Site icon Vistara News

Urfi Javed: ಇದೇ ಮೊದಲ ಬಾರಿಗೆ ಉರ್ಫಿ ಔಟ್‌ಫಿಟ್‌ಗೆ ಭರಪೂರ ಮೆಚ್ಚುಗೆ; ನೇಹಾ ಧೂಪಿಯಾ ಹೇಳಿದ್ದೇನು?

Urfi Javed out in cute jacket

ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡ ಬಳಿಕ ಫ್ಯಾಷನ್‌ ಐಕಾನ್‌ ಎಂತಲೇ ಖ್ಯಾತಿ ಪಡೆದ ಉರ್ಫಿ ಜಾವೇದ್ (Urfi Javed) ಯಾವಾಗಲೂ ತಮ್ಮ ಉಡುಪಿನ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಆಗಾಗ ಟ್ರೋಲ್‌ಗೆ ಗುರಿಯಾಗುವ ಉರ್ಫಿ ಈ ಬಾರಿ ತಮ್ಮ ಬಟ್ಟೆಯ ಬಗ್ಗೆ ಮೆಚ್ಚುಗೆ ಪಡೆಯುತ್ತಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ನೇಹಾ ಧೂಪಿಯಾ ಅವರು ಈ ಬಟ್ಟೆ ನೋಡಿ ಇಷ್ಟಪಟ್ಟಿದ್ದಾರೆ. ‘ಇದು ತುಂಬ ಕ್ಯೂಟ್​ ಆಗಿದೆ’ ಎಂದು ಅವರು ಕಮೆಂಟ್​ ಮಾಡಿದ್ದಾರೆ.

ಮೇ 30ರಂದು ಉರ್ಫಿ ಜಾವೇದ್ ಮುಂಬೈಗೆ ಶೂಟಿಂಗ್‌ಗೆಂದು ಹೊರಟಿದ್ದರು. ಗೊಂಬೆಗಳ ಜಾಕೆಟ್ ಜತೆಗೆ ಹಸಿರು ಕೋ-ಆರ್ಡ್ ಸೆಟ್ ಧರಿಸಿ ನಟಿ ಕಾಣಿಸಿಕೊಂಡರು. ಮಕ್ಕಳಿಗಂತೂ ಈ ಉಡುಗೆ ಸಖತ್​ ಇಷ್ಟ ಆಗುತ್ತದೆ. ಹಾಗಾಗಿ ಇದು ಅನೇಕರ ಗಮನ ಸೆಳೆದಿದೆ. ‘ಇದು ತುಂಬ ಕ್ಯೂಟ್​ ಆಗಿದೆ’ ಎಂದು ನೇಹಾ ಧೂಪಿಯಾ (Neha Dhupia) ಅವರು ಕಮೆಂಟ್​ ಮಾಡಿದ್ದಾರೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಉರ್ಫಿಯನ್ನು ಹಾಡಿ ಹೊಗಳಿದ್ದಾರೆ. ನೇಹಾ ಧೂಪಿಯಾ ಕೂಡ ಆ ಜಾಕೆಟ್ ಹೊಂದಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ” ತುಂಬ ಕ್ಯೂಟ್‌ʼʼ ಆಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. ನೆಟ್ಟಿಗರು ಕಮೆಂಟ್‌ನಲ್ಲಿ ʻʻಸರ್‌ಪ್ರೈಸ್‌ ಔಟ್‌ಫಿಟ್‌ʼʼ ಎಂದರೆ ಇನ್ನೊಬ್ಬರು ʻʻಕ್ಯೂಟ್‌ ಔಟ್‌ಫಿಟ್‌ʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Urfi Javed : ಟೀ ಕುಡಿಯಲು ತಿಣುಕಾಡಿದ ಉರ್ಫಿ; ವಿಡಿಯೊ ವೈರಲ್‌

ಉರ್ಫಿ ಜಾವೇದ್‌ ವೈರಲ್‌ ವಿಡಿಯೊ

ಇತ್ತೀಚೆಗೆ ಉರ್ಫಿ ಜಾವೇದ್​​ ಅವರು ಚೂಯಿಂಗ್​ ಗಮ್​ ಬಳಸಿ ಡ್ರೆಸ್​ ಮಾಡಿಕೊಂಡಿದ್ದರು. ಇದನ್ನು ಕಂಡು ನೆಟ್ಟಿಗರು ಹೌಹಾರಿದ್ದರು. ಇತ್ತೀಚೆಗಷ್ಟೇ ಉರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್‌ವೊಂದರಲ್ಲಿ ತಮ್ಮ ಬಟ್ಟೆಯ ಕಾರಣ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಸೋಷಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು. ಜತೆಗೆ ಈ ಪೋಸ್ಟ್​​​ನಲ್ಲಿ ಜೊಮ್ಯಾಟೊವನ್ನು ಕೂಡ ಟ್ಯಾಗ್​​ ಮಾಡಲಾಗಿತ್ತು.

ನಟಿ ಊರ್ಫಿ ಪೋಸ್ಟ್​​​​ಗೆ ಜೊಮ್ಯಾಟೊ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ. ಜತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ. ಇದೀಗ ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ ಬಾಸ್ಕೆಟ್‌ವನ್ನು ಬಟ್ಟೆಯಾಗಿ ಉಪಯೋಗಿಸಿಕೊಂಡಿದ್ದರು.

Exit mobile version