Site icon Vistara News

Varsha Varun Aradya: ಟಿಕ್‌ಟಾಕ್‌ ಜೋಡಿ ವರುಣ್-ವರ್ಷಾ ಬ್ರೇಕಪ್‌; ದುಡ್ಡು ಎಂಥವರನ್ನು ಬದಲಾಯಿಸುತ್ತೆ ಅಂದ್ರು ನೆಟ್ಟಿಗರು!

Varsha Varun Aradya

ಬೆಂಗಳೂರು: ಟಿಕ್‌ಟಾಕ್‌ ಜೋಡಿ ವರುಣ್ ಮತ್ತು ವರ್ಷಾ (Varsha Varun Aradya) ಯಾರಿಗೆ ಗೊತ್ತ್ತಿಲ್ಲ ಹೇಳಿ? ಕನ್ನಡದಲ್ಲಿ ಯಾವುದೇ ಸಿನಿಮಾಗಳು ಬಿಡುಗಡೆಯಾದರೆ, ಈ ಜೋಡಿ ಹಾಡು, ಡೈಲಾಗ್‌ಗಳನ್ನು ಡಬ್‌ಸ್ಮ್ಯಾಶ್‌ ಮತ್ತು ರೀಲ್ಸ್‌ ಮಾಡದೇ ಇರುತ್ತಿರಲಿಲ್ಲ. ಆದರೀಗ ಈ ಜೋಡಿ ಬ್ರೇಕಪ್ ಮಾಡಿಕೊಂಡಿದೆ. ವರುಣ್ ಮತ್ತು ವರ್ಷಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬ ಅದೆಷ್ಟೋ ಬಾರಿ ಒಟ್ಟಿಗೆ ಯುಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ವರ್ಷಾ ಅವರೇ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ವರ್ಷಾ ಇನ್‌ಸ್ಟಾ ಪೋಸ್ಟ್‌ನಲ್ಲಿ ʻʻಎಲ್ಲರಿಗೂ ನಮಸ್ಕಾರ. ತುಂಬಾ ದಿನದಿಂದ ನೀವಲ್ಲ ನನಗೆ ಕೇಳಿದಂತೆ ಸಾಮಾನ್ಯ ಪ್ರಶ್ನೆ ಏನೆಂದರೆ, ನಿನಗೂ ಮತ್ತು ವರುಣ್‌ಗೂ ಏನಾಯಿತೆಂದು. ಆ ವಿಷಯದ ಬಗ್ಗೆ ಇವತ್ತು ನಾನು ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ. ಸುಮಾರು ವರ್ಷಗಳಿಂದ ನಾನು ಮತ್ತು ವರುಣ್‌ ಇಬ್ಬರು ಪ್ರೀತಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಒಂದು ಹುಡುಗಿಯ ಜತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಯಾಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ ಮತ್ತು ವರುಣ್‌ ಮಧ್ಯೆ ಮನಸ್ತಾಪಗಳು ಬಂದಿದ್ದು, ನಾನು ಎಷ್ಟು ಹೇಳಿದರು ಸಹ ಅವನು ಆ ಹುಡುಗಿಯನ್ನು ಬಿಡುವುದಕ್ಕೆ ತಯಾರಿಲ್ಲ. ಆದುದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ನಾನು ಆ’ಹುಡುಗಿಯ ಜತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Murder Case: ಜನಪ್ರಿಯ ಟಿಕ್‌ಟಾಕ್‌ ಸ್ಟಾರ್ ನವೀನ್‌ ‌ಮರ್ಡರ್‌; ಇಬ್ಬರು ಯುವತಿಯರ ಜತೆಗಿದ್ದಾಗ ಅಪಹರಿಸಿ ಕೊಲೆ

ʻʻಈ ರೀತಿ ಆತ ಹೇಳಿದಾಗ ನನಗೆ ಮನಸ್ಸಿಗೆ ತುಂಬಾ ನೋವಾಯಿತು. ಆದುದರಿಂದ ನಾನು ಕಳೆದ ಸುಮಾರು ತಿಂಗಳಿಗಳಿಂದ ನನ್ನ ಮತ್ತು ವರುಣ್‌ ವಿಡಿಯೊಗಳನ್ನು ಅಪ್ಲೋಡ್‌ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ದರೆ ನನಗೆ ನಾನೇ ಮೋಸ ಮಾಡಿಕೊಳ್ಳುತ್ತಿದ್ದೇನೆ ಎಂದು ನನ್ನ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್‌ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯ ಜತೆ ಖುಷಿಯಾಗಿರಲಿ. ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ. ನಾನು ಅವರಿಗಾಗಿ ಜೀವನವನ್ನು ನಡೆಸಲೇಬೇಕು. ಆದುದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ದಯವಿಟ್ಟು ಇದನ್ನು ನೀವು ಅರ್ಥಮಾಡಿಕೊಳ್ಳುವಿರಿ ಎಂದು ನಾನು ಭಾವಿಸಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.

ಇದೀಗ ನೆಟ್ಟಿಗರು ಕಮೆಂಟ್‌ ಮೂಲಕ ʻಜನಪ್ರಿಯತೆ ಮತ್ತು ಹಣ ಗಳಿಸಲು ಸಪೋರ್ಟ್ ಮಾಡಿದ್ದು ವರ್ಷಾʼ ಎಂದು ವರುಣ್‌ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.  ʻʻದುಡ್ಡು ಎಂಥವರನ್ನು ಬದಲಾಯಿಸುತ್ತೆʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʻಪ್ರ್ಯಾಂಕ್‌ ಅಂತ ಕೊನೇಲಿ ಹೇಳಬೇಡಿʼʼಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ʻʻನೀವು ಯಾವಾಗಲೂ ಸ್ಟ್ರಾಂಗ್ ಆಗಿರಿ ಅಕ್ಕ. ನಿಮ್ಮ ಮೇಲೆ ಕನ್ನಡಿಗರ ಪ್ರೀತಿ ಮತ್ತು ಗೌರವ ಇದ್ದೆ ಇರುತ್ತದೆʼʼಮತ್ತೊಬ್ಬರು ಬರೆದುಕೊಂಡಿದ್ದಾರೆ.

Exit mobile version