Site icon Vistara News

Vaishnavi Gowda | ಆಡಿಯೊ ಲೀಕ್‌ ಮಾಡಿದ ನಟಿಯ ವಿರುದ್ಧ ನಟ ವಿದ್ಯಾಭರಣ್‌ ದೂರು; ಅದರಲ್ಲೇನಿದೆ?

Vaishnavi Gowda (engagement )

ಬೆಂಗಳೂರು: ಕಿರುತೆರೆ ನಟಿ ವೈಷ್ಣವಿ ಗೌಡ (Vaishnavi Gowda) ಅವರು ನಟ ವಿದ್ಯಾಭರಣ್ ಜತೆ ನಿಶ್ಚಿತಾರ್ಥ ಮುರಿದುಕೊಂಡಿದ್ದಾರೆ. ವಿದ್ಯಾಭರಣ್‌ ಮೋಸ ಮಾಡಿರುವುದಾಗಿ ನಟಿಯೊಬ್ಬರು ಆಡಿಯೊ ಹರಿಬಿಟ್ಟಿದ್ದರು. ಇದೀಗ ನಟಿಯ ಹುಡುಕಾಟ ಶುರುವಾಗಿದೆ. ತಮ್ಮ ಆಡಿಯೊ ಹಂಚಿದ ನಟಿಯ ವಿರುದ್ಧ ಈಗಾಗಲೇ ನಟ ವಿದ್ಯಾಭರಣ್‌ ದೂರು ದಾಖಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ನಟಿಯ ಹುಡುಕಾಟ ನಡೆಸುತ್ತಿದ್ದಾರೆ. ಈ ಆಡಿಯೊದಿಂದಾಗಿ ವೈಷ್ಣವಿ ಮತ್ತು ವಿದ್ಯಾಭರಣ್ ನಿಶ್ಚಿತಾರ್ಥವೇ ಮುರಿದು ಬಿದ್ದಿದೆ.

ʻʻಆಡಿಯೊದಲ್ಲಿ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡಲಾಗಿದೆ. ಆಕೆ ಯಾರೆಂದು ನನಗೆ ಗೊತ್ತಿಲ್ಲ. ಅವರ ಮಾತಿನಿಂದಾಗಿ ನಮ್ಮ ಕುಟುಂಬಕ್ಕೆ ಮುಜುಗರ ಉಂಟಾಗಿದೆ. ಆಡಿಯೊದಲ್ಲಿ ಮಾತನಾಡಿದವರು ಯಾರೆಂಬುದನ್ನು ಪತ್ತೆ ಮಾಡಬೇಕುʼʼ ಎಂದು ನಟ ವಿದ್ಯಾಭರಣ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿದ್ಯಾಭರಣ್‌ ತಾಯಿ ಕೂಡ ಮಾಧ್ಯಮದವರೊಂದಿಗೆ ಮಾತನಾಡಿದ್ದು ʻʻನಮ್ಮ ಮಗ ಅಷ್ಟೊಂದು ಕೆಟ್ಟವನಲ್ಲ. ಆಡಿಯೋ ಹಿಂದೆ ಯಾರು ಇದ್ದಾರೆ ಎಂಬುದು ತಿಳಿದುಕೊಳ್ಳಬೇಕು. ಸಮಯ ಕೊಡಿʼʼ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Vaishnavi Gowda | ʻಸಾಕ್ಷಿ ಇಲ್ಲದೆ ಹೇಗೆ ಆಡಿಯೊ ನಂಬೋದು? ವಿದ್ಯಾಭರಣ್‌ ಡೀಸೆಂಟ್‌ ಹುಡುಗʼ: ವೈಷ್ಣವಿ ತಾಯಿ

ಈಗಾಗಲೇ ಎರಡೂ ಕುಟುಂಬಗಳು ಇದು ಕೇವಲ ಹೆಣ್ಣು ನೋಡುವ ಶಾಸ್ತ್ರ ಎಂದು ಸ್ಪಷ್ಟನೆ ನೀಡಿವೆ. ಆದರೆ ವಿದ್ಯಾಭರಣ್ ಬಗ್ಗೆ ನಟಿಯೊಬ್ಬಳು ಮಾತನಾಡಿದ್ದಾಳೆ ಎನ್ನಲಾದ ಆಡಿಯೊ ಮಾತ್ರ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ವಿದ್ಯಾಭರಣ್‌ ಈ ಬಗ್ಗೆ ಹೇಳಿಕೆ ನೀಡಿದ್ದು ʻʻನಮ್ಮ ಕುಟುಂಬದವರ ವರ್ಚಸ್ಸನ್ನು ಹಾಳು ಮಾಡಲು ಕೆಲವರು ಪ್ಲಾನ್ ಮಾಡಿದ್ದಾರೆ. ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ಆಕೆ ನೇರವಾಗಿ ಬಂದು ಆರೋಪವನ್ನು ಮಾಡಬಹುದಿತ್ತುʼʼಎಂದು ಹೇಳಿದ್ದಾರೆ.

ಇದನ್ನೂ ಓದಿ | ವೈಷ್ಣವಿ ಗೌಡ ಜತೆ ಎಂಗೇಜ್‌ಮೆಂಟ್ ಆಗಿಲ್ಲ: ನಟಿಯ ವೈರಲ್‌ ಆಡಿಯೋ ಬಳಿಕ ಸ್ಪಷ್ಟನೆ ನೀಡಿದ ನಟ ವಿದ್ಯಾಭರಣ್‌

Exit mobile version