ಬೆಂಗಳೂರು: ಕಿರುತೆರೆ ನಟಿ, ಬಿಗ್ಬಾಸ್ ಖ್ಯಾತಿಯ ವೈಷ್ಣವಿ ಗೌಡ ಮದುವೆ ಫಿಕ್ಸ್ ಆಗಿದೆಯಾ? ನಿಶ್ಚಿತಾರ್ಥ ಆಯಿತಾ?-ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಫೋಟೋ ನೋಡಿದ ಮೇಲೆ ಅನೇಕರು ಈ ಪ್ರಶ್ನೆ ಕೇಳುತ್ತಿದ್ದಾರೆ. ಅದಲ್ಲಿ ವೈಷ್ಣವಿ ಗೌಡ ಮತ್ತು ಒಬ್ಬ ಹುಡುಗ ಅಕ್ಕಪಕ್ಕ ನಿಂತಿದ್ದು, ಇಬ್ಬರೂ ಹಾರ ಧರಿಸಿದ್ದಾರೆ. ವೈಷ್ಣವಿ ಮದುವೆ ಹೆಣ್ಣಿನಂತೆ ಅಲಂಕೃತಗೊಂಡಿದ್ದಾರೆ. ಇನ್ನೊಂದು ಅಚ್ಚರಿಯೆಂದರೆ, ಅಲ್ಲಿ ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಕೂಡ ಉಪಸ್ಥಿತರಿರುವುದು ನೋಡಬಹುದು.
ಅಗ್ನಿಸಾಕ್ಷಿ ಎಂಬ ಧಾರಾವಾಹಿಯಿಂದ ಖ್ಯಾತಿಯಾದ ವೈಷ್ಣವಿ ಗೌಡ ಬಿಗ್ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಫೈನಲ್ವರೆಗೂ ಇದ್ದ ಅವರಿಗೆ ಅಪಾರ ಅಭಿಮಾನಿ ಬಳಗವೂ ಇದೆ. ನನಗೆ ಮದುವೆ ಬಗ್ಗೆ ಅಪಾರ ಕನಸಿದೆ ಎಂದು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದ ವೈಷ್ಣವಿ, ಬಿಗ್ಬಾಸ್ನಲ್ಲಿ ಕಿಚ್ಚ ಸುದೀಪ್ ಎದುರೂ ಕೂಡ ತಾನು ಮದುವೆಯಾಗುವ ಹುಡುಗ ಹೇಗಿರಬೇಕು ಎಂದೆಲ್ಲ ಹೇಳಿಕೊಂಡಿದ್ದರು.
ಬಿಗ್ಬಾಸ್ನಿಂದ ಹೊರಬಂದ ಮೇಲೆ ತಮ್ಮ ಯೋಗ, ಡ್ಯಾನ್ಸ್ ಪೋಸ್ಟ್ಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ‘ಲಕ್ಷಣ’ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ವೈಷ್ಣವಿ ಎಂಗೇಜ್ ಆಗಿದ್ದಾರೆ ಎಂದು ತೋರಿಸುವ ಫೋಟೋ ವೈರಲ್ ಆಗುತ್ತಿದೆ. ಆದರೆ ವೈಷ್ಣವಿ ಗೌಡ ಇದುವರೆಗೆ ಈ ಬಗ್ಗೆ ಏನೂ ಮಾತನಾಡಿಲ್ಲ. ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಫೋಟೋಗಳನ್ನಾಗಲೀ, ಪೋಸ್ಟ್ಗಳನ್ನಾಗಲೀ ಹಾಕಿಕೊಂಡಿಲ್ಲ.
ಆ ಹುಡುಗ ಯಾರು?
ವೈಷ್ಣವಿ ಪಕ್ಕ ಹಾರ ಹಾಕಿಕೊಂಡು ನಿಂತಿರುವ ವ್ಯಕ್ತಿ ಕೂಡ ಸಿನಿಮಾ ಹಿನ್ನೆಲೆಯವರೇ ಎನ್ನಲಾಗಿದೆ. 2018ರಲ್ಲಿ ತೆರೆಕಂಡಿದ್ದ ವಿರಾಜ್ ಎಂಬ ಕನ್ನಡ ಸಿನಿಮಾದಲ್ಲಿ ನಾಯಕನಾಗಿದ್ದ ವಿದ್ಯಾಭರಣ ಎಂದು ಹೇಳಲಾಗಿದೆ. ಆದರೆ ಇವೆಲ್ಲವೂ ಇನ್ನೂ ಸ್ಪಷ್ಟವಾಗಬೇಕಿದೆ. ಯಾಕೆಂದರೆ ಇವೆಲ್ಲಕ್ಕೂ ಅಧಿಕೃತವಾಗಿ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: Bigg Boss Kannada 9 | ಟಿವಿ ಸೀಸನ್‌ನಲ್ಲಿ ಪ್ರವೀಣರ ಜತೆ ನವೀನರು; ಶೋಗಿನ್ನು ಒಂಭತ್ತೇ ದಿನ ಬಾಕಿ!