Site icon Vistara News

Urfi Javed | ರೆಕ್ಕೆಗಳಿಂದ ಮಾನ ಮುಚ್ಚಿಕೊಂಡ ಉರ್ಫಿ ಜಾವೇದ್‌: ಪ್ರತಿ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ ಎಂದ ನೆಟ್ಟಿಗರು!

Urfi Javed

ಬೆಂಗಳೂರು : ಫ್ಯಾಷನ್‌ ಐಕಾನ್‌ ಎಂತಲೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್‌ (Urfi Javed) ವಿರುದ್ಧ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಎರಡು ದಿನಗಳ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್‌ಗೆ ಸಮನ್ಸ್ ನೀಡಿದ್ದರು. ಇದರ ಬೆನ್ನಲೇ ಇದೀಗ ಉರ್ಫಿ ಹೊಸ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ತಮ್ಮ ಹೊಸ ಅವತಾರವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ, ಇದರಲ್ಲಿ ಉರ್ಫಿ ಎರಡು ರೆಕ್ಕೆಗಳಿಂದ ತಮ್ಮ ಮಾನ ಮುಚ್ಚಿಕೊಂಡಿದ್ದಾರೆ. ಎಂದಿನಂತೆ ನೆಟಿಜನ್‌ಗಳು ಅವರ ಪೋಸ್ಟ್‌ಗೆ ಬೇಕಾಬಿಟ್ಟಿ ಕಮೆಂಟ್‌ ಮಾಡಿದ್ದಾರೆ. ಅವರ ಅಭಿಮಾನಿಯೊಬ್ಬರು “ಪ್ರತಿ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ. ಅವಳು ಮಾತ್ರ ಅವುಗಳನ್ನು ಹರಡಬೇಕು ಮತ್ತು ಅವಳ ಕನಸುಗಳನ್ನು ನನಸಾಗಿಸಬೇಕು, ಚೆನ್ನಾಗಿ ಮಾಡಿದ್ದಾಳೆ ಉರ್ಫಿ ಸಿಸ್” ಎಂದು ಕಮೆಂಟ್‌ ಮಾಡಿದ್ದಾರೆ ಇನ್ನೊಬ್ಬರು “ಉರ್ಫಿ ಮಹಿಳೆಯರ ಗೌರವವನ್ನು ಕುಗ್ಗಿಸುವಂತೆ ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ | Urfi Javed | ನಮ್ಮ ದೇಶದ ಹುಡುಗಿಯರು ಉರ್ಫಿ ನೋಡಿ ಕಲಿಯಬೇಕು: ರ್‍ಯಾಪರ್‌ ಯೋ ಯೋ ಹನಿ ಸಿಂಗ್

ನಟಿ ಉರ್ಫಿ ಜಾವೇದ್ ಅವರು ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದಾರೆ. ಅದಕ್ಕೂ ಮುನ್ನ ತಮ್ಮಿಂದ ಯಾವುದೇ ತಪ್ಪು ಆಗಿಲ್ಲ ಎಂದು ಮನದಟ್ಟು ಮಾಡಲು ವಿಚಾರಣೆಗೂ ಖುದ್ದಾಗಿ ಹೋಗಿದ್ದಾರೆ. 

ರ್‍ಯಾಪರ್‌ ಹಾಗೂ ಗಾಯಕ ಯೋ ಯೋ ಹನಿ ಸಿಂಗ್ ಕೂಡ ಉರ್ಫಿ ಅವತಾರಕ್ಕೆ ಅಭಿಮಾನಿಯಾಗಿ ಹೇಳಿಕೆ ನೀಡಿದ್ದರು. ಸಂದರ್ಶನದಲ್ಲಿ ಪ್ರಚಾರ ವೇಳೆ ಉರ್ಫಿಯನ್ನು ‘ಬೋಲ್ಡ್ ಮತ್ತು ಬ್ರೇವ್’ ಎಂದು ಕರೆದಿದ್ದಾರೆ. ಹನಿ ಸಿಂಗ್ ಮಾತನಾಡಿ ʻʻಉರ್ಫಿ ಜಾವೇದ್​ ನನಗೆ ತುಂಬ ಇಷ್ಟ. ಅವರು ತುಂಬ ಧೈರ್ಯಶಾಲಿ. ಅವರು ತಮ್ಮದೇ ರೀತಿಯಲ್ಲಿ ಬದುಕಲು ಬಯಸುತ್ತಾರೆ. ನಮ್ಮ ದೇಶದ ಎಲ್ಲ ಹುಡುಗಿಯರು ಉರ್ಫಿಯನ್ನು ನೋಡಿ ಕಲಿಯಬೇಕು. ನೀವು ಎಲ್ಲಿಂದ ಬಂದಿದ್ದೀರಿ ಮತ್ತು ನೀವು ಯಾವ ಧರ್ಮ, ಜಾತಿ ಅಥವಾ ಯಾವ ಮನೆಯವರು ಎಂಬುದನ್ನು ಲೆಕ್ಕಿಸದೆ ಯಾರಿಗೂ ಭಯಪಡದೆ, ನಿಮ್ಮ ಹೃದಯದಲ್ಲಿ ಏನು ಬರುತ್ತದೋ ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾಡಿ. ನಿಮ್ಮ ಹೃದಯ ಹೇಳುವುದನ್ನು ಯಾರಿಗೂ ಹೆದರದೆ ಮಾಡಿʼʼ ಎಂದಿದ್ದಾರೆ.

ಇದನ್ನೂ ಓದಿ | Urfi Javed | ನನಗೆ ಬಟ್ಟೆಯ ಅಲರ್ಜಿ ಇದೆ: ಅರೆ ಬೆತ್ತಲೆಯ ಹಿಂದಿನ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್‌!

Exit mobile version