ಬೆಂಗಳೂರು: ಏಪ್ರಿಲ್ 29ರಂದು ಚೆನ್ನೈನಲ್ಲಿ ವನಿತಾ ವಿಜಯ್ ಕುಮಾರ್ (Vanitha Vijaykumar) ಮೂರನೇ ಗಂಡ ನಿಧನ ಹೊಂದಿದ್ದಾರೆ. ಪತಿ ಪೀಟರ್ ಪೌಲ್ ನಿಧನರಾದ ನಂತರ ವನಿತಾ ವಿಜಯ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ. ನಟ ವಿಜಯ್‌ಕುಮಾರ್ ಅವರ ಮಗಳಾಗಿರುವ ವನಿತಾ ವಿಜಯ್ ಕುಮಾರ್ ತಮಿಳು ಚಲನಚಿತ್ರೋದ್ಯಮದಲ್ಲಿ ವಿಎಫ್‌ಎಕ್ಸ್ ಎಡಿಟರ್ ಆಗಿರುವ ಪೀಟರ್ ಪೌಲ್ ಅವರನ್ನು ಮದುವೆಯಾಗಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ವನಿತಾ ತನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿಸುತ್ತಿರುವಾಗ ಇಬ್ಬರೂ ಭೇಟಿಯಾಗಿದ್ದು, ಸ್ನೇಹಕ್ಕೆ ತಿರುಗಿ, ಪ್ರೀತಿಯಲ್ಲಿ ಬಿದ್ದು, ಜೂನ್ 2020ರಲ್ಲಿ ವಿವಾಹವಾದರು. ನಂತರ ಮದುವೆಯನ್ನು ಮುರಿದುಕೊಂಡು ಅಚ್ಚರಿ ಮೂಡಿಸಿದ್ದರು. ಇದೀಗ ಪೀಟರ್ ಪೌಲ್ ಈಗ ಬಾರದಲೋಕಕ್ಕೆ ಹೊರಟು ಹೋಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪೀಟರ್ ಕೊನೆಯುಸಿರೆಳಿದ್ದಾರೆ.
ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಪೀಟರ್ ಪೌಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಚಿಕಿತ್ಸೆಗಾಗಿ ವನಿತಾ ಲಕ್ಷಗಟ್ಟಲೆ ಖರ್ಚು ಮಾಡಿದ್ದಾರೆ. ಪೀಟರ್ ಪೌಲ್ ನಿಧನದ ಬಳಿಕ ನಟಿ ಪೋಸ್ಟ್‌ನಲ್ಲಿ “ನನ್ನ ತಾಯಿ ಯಾವಾಗಲೂ ನನಗೆ ಹೇಳುತ್ತಿದ್ದರು,. ಬೇರೆಯವರಿಗೆ ಸಹಾಯ ಮಾಡುವವರಿಗೆ ದೇವರು ಸಹಾಯ ಮಾಡುತ್ತಾನೆ. ಇದು ಖಂಡಿತವಾಗಿಯೂ ಪ್ರತಿಯೊಬ್ಬರೂ ಕಲಿಯಬೇಕಾದ ಪಾಠವಾಗಿದೆ. ಅಡ್ಡದಾರಿಯಲ್ಲಿ ಜನರು ತಮ್ಮದೇ ಆದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ನೀವು ಅನುಭವಿಸಿದ ಆಘಾತದ ನಂತರ ಈಗ ನೀವು ಶಾಂತಿಯನ್ನು ಕಂಡುಕೊಂಡಿದ್ದೀರಿ ಎಂದು ನಾನು ಭಾವಿಸಿದ್ದೇನೆ. ಈ ಪ್ರಪಂಚದಿಂದ ನಿಮ್ಮ ಅಗಲಿಕೆಗೆ ನಾನು ಎಷ್ಟು ದುಃಖಿತನಾಗಿದ್ದೇನೆ, ನೀವು ಖಂಡಿತವಾಗಿಯೂ ಉತ್ತಮ ಸ್ಥಳದಲ್ಲಿರುತ್ತೀರಿ ಎಂದು ನನಗೆ ತಿಳಿದಿದೆ. ನೀವು ಎಲ್ಲಿದ್ದರೂ ನಿಮ್ಮ ಶಾಂತಿ ಸಂತೋಷವಾಗಿರುವುದನ್ನು ನೀವು ಕಂಡುಕೊಂಡಿದ್ದೀರಿ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Naresh Pavitra: ನರೇಶ್- ಪವಿತ್ರಾ ಲೋಕೇಶ್ ಮದುವೆ ವಿಡಿಯೊ ಹಿಂದಿರೋ ಸತ್ಯವೇನು? ಸೆಕೆಂಡ್ ಇನ್ನಿಂಗ್ಸ್ ಶುರು!
ಪೀಟರ್ ಮದುವೆಯನ್ನು ಮೊದಲ ಪತ್ನಿ ತೀವ್ರ ವಿರೋಧಿಸಿದ್ದರು. ವನಿತಾ ಜತೆ ಮದುವೆಯಾಗಿದ್ದೇ ಗೊತ್ತಿಲ್ಲ ಎಂದು ಮೊದಲ ಪತ್ನಿ ಬೀದಿ ರಂಪ ಮಾಡಿದ್ದರು.