Site icon Vistara News

Dolly Dhananjay | ರಮ್ಯಾ-ಧನಂಜಯ್‌ ಕಾಂಬಿನೇಷನ್‌ನಲ್ಲಿ ಉತ್ತರಕಾಂಡ!

Dolly Dhananjay

ಬೆಂಗಳೂರು: ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಹಾಗೂ ಡಾಲಿ ಧನಂಜಯ್‌ (Dolly Dhananjay ) ಜತೆ ಉತ್ತರಕಾಂಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಂಟು ವರ್ಷಗಳ ಬಳಿಕ ಮತ್ತೆ ಸಿನಿ ರಂಗಕ್ಕೆ ಮರಳಿದ್ದಾರೆ ರಮ್ಯಾ. ತಮ್ಮ ನಿರ್ಮಾಣದ ʻಸ್ವಾತಿ ಮುತ್ತಿನ ಮಳೆ ಹನಿಯೇʼ ಚಿತ್ರದ ಪಾತ್ರದಿಂದ ಹಿಂದೆ ಸರಿದು ರಮ್ಯಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು. ವಿಜಯ್‌ ಕಿರಗಂದೂರು ಹೊಂಬಾಳೆಯ ಅಂಗಸಂಸ್ಥೆಯಾಗಿರುವ ಕೆ.ಆರ್‌.ಜಿ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದ್ದು, ಭಾನುವಾರ (ನವೆಂಬರ್‌ 6) ಮುಹೂರ್ತ ನೆರವೇರಿದೆ.

ಈ ಚಿತ್ರ ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ಖೇಲ್‌ ಶುರು, ನಾಟಕ್‌ ಚಾಲು ಎಂದು ಟ್ಯಾಗ್‌ಲೈನ್‌ ಚಿತ್ರತಂಡ ನೀಡಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನವಿದೆ. ಈ ಚಿತ್ರಕ್ಕೆ ಸ್ವಾಮಿ ಅವರು ಛಾಯಾಗ್ರಾಹಕರಾಗಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನ ಮತ್ತು ವಿಶ್ವಾಸ್ ಕಶ್ಯಪ್ ವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ | Dolly Dhananjay | ಖೇಲ್ ಶುರು, ನಾಟಕ್‌ ಚಾಲು ಅಂತಿದ್ದಾರೆ ಡಾಲಿ: ʻಉತ್ತರಕಾಂಡʼ ಮುಹೂರ್ತ ಡೇಟ್‌ ಫಿಕ್ಸ್‌!

Exit mobile version