Site icon Vistara News

Rishab Shetty: ಸೆ.30ಕ್ಕೆ ʻಕಾಂತಾರʼ ಬಿಡುಗಡೆಯಾಗಿ ಒಂದು ವರ್ಷ; ಭರ್ಜರಿ ಸಿಹಿ ಸುದ್ದಿ ಕೊಟ್ಟೇ ಬಿಡ್ತು ಹೊಂಬಾಳೆ!

kantara Movie

ಬೆಂಗಳೂರು: ʻಕಾಂತಾರʼ ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಿಸಿತ್ತು. ಕೆಜಿಎಫ್ ಚಾಪ್ಟರ್ 2 (KGF Chapter 2) ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹೇಗೆ ಖ್ಯಾತಿ ಗಳಿಸಿತೋ ಅದೇ ರೀತಿ ಕಾಂತಾರ 2 ಕೂಡ ಅಷ್ಟೇ ಎತ್ತರಕ್ಕೆ ಹೋಗಿತ್ತು. ಈ ಸಿನಿಮಾದ ಪ್ರಮುಖ ಹೈಲೈಟ್‌ ಎಂದರೆ ʻವರಾಹ ರೂಪಂʼ ಹಾಡು. ಈ ಹಾಡು ವಿವಾದಕ್ಕೆ ಎಷ್ಟು ಕಾರಣವಾಗಿತ್ತೋ ಅಷ್ಟೇ ಖ್ಯಾತಿಯನ್ನು ಪಡೆಯಿತು. ಈ ಚಿತ್ರ ರಿಲೀಸ್ ಆಗಿ ಸೆಪ್ಟೆಂಬರ್ 30ಕ್ಕೆ ಒಂದು ವರ್ಷ ಕಳೆಯಲಿದೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಹೊಸ ಘೋಷಣೆ ಆಗಿದೆ. ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ‘ವರಾಹ ರೂಪಂʼ ವಿಡಿಯೊ ಸಾಂಗ್ ರಿಲೀಸ್ ಮಾಡುತ್ತಿದೆ.

ಹೊಂಬಾಳೆ ಟ್ವೀಟ್‌ನಲ್ಲಿ ʻವರಾಹ ರೂಪಂ ಈ ಹಾಡು ನಮ್ಮ ಜೀವನದಲ್ಲಿ ಅಳಿಸಲಾಗದ ಗುರುತಾಗಿದೆ. ಸೆ.30 ರಂದು ಕಾಂತಾರದಿಂದ ಬಹು ನಿರೀಕ್ಷಿತ ‘ವರಾಹ ರೂಪಂ’ ಅನಾವರಣಗೊಳಿಸುತ್ತಿದ್ದೇವೆʼʼಎಂದು ಟ್ವೀಟ್‌ ಶೇರ್‌ ಮಾಡಿಕೊಂಡಿದೆ.ಅಜನೀಶ್ ಲೋಕನಾಥ್ ‘ಕಾಂತಾರ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವರಾಹ ರೂಪಂ ವಿಡಿಯೊ ಸಾಂಗ್ ಶನಿವಾರ (ಸೆಪ್ಟೆಂಬರ್ 30) ಬೆಳಗ್ಗೆ 10 ಗಂಟೆಗೆ ರಿಲೀಸ್ ಆಗಲಿದೆ.

ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌

ಇದನ್ನೂ ಓದಿ: Rishab Shetty: ರಾಧಾ-ಕೃಷ್ಣನಾಗಿ ಮಿಂಚಿದ ರಿಷಬ್‌ ಶೆಟ್ಟಿ ಮಕ್ಕಳು

ʼಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವದಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ಈಗಾಗಲೇ ಕಾಂತಾರ 2 ಸಿನಿಮಾ ಕೆಲಸಗಳು ಭರದಿಂದ ಸಾಗಿದೆ. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ರಿಷಬ್ ಶೆಟ್ಟಿಗೆ (Rishabh Shetty) ಆಫರ್ ಬಂದಿದ್ದು ನಿಜ ಎಂದಿದ್ದಾರೆ ರಿಷಬ್‌. ʻʻಬೇರೆ ಭಾಷೆಗಳಿಂದ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಆದರೆ ನನಗೆ ‘ಕಾಂತಾರ’ವೇ ಆದ್ಯತೆ. ಕಾಂತಾರ’ದ ಯಶಸ್ಸಿಗೆ ಕನ್ನಡಿಗರು ಕಾರಣ. ಇವರು ನೀಡಿರುವ ಯಶಸ್ಸಿನ ಬೆನ್ನಲ್ಲೇ ಬೇರೆ ಭಾಷೆಯಲ್ಲಿ ಅವಕಾಶ ಬಂತೆಂದು ಓಡಿ ಹೋಗುವುದಿಲ್ಲ. ಹೊರಗಡೆಯಿಂದ ಬಂದ ತಂತ್ರಜ್ಞರು, ನಿರ್ದೇಶಕರು ಕನ್ನಡ ಸಿನಿಮಾ ಮಾಡಿ ಪ್ರಪಂಚದಾದ್ಯಂತ ತೆಗೆದುಕೊಂಡು ಹೋದರೆ ಅಭ್ಯಂತರವಿಲ್ಲ. ನನ್ನ ಆದ್ಯತೆ ಕನ್ನಡ ಸಿನಿಮಾ. “ಕಾಂತಾರ-2′ ಪೂರ್ಣಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ’ ಎಂದರು ರಿಷಬ್‌.

Exit mobile version