ಮುಂಬೈ: ಬಾಲಿವುಡ್ ನಟ ವರುಣ್ ಧವನ್ (Varun Dhawan) ಮತ್ತು ಜಾನ್ವಿ ಕಪೂರ್ ನಟನೆಯ ʼಬಾವಲ್ʼ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಈ ಜೋಡಿ ಸಿನಿಮಾದ ಪ್ರೊಮೋಷನ್ನಲ್ಲಿ ಬಿಜಿ ಇದೆ. ಈ ನಡುವೆ ಪ್ರೊಮೋಷನ್ಗೆಂದೇ ಫೋಟೋಶೂಟ್ ಮಾಡಿಸಲಾಗಿದ್ದು, ಅದರ ಫೋಟೋವೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರೊಮೋಷನ್ಗೆಂದು ಮಾಡಿಸಲಾದ ಫೋಟೋಶೂಟ್ನಲ್ಲಿ ಜಾನ್ವಿ ಮತ್ತು ವರುಣ್ ಇಬ್ಬರೂ ಕಪ್ಪು ಬಣ್ಣದ ದಿರಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಜಾನ್ವಿಯನ್ನು ವರುಣ್ ಹಿಂಬದಿಯಿಂದ ಅಪ್ಪಿಕೊಂಡಿದ್ದು, ಜಾನ್ವಿ ಅವರ ಎಡ ಕಿವಿಯನ್ನು ಕಚ್ಚಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಸಖತ್ ಟ್ರೋಲ್ಗೆ ಒಳಗಾಗಲಾರಂಭಿಸಿದೆ. ನೆಟ್ಟಿಗರು ಈ ರೀತಿಯ ಫೋಟೋಶೂಟ್ ಸರಿಯಲ್ಲ ಎಂದು ಹೇಳಲಾರಂಭಿಸಿದ್ದಾರೆ.
ಇದನ್ನೂ ಓದಿ: Viral News : ಇದೆಂಥಾ ಕ್ರೌರ್ಯ; ತಂದೆ ಮೇಲಿನ ಕೋಪಕ್ಕೆ ಮೂವರು ಮಕ್ಕಳಿಗೆ ಕಾರು ಗುದ್ದಿಸಿದ
“ವರುಣ್ ಅವರು ಈ ಹಿಂದೆ ಗಿಗಿ ಅವರಿಗೆ ಮುತ್ತು ಕೊಟ್ಟು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದು ಸಾಕಾಗಲಿಲ್ಲವೇ? ಇದೀಗ ಮತ್ತೆ ಈ ರೀತಿ ಅಸಭ್ಯ ಫೋಟೋಶೂಟ್ ಮೂಲಕ ವಿವಾದ ಮಾಡಿಕೊಳ್ಳಬೇಕೇ?” ಎಂದು ಜನರು ಪ್ರಶ್ನಿಸಲಾರಂಭಿಸಿದ್ದಾರೆ. “ವರುಣ್ ಅತ್ಯುತ್ತಮ ನಟ ಹೌದಾದರೂ ಅವರಿಗೆ ಸಿನಿಮಾ ಪ್ರೊಮೋಷನ್ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಇನ್ನೂ ತಿಳಿದಿಲ್ಲ” ಎಂದು ಕೆಲವರು ಅಸಮಾಧಾನವನ್ನು ಹೊರಹಾಕಲಾರಂಭಿಸಿದ್ದಾರೆ.
Umm whattt
by u/Worth_Put7897 in BollyBlindsNGossip
ಅಂದ ಹಾಗೆ ವರುಣ್ ಅವರು ಈ ಹಿಂದೆ ಕೂಡ ಒಂದು ವಿವಾದದಲ್ಲಿ ಸಿಲುಕಿದ್ದರು. ಹಾಲಿವುಡ್ ಮಾಡೆಲ್ ಗಿಗಿ ಹದೀದ್ ಅವರಿಗೆ ವರುಣ್ ವೇದಿಕೆಯ ಮೇಲೇ ಮುತ್ತು ಕೊಟ್ಟಿದ್ದರು. ಗಿಗಿ ಅವರ ಅನುಮತಿ ಇಲ್ಲದೆಯೇ ಮುತ್ತು ಕೊಟ್ಟಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಅದು ಮೊದಲೇ ಪ್ಲ್ಯಾನ್ ಮಾಡಿಕೊಂಡು ಮಾಡಿದ ಕೆಲಸ ಎಂದು ವರುಣ್ ಅವರು ಹೇಳಿದ್ದರು.
ನಂತರ ಗಿಗಿ ಅವರು ವರುಣ್ ಅವರು ನೃತ್ಯ ಮಾಡುತ್ತ ತಮಗೆ ಮುತ್ತು ಕೊಡುವ ದೃಶ್ಯವಿರುವ ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು, “ವರುಣ್ ಧವನ್ ಅವರು ನನ್ನ ಬಾಲಿವುಡ್ ಕನಸನ್ನು ನನಸು ಮಾಡುತ್ತಿದ್ದಾರೆ” ಎಂದು ಬರೆದುಕೊಂಡಿದ್ದರು. ಅದನ್ನು ತಮ್ಮ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದ ವರುಣ್, ಗಿಗಿ ಅವರನ್ನು “ಸ್ವೀಟೆಸ್ಟ್” ಮತ್ತು “ಕ್ಯೂಟೆಸ್ಟ್” ಎಂದು ಕರೆದಿದ್ದರು.