ಬೆಂಗಳೂರು: ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಸಹನಟ ಅಖಿಲ್ ಅಕ್ಕಿನೇನಿ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು (Umair Sandhu) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಉಮೈರ್ ಸಂಧು ನಟರ ಬಗ್ಗೆ ಅಸಂಬದ್ಧ ಮತ್ತು ನಕಲಿ ವಿಷಯಗಳನ್ನು ಬರೆಯುತ್ತಲೇ ಇರುತ್ತಾರೆ. ನಿರ್ಲಕ್ಷಿಸುವವರು ಅನೇಕರಿದ್ದಾರೆ ಮತ್ತು ಕೆಲವರು ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಇದೀಗ ನಟಿ ಊರ್ವಶಿ ಬಗ್ಗೆ ಅಸಭ್ಯವಾಗಿ ಬರೆದಿದ್ದಾರೆ. ಯುರೋಪ್ನಲ್ಲಿ ‘ಏಜೆಂಟ್’ ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ವೇಳೆ ಅಖಿಲ್ ಅಕ್ಕಿನೇನಿ (Akhil Akkineni) ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರಿಗೆ ಕಿರುಕುಳ ನೀಡಿದ್ದಾರೆ ಎಂದು ಉಮರ್ ಸಂಧು ಟ್ವೀಟ್ ಮಾಡಿದ್ದಾರೆ. ಇವರಿಬ್ಬರ ಫೋಟೊ ಲಗತ್ತಿಸಿ ತೀರಾ ಕೆಟ್ಟದ್ದಾಗಿ ಬರೆದಿದ್ದಾರೆ. ಇದೀಗ ಈ ಟ್ವೀಟ್ ಓದಿದ ಊರ್ವಶಿ ರೌಟೇಲಾ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್ನ ಸ್ಕ್ರೀನ್ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಫೇಕ್ ಎಂದು ಬರೆದಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಊರ್ವಶಿ ರೌಟೇಲಾ ತಮ್ಮ ಪೋಸ್ಟ್ನಲ್ಲಿ ʻ ತನ್ನ ಮತ್ತು ಅಖಿಲ್ ಅಕ್ಕಿನೇನಿ ಬಗ್ಗೆ ಸುಳ್ಳು ಸುದ್ದಿಯನ್ನು ಹರಡಿದ್ದಕ್ಕಾಗಿ ಉಮೈರ್ ಸಂಧು ವಿರುದ್ಧ ಮಾನನಷ್ಟ ನೋಟಿಸ್ ನೀಡಿದ್ದೇನೆ. ನಿಮ್ಮಂತಹ ಅಸಭ್ಯ ಪತ್ರಕರ್ತರಿಂದ ಖಂಡಿತವಾಗಿಯೂ ಅಸಮಾಧಾನಗೊಂಡಿದ್ದೇನೆ. ನಿಮ್ಮ ಹಲವಾರು ಹಾಸ್ಯಾಸ್ಪದ ಟ್ವೀಟ್ಗಳಿಗಾಗಿ. ನನ್ನನ್ನು ಮತ್ತು ನನ್ನ ಕುಟುಂಬಕ್ಕೆ ತುಂಬ ಕಿರಿಕಿರಿಯುಂಟು ಮಾಡಿದ ಪತ್ರಕರ್ತʼʼಎಂದು ಬರೆದುಕೊಂಡಿದ್ದಾರೆ.
ಉಮೈರ್ ಸಂಧು ಪೋಸ್ಟ್
ಉಮೈರ್ ಸಂಧು ವಿರುದ್ಧ ಊರ್ವಶಿ ರೌಟೇಲಾ ಕಾನೂನು ಕ್ರಮದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಕೆಲವು ಅಭಿಮಾನಿಗಳು ಅವರ ಬೆಂಬಲಕ್ಕೆ ಬಂದಿದ್ದರೆ, ಅನೇಕರು ಅವರನ್ನು ವಿವಾದಗಳ ರಾಣಿ ಎಂದು ಕರೆದಿದ್ದಾರೆ.
ಇದನ್ನೂ ಓದಿ: Rishabh Pant and Urvashi Rautela | ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ ರಗಳೆ ಶುರುವಾಗಿದ್ದು ಎಲ್ಲಿಂದ?
ಊರ್ವಶಿ ರೌಟೇಲಾ ಪೊಸ್ಟ್
ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಏಪ್ರಿಲ್ 28ಕ್ಕೆ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅವರು ಅಖಿಲ್ ಅಕ್ಕಿನೇನಿ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಖ್ಯಾತಿಯ ಸುರೇಂದ್ರ ರೆಡ್ಡಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ವಕ್ಕಂತಂ ವಂಶಿ ಕಥೆ ಬರೆದಿರುವ ಚಿತ್ರವನ್ನು ಎಕೆ ಎಂಟರ್ಟೈನ್ಮೆಂಟ್ಸ್ ಮತ್ತು ಸುರೇಂದರ್ 2 ಸಿನಿಮಾ ಬ್ಯಾನರ್ನಡಿ ರಾಮಬ್ರಹ್ಮ ಸುಂಕರ ನಿರ್ಮಾಣ ಮಾಡಿದ್ದಾರೆ.