ಬೆಂಗಳೂರು: ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತು ಕುರಿತು ಸ್ವಯಂಪ್ರೇರಿತವಾಗಿ ದೂರು ಸ್ವೀಕರಿಸಿದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA), ಲೋಟಸ್ 365 ಎಂಬ ಗೇಮಿಂಗ್ ಕಂಪನಿಗೆ ನೋಟಿಸ್ ಜಾರಿ ಮಾಡಿದೆ. ಸಂಸ್ಥೆಯು “2015ರಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಕ್ರೀಡಾ ವಿನಿಮಯ” ಎಂದು ಜಾಹೀರಾತು ನೀಡಿತ್ತು. ಈ ಬ್ರ್ಯಾಂಡ್ ಅನುಮೋದಿಸುವ ನವಾಜುದ್ದೀನ್ ಸಿದ್ದಿಕಿ ಮತ್ತು ಊರ್ವಶಿ ರೌಟೇಲಾ ಅವರಿಗೂ ದಾರಿ ತಪ್ಪಿಸಿದ್ದಕ್ಕಾಗಿ ನೋಟಿಸ್ ನೀಡಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಸೆಲೆಬ್ರಿಟಿಗಳ ಪ್ರತಿಕ್ರಿಯೆಗೆ ಕಾಯುತ್ತಿದೆ. ನವಾಜುದ್ದೀನ್ ಈಗಾಗಲೇ ವಿವಾದಗಳಿಂದ ಸುತ್ತುವರೆದಿದ್ದು, ಅವರು ತಮ್ಮ ಪತ್ನಿ ಆಲಿಯಾ ಸಿದ್ದಿಕಿ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ನವಾಜುದ್ದೀನ್ ಮತ್ತು ಊರ್ವಶಿ ಗೇಮಿಂಗ್ ಕಂಪನಿಯೊಂದಿಗೆ ಅವರ ಸಂಬಂಧದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಇದನ್ನೂ ಓದಿ: Kiccha Sudeep: ನಟ ಕಿಚ್ಚ ಸುದೀಪ್ ಚಲನಚಿತ್ರ, ಟಿವಿ ಶೋ, ಜಾಹೀರಾತು ತಡೆ ಹಿಡಿಯಿರಿ; ಚುನಾವಣಾ ಆಯೋಗಕ್ಕೆ ಮನವಿ
ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ ಮತ್ತು ತೇಜಸ್ವಿ ಪ್ರಕಾಶ್ ಅವರಂತಹ ಇತರ ಪರಿಚಿತ ಮುಖಗಳು ವೆಬ್‌ಸೈಟ್‌ನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿವೆ. ಸಂಯುಕ್ತ ಶಾನ್, ಮಿರ್ನಾಲಿನಿ ರವಿ, ನಿದ್ಧಿ ಅಗರ್ವಾಲ್, ಕನಿಕಾ ಮಾನ್ ಮತ್ತು ಇತರರು ಸೇರಿದಂತೆ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದಾರೆ.