Site icon Vistara News

Urvashi Rautela: ತಿಂಗಳುಗಟ್ಟಲೆ ಹುಡುಕಿದ್ದ ಊರ್ವಶಿಗೆ ಅಂತೂ ಮನೆ ಸಿಕ್ತು, ಬಂಗಲೆಯ ಬೆಲೆ ಕೇಳಿದರೇ ತಲೆ ತಿರುಗತ್ತೆ!

Urvashi Rautela new home

#image_title

ಮುಂಬೈ: ನಟಿ ಊರ್ವಶಿ ರೌಟೇಲಾ (Urvashi Rautela) ಬಾಲಿವುಡ್‌ನ ಸುಂದರಿಯರಲ್ಲಿ ಒಬ್ಬರು. ಈ ನಟಿ ತಮ್ಮ ವಿಶೇಷವಾದ ಔಟ್‌ಲುಕ್‌ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಆ ನಟಿ ವಿಶೇಷವಾದ ಮನೆಯೊಂದನ್ನು ಖರೀದಿಸಿದ್ದಾರೆ. ಭಾರೀ ಹಣ ಕೊಟ್ಟು ಐಷಾರಾಮಿ ಮನೆಯನ್ನು ತನ್ನದಾಗಿಸಿಕೊಂಡಿರುವ ಊರ್ವಶಿ ಇದೀಗ ಎಲ್ಲರ ಚರ್ಚೆಗೆ ಕಾರಣವಾಗಿದ್ದಾರೆ.

ಊರ್ವಶಿ ಮುಂಬೈನಲ್ಲಿ ಐಷಾರಾಮಿ ಮನೆ ಖರೀಸಿದ್ದಾರೆ. ಪ್ರಸಿದ್ಧ ನಿರ್ದೇಶಕ ಯಶ್‌ ಚೋಪ್ರಾ ಅವರ ಮನೆಯ ಪಕ್ಕದಲ್ಲೇ ಇರುವ ಮನೆಯನ್ನು ನಟಿ ಖರೀಸಿದ್ದಾರೆ. ಊರ್ವಶಿ ಮನೆಗಾಗಿ ಹಲವಾರು ತಿಂಗಳುಗಳಿಂದ ಹುಡುಕಾಟ ಮಾಡುತ್ತಿದ್ದರು. ಸುಮಾರು 9-10 ತಿಂಗಳುಗಳ ಕಾಲ ಹುಡುಕಾಟ ನಡೆಸಿದ ನಂತರ ನಟಿ ಈ ಬಂಗಲೆಯನ್ನು ಅಂತಿಮಗೊಳಿಸಿದ್ದಾರೆ ಎನ್ನುವ ವರದಿಗಳಿವೆ.

ಇದನ್ನೂ ಓದಿ: Stars Makeup: ಐಶ್ವರ್ಯಾ ರೈ ಪರ್ಪಲ್‌ ಲಿಪ್‌ಸ್ಟಿಕ್‌ ನೆನಪಿಸಿದ ನಟಿ ಊರ್ವಶಿ ರೌತೇಲಾ ಟೀಲ್‌ ಬ್ಲ್ಯೂ ಲಿಪ್‌ಸ್ಟಿಕ್‌ ಲುಕ್‌!

ಒಟ್ಟು ನಾಲ್ಕು ಮಹಡಿಗಳಿರುವ ಮನೆ ಊರ್ವಶಿಯದ್ದಾಗಿದೆ. ಅದರಲ್ಲಿ ಐಷಾರಾಮಿ ಗಾರ್ಡನ್‌, ಜಿಮ್‌ ಸೇರಿದಂತೆ ಹಲವಾರು ರೀತಿಯ ವಿಶೇಷ ಸೌಲಭ್ಯಗಳಿವೆ. ಅದಷ್ಟೇ ಅಲ್ಲದೆ ಮನೆ ಹಿಂದಿನ ಅಂಗಳವು ಯಶ್‌ ಚೋಪ್ರಾ ಅವರ ಮನೆಯ ಗಾರ್ಡೆನ್‌ ಅಟಾಚ್ಡ್‌ ಆಗಿದೆಯಂತೆ.

ಇಷ್ಟೆಲ್ಲ ಸೌಲಭ್ಯಗಳಿರುವ ಬಂಗಲೆಯ ಬೆಲೆ ಬರೋಬ್ಬರಿ 190 ಕೋಟಿ ರೂಪಾಯಿ! ಇಷ್ಟು ದಿನ ಬಾಲಿವುಡ್‌ ಸೆಲೆಬ್ರಿಟಿಗಳು 50-70 ಕೋಟಿ ರೂ. ಕೊಟ್ಟು ಬಂಗಲೆ ಖರೀದಿಸಿದರು ಎನ್ನುವ ಸುದ್ದಿಗಳನ್ನು ನೋಡುತ್ತಿದ್ದ ಜನರು ಊರ್ವಶಿ ಅವರ ಹೊಸ ಬಂಗಲೆಯ ಬೆಲೆ ಕೇಳುತ್ತಿದ್ದಂತೆಯೇ ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಊರ್ವಶಿ ನಿಜಕ್ಕೂ ಶ್ರೀಮಂತೆ ಎಂದು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.

ಇದನ್ನೂ ಓದಿ: Cannes Film Festival 2023: ಮೊಸಳೆ ಮರಿಯ ನೆಕ್‌ಪೀಸ್‌ನಲ್ಲಿಊರ್ವಶಿ ರೌಟೇಲಾ! ಇಲ್ಲಿದೆ ನಟಿಯ ಹೊಸ ಅವತಾರ!

ಊರ್ವಶಿ ಅವರು ಇತ್ತೀಚೆಗೆ ದುಬೈನಲ್ಲಿ ನಡೆದ ಕೇನ್ಸ್‌ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ಬಣ್ಣ ಬಣ್ಣದ ಉಡುಗೆಗಳೊಂದಿಗೆ ಕಾಣಿಸಿಕೊಂಡಿದ್ದ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದವು. ಊರ್ವಶಿ ಸದ್ಯ ರಾಮ್‌ ಪೊಥಿನೇನಿ ಅವರ ಪ್ರಾಜೆಕ್ಟ್‌ ಒಂದಕ್ಕೆ ಸಹಿ ಹಾಕಿದ್ದಾರೆ. ಅದಲ್ಲದೆ ದಿಲ್‌ ಹೈ ಗ್ರೇ ಮತ್ತು ಬ್ಲಾಕ್‌ ರೋಸ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಜೋಸೆಫ್‌ ಡಿ ಸಾಮಿ ಅವರ ಮತ್ತೊಂದು ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Exit mobile version