
ಬಂಧನದ ಬಗ್ಗೆ ‘ರೀಲ್’ ಬಿಟ್ಟಿದ್ದ ಉರ್ಫಿ
ಚಿತ್ರ-ವಿಚಿತ್ರ ಬಟ್ಟೆ ತೊಡುವ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್ (Urfi Javed) ಅವರನ್ನು ಪೊಲೀಸರು ಅರೆಸ್ಟ್ ಮಾಡುತ್ತಿರುವ ಫೇಕ್ ವಿಡಿಯೊ ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಮುಂಬೈ ಪೊಲೀಸರು ನಟಿಯ ವಿರುದ್ಧ ದೂರು ದಾಖಲಿಸಿದ್ದರು ʼʼಉರ್ಫಿ ಜಾವೇದ್ ಅವರನ್ನು ಬಂಧಿಸಲಾಗಿದೆ ಎನ್ನಲಾದ ವಿಡಿಯೊ ನಿಜವಲ್ಲ. ಫೇಕ್ ವಿಡಿಯೊ ಸೃಷ್ಟಿಸಿ (Fake arrest video) ಸಮವಸ್ತ್ರವನ್ನು ದುರುಪಯೋಗಪಡಿಸಿದ್ದಕ್ಕಾಗಿ ಉರ್ಫಿ ಜಾವೇದ್ ವಿರುದ್ಧ ದೂರು ದಾಖಲಿಸಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದರು.
ವೈರಲ್ ಆದ ವೀಡಿಯೊದಲ್ಲಿ ಉರ್ಫಿ ಜಾವೇದ್ ಅವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿತ್ತು. ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮೊಂದಿಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಾರೆ. ʼʼಈ ರೀತಿ ತುಂಡು ತುಂಡು ಬಟ್ಟೆಯನ್ನು ಹಾಕಿಕೊಂಡು ಯಾರು ಓಡಾಡುತ್ತಾರೆ?ʼʼ ಎಂದು ಅಧಿಕಾರಿ ಉರ್ಫಿಗೆ ಪ್ರಶ್ನೆ ಕೇಳುತ್ತಾರೆ. ಇದಾದ ಬಳಿಕ ಅಧಿಕಾರಿಗಳು ಏನು ಹೇಳಬೇಕೆಂದರೂ ಪೊಲೀಸ್ ಠಾಣೆಯಲ್ಲಿ ಹೇಳಬಹುದು ಎಂದು ವಾದ ವಿವಾದದ ನಂತರ ಉರ್ಫಿಯನ್ನು ಕಸ್ಟಡಿಗೆ ಕರೆದೊಯ್ಯುತ್ತಾರೆ. ವಿಡಿಯೊದಲ್ಲಿ ಉರ್ಫಿ ಒಂದು ಜೊತೆ ಡೆನಿಮ್ ಪ್ಯಾಂಟ್‌ನೊಂದಿಗೆ ಬ್ಯಾಕ್‌ಲೆಸ್ ಕೆಂಪು ಟಾಪ್ ಧರಿಸಿದ್ದರು.