Site icon Vistara News

Vaishnavi Gowda: ‘ಅಗ್ನಿಸಾಕ್ಷಿ’ ಖ್ಯಾತಿಯ ವೈಷ್ಣವಿ ಗೌಡ ಸ್ಟೈಲಿಷ್‌ ಫೋಟೋಶೂಟ್

Vaishnavi Gowda new post

#image_title

ಬೆಂಗಳೂರು: ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಎಲ್ಲರ ಹೆಣ್ಣು ಮಕ್ಕಳ ಫೇವರಿಟ್‌ ನಟಿ ಎಂದರೆ ತಪ್ಪಾಗದು. ಬಿಗ್‌ಬಾಸ್‌ನಲ್ಲಿಯೂ ಕಾಣಿಸಿಕೊಂಡ ನಟಿ ಅನೇಕರ ಮನಸ್ಸನ್ನು ಕದ್ದಿದ್ದಾರೆ. ನಟನೆ ಮಾತ್ರವಲ್ಲದೆ ಫ್ಯಾಷನ್‌ ವಿಚಾರದಲ್ಲೂ ವೈಷ್ಣವಿ ಅವರನ್ನು ಹಿಂದಿಕ್ಕುವವರಿಲ್ಲ.

ಇದೀಗ ವೈಷ್ಣವಿ ಹೊಸದೊಂದು ಫೋಟೋ ಸರಣಿಯನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಸ್ಟೈಲಿಷ್‌ ಆಗಿರುವ ಬಿಳಿ ಬಣ್ಣದ ಟಾಪ್‌ ಒಂದನ್ನು ಧರಿಸಿದ್ದಾರೆ. ಕ್ರಾಪ್‌ ಟಾಪ್‌ ಆಗಿರುವ ಅದಕ್ಕೆ ಮ್ಯಾಚ್‌ ಆಗುವಂತೆ ನೀಲಿ ಬಣ್ಣದ ಸ್ಕರ್ಟ್‌ ತೊಟ್ಟಿದ್ದಾರೆ. ಹಾಗೆಯೇ ಡ್ರೆಸ್‌ಗೆ ಹೊಂದುವಂತೆ ಸಿಂಪಲ್‌ ಆದ ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಮಾಡಿಕೊಂಡಿದ್ದಾರೆ. ಕಿವಿಗೆ ಕ್ವೀನ್‌ ಎಂದು ಬರೆದಿರುವ ಓಲೆಯನ್ನು ಧರಿಸಿದ್ದಾರೆ.

ಇದನ್ನೂ ಓದಿ: Yoga Day 2023: ಸೀರೆ ಉಟ್ಟು ಯೋಗ ಮಾಡಿದ ಮಹಿಳೆಯರು; ಕಲರ್​ಫುಲ್ ವಿಡಿಯೊ ವೈರಲ್​
ಈ ಫೋಟೋಗಳನ್ನು ನಟಿ ಎರಡು ದಿನಗಳ ಮೊದಲು ಹಂಚಿಕೊಂಡಿದ್ದಾರೆ. ಅವರ ಫೋಟೋಗಳಿಗೆ ಸಾವಿರಾರು ಜನರು ಲೈಕ್‌ ಮಾಡಿದ್ದಾರೆ. ನೂರಾರು ಮಂದಿ ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಟಿ ಈ ಹಿಂದೆ ಸೀರೆಯುಟ್ಟ ಫೋಟೊಗಳನ್ನು ಹಂಚಿಕೊಂಡಿದ್ದರು. ಅದಕ್ಕೂ ಸಹ ಅನೇಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.


ವೈಷ್ಣವಿ ಅವರು ಆರು ದೇವಿ ಧಾರಾವಾಹಿ ಮೂಲಕ ಕಿರುತರೆಗೆ ಎಂಟ್ರಿ ಕೊಟ್ಟವರು. ಅಗ್ನಿಸಾಕ್ಷಿ ಧಾರಾವಾಹಿ ಅವರಿಗೆ ದೊಡ್ಡ ಮಟ್ಟದ ಫೇಮ್‌ ಅನ್ನು ತಂದುಕೊಟ್ಟಿತು. ಅದಾದ ನಂತರ ಅವರು ಲಕ್ಷಣ ಮತ್ತು ತಮಿಳಿನ ಸೀತಾ ರಾಮ್‌ ಧಾರಾವಾಹಿಗಳಲ್ಲಿ ನಟಿಸಿದರು. ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್‌ಬಾಸ್‌ನ 8ನೇ ಸೀಸನ್ನಿನಲ್ಲಿ ಭಾಗವಹಿಸಿದ ಅವರು ಟಾಪ್‌ ಐವರಲ್ಲಿ ಒಬ್ಬರಾಗಿ ಹೊರಹೊಮ್ಮಿದರು.

Exit mobile version