Site icon Vistara News

Varisu Ott Release: ದಳಪತಿ ವಿಜಯ್‌ ಅಭಿನಯದ ವಾರಿಸು ಸಿನಿಮಾ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌!

Varisu Ott Release

ಬೆಂಗಳೂರು: ದಳಪತಿ ವಿಜಯ್‌ ಅಭಿನಯದ ‘ವಾರಿಸು’ ಸಿನಿಮಾ (Varisu Ott Release) ಜನವರಿ 11 ರಂದು ವಿಶ್ವಾದ್ಯಂತ ತೆರೆ ಕಂಡಿತು. ಯಶಸ್ವಿ ಪ್ರದರ್ಶನ ಕಂಡು, 194 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ. ಇದೀಗ ಸಿನಿಮಾ ಒಟಿಟಿಯಲ್ಲಿ ಬರಲು ತಯಾರಾಗಿದೆ. ಫೆಬ್ರವರಿ 22ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ವಾರಿಸು ಒಂದು ಭಾವನಾತ್ಮಕ ಕೌಟುಂಬಿಕ ಮನರಂಜನಾ ಚಿತ್ರವಾಗಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಜನಪ್ರಿಯವಾಗಿರುವ ದಿಲ್ ರಾಜು ಇದನ್ನು ನಿರ್ಮಿಸಿದ್ದಾರೆ. ಇದೀಗ ಸಿನಿಮಾ ಫೆಬ್ರವರಿ 22ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್‌ ಆಗಲಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಾಗಲಿದೆ. ಆದರೆ ಹಿಂದಿ ಆವೃತ್ತಿ ಯಾವಾಗ ಮತ್ತು ಎಲ್ಲಿ ಲಭ್ಯವಿರುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟನೆಯಿಲ್ಲ.

ಇದನ್ನೂ ಓದಿ: Varisu vs Thunivu | 5ನೇ ದಿನ ವಾರಿಸು, ತುನಿವು ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟು? ರೇಸ್‌ನಲ್ಲಿ ಗೆದ್ದವರಾರು?

ಇದನ್ನೂ ಓದಿ: Trisha Krishnan: 14 ವರ್ಷಗಳ ನಂತರ ಮತ್ತೆ ತೆರೆಯಲ್ಲಿ ಮಿಂಚಲು ಸಜ್ಜಾದ ತ್ರಿಶಾ -ದಳಪತಿ ವಿಜಯ್‌

ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್. ಶರತ್‌ಕುಮಾರ್, ಪ್ರಕಾಶ್ ರಾಜ್, ಶಾಮ್, ಶ್ರೀಕಾಂತ್, ಯೋಗಿ ಬಾಬು, ಮತ್ತು ಜಯಸುಧಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ 67 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Exit mobile version