Site icon Vistara News

Urfi Javed: ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ನ್ನೇ ಬಟ್ಟೆ ಮಾಡಿಕೊಂಡ ಉರ್ಫಿ: ಕಾರಣವೇನು?

Urfi Javed Zomato Gift Basket for Dress

ಬೆಂಗಳೂರು: ಫ್ಯಾಷನ್‌ ಐಕಾನ್‌ ಎಂತಲೇ ಕರೆಯಲ್ಪಡುವ ಉರ್ಫಿ ಜಾವೇದ್‌ (Urfi Javed) ಮಾರ್ಕೆಟಿಂಗ್ ಸ್ಟಂಟ್‌ ಮಾಡುವುದರಲ್ಲಿ ಎತ್ತಿದ ಕೈ. ಇತ್ತೀಚೆಗಷ್ಟೇ ಊರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್​​ ಒಂದರಲ್ಲಿ ತನ್ನ ಬಟ್ಟೆಯಿಂದಾಗಿ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ಸೋಷಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು. ಜತೆಗೆ ಈ ಪೋಸ್ಟ್​​​ನಲ್ಲಿ ಜೊಮ್ಯಾಟೊವನ್ನು ಕೂಡ ಟ್ಯಾಗ್​​ ಮಾಡಲಾಗಿತ್ತು. ನಟಿ ಊರ್ಫಿ ಪೋಸ್ಟ್​​​​ಗೆ ಜೊಮ್ಯಾಟೊ ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದೆ. ಜತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ. ಇದೀಗ ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ ಬಾಸ್ಕೆಟ್‌ವನ್ನು ಬಟ್ಟೆಯಾಗಿ ಉಪಯೋಗಿಸಿಕೊಂಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಪ್ರವೇಶ ನೀಡದೇ ಇದಿದ್ದಕ್ಕೆ ಉರ್ಫಿ ಹೇಳಿದ್ದೇನು?

ʻʻಇದು ನಿಜವಾಗಿಯೂ 21ನೇ ಶತಮಾನದ ಮುಂಬೈಯೇ?!! ರೆಸ್ಟೋರೆಂಟ್‌ನಲ್ಲಿ ನನಗೆ ಪ್ರವೇಶ ನೀಡಿಲ್ಲ. ನನ್ನ ಫ್ಯಾಷನ್ ಆಯ್ಕೆಗಳನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಅದಕ್ಕಾಗಿ ನನ್ನನ್ನು ವಿಭಿನ್ನವಾಗಿ ಪರಿಗಣಿಸುವುದು ಅಲ್ಲ. ಕೆಲವು ಕುಂಟು ನೆಪಗಳನ್ನು ನೀಡಬೇಡಿʼʼ ಜೊಮ್ಯಾಟೊ ಟ್ಯಾಗ್‌ ಮಾಡಿ ಉರ್ಫಿ ಬರೆದಿದ್ದಾರೆ.

ಇದನ್ನೂ ಓದಿ: Urfi Javed: ತನ್ನ ಎಡಗೈಯಿಂದ ಎದೆ ಭಾಗ ಮುಚ್ಚಿಕೊಂಡ ಉರ್ಫಿ: ಕಾನೂನು ಎಲ್ಲಿದೆ ಎಂದು ನೆಟ್ಟಿಗರ ಆಕ್ರೋಶ!

ರೆಸ್ಟೋರೆಂಟ್‌ನಲ್ಲಿ ಉರ್ಫಿಗೆ ಪ್ರವೇಶ ನೀಡದೇ ಇರುವ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಅವರನ್ನು ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ‘ನಿಮ್ಮ ಡ್ರೆಸ್ ಸರಿಯಾಗಿಲ್ಲ, ಅವರಿಗೆ ನೋಡಲು ಮುಜುಗರ ಆಗಿ ಒಳಗಡೆ ಬರುವುದು ಬೇಡ ಎಂದಿರಬೇಕು’ ಎಂದು ಒಬ್ಬರು ಕಾಮೆಂಟ್‌ ಮಾಡಿದರೆ, ಮತ್ತೊಬ್ಬರು ʻʻಸರಿಯಾಗಿ ಡ್ರೆಸ್ ಹಾಕುವುದನ್ನು ಕಲಿತುಕೊಳ್ಳಿʼʼ ಎಂದಿದ್ದಾರೆ.

Exit mobile version