Site icon Vistara News

Varun Tej and Lavanya: ವರುಣ್- ಲಾವಣ್ಯ ಪ್ರೀ ವೆಡ್ಡಿಂಗ್‌ ಪಾರ್ಟಿ; ಮಿಂಚಿದ ಅಲ್ಲು ಅರ್ಜುನ್, ರಾಮ್ ಚರಣ್!

Varun Tej and Lavanya Tripathi pre-wedding festivities

ಬೆಂಗಳೂರು: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ (Varun Tej and Lavanya) ಅವರ ವಿವಾಹ ಮಹೋತ್ಸವಕ್ಕೆ ಮುಂಚಿತವಾಗಿ, ಕೊನಿಡೇಲಾ ಮತ್ತು ಕಾಮಿನೇನಿ ಕುಟುಂಬ ಇಟಲಿಗೆ ತಲುಪಿ ಫೋಟೊ ಹಂಚಿಕೊಂಡಿತ್ತು. ಇದೀಗ ವರುಣ್ ಮತ್ತು ಲಾವಣ್ಯ ಅಕ್ಟೋಬರ್ 30ರಂದು ಕಾಕ್‌ಟೇಲ್‌ ಪಾರ್ಟಿಯನ್ನು ಆಯೋಜಿಸಿದ್ದಾರೆ. ಕಾಕ್‌ಟೇಲ್‌ ಪಾರ್ಟಿಯನ್ನು ಅವರ ಸ್ನೇಹಿತರು ಮತ್ತು ಕುಟುಂಬಸ್ಥರಿಗಾಗಿ ಮಾಡಿದ್ದರು. ಮೆಹೆಂದಿ, ಹಳದಿ ಶಾಸ್ತ್ರಗಳ ಮೊದಲು ಈ ಪಾರ್ಟಿ ಹಮ್ಮಿಕೊಂಡಿತ್ತು ಜೋಡಿ. ʻಗ್ಲಿಟ್ಜ್ ಮತ್ತು ಗ್ಲಾಮರ್” ಡ್ರೆಸ್ ಕೋಡ್‌ ಇದ್ದು, ಪಾರ್ಟಿಗೆ ಮತ್ತಷ್ಟು ಸೊಬಗು ನೀಡಿತ್ತು. ಇದೀಗ ಫೋಟೊಗಳು ವೈರಲ್‌ ಆಗಿವೆ.

ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಕೆಲವು ಗಣ್ಯರು ಉಪಸ್ಥಿತರಿದ್ದರು. ಬಿಳಿ ಮತ್ತು ಕಪ್ಪು ಸೂಟ್‌ಗಳಲ್ಲಿ ವರುಣ್‌-ಲಾವಣ್ಯ ಜೋಡಿ ಮಿಂಚಿತ್ತು. ಉಪಾಸನಾ ಅವರು ಕಪ್ಪು ಗೌನ್‌ನಲ್ಲಿ ಮಿಂಚಿದ್ದರು. ಸ್ನೇಹಾ ರೆಡ್ಡಿ ಕೂಡ ಬಿಳಿ ಉಡುಪನ್ನು ಧರಿಸಿದ್ದರು. ಕ್ಲಾಸಿಕ್ ಸೊಬಗಿನ ಸ್ಪರ್ಶವನ್ನು ನೀಡುವಂತಿತ್ತು. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ನವೆಂಬರ್ 1ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರೆ. ನಂತರ ಭಾರತದಲ್ಲಿ ಎರಡು ವಿವಾಹ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 31 ರಂದು (ಇಂದು), ಮದುವೆಯ ಹಳದಿ ಸಮಾರಂಭ, ಪೂಲ್ ಪಾರ್ಟಿ ಮತ್ತು ಮೆಹೆಂದಿ ಸಮಾರಂಭದೊಂದಿಗೆ ಪ್ರಾರಂಭವಾಗುತ್ತವೆ. ರಾಮ್ ಚರಣ್, ಅಲ್ಲು ಅರ್ಜುನ್, ಚಿರಂಜೀವಿ, ಪವನ್ ಕಲ್ಯಾಣ್, ಸಾಯಿ ಧರಮ್ ತೇಜ್, ನಿಹಾರಿಕಾ ಕೊನಿಡೇಲಾ ಮತ್ತು ಇತರ ಕೊನಿಡೇಲಾ-ಅಲ್ಲು ಕುಟುಂಬದ ಸದಸ್ಯರು ಭಾಗಿಯಾಗಲಿದ್ದಾರೆ. ವರ ವರುಣ್ ತೇಜ್ ಮನೀಶ್ ಮಲ್ಹೋತ್ರಾ ಶೆರ್ವಾನಿ ಧರಿಸುತ್ತಾರೆ ಎಂದು ವರದಿಯಾಗಿದೆ. ವಧು ಲಾವಣ್ಯ ತ್ರಿಪಾಠಿ ಕೆಂಪು ಕಾಂಚೀಪುರಂ ಸೀರೆಯನ್ನು ಧರಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:Varun Tej: ವರುಣ್ ತೇಜ್ ಜೋಡಿ ಪ್ರಿ ವೆಡ್ಡಿಂಗ್‌ ಪಾರ್ಟಿ ಆಯೋಜಿಸಿದ ಮೆಗಾಸ್ಟಾರ್ ಚಿರಂಜೀವಿ!

ನಾಯಕಿ ಲಾವಣ್ಯ ತ್ರಿಪಾಠಿ ಜತೆ ಲವ್ ಟ್ರ್ಯಾಕ್‌ನಲ್ಲಿದ್ದ ವರುಣ್ ಕೊನೆಗೂ ಮದುವೆಯಾಗುತ್ತಿದ್ದಾರೆ. ಈ ಜೋಡಿಯ ನಿಶ್ಚಿತಾರ್ಥ ನಾಗಬಾಬು ಅವರ ನಿವಾಸದಲ್ಲಿ ಜೂನ್‌ 9ರಂದು ನೆರವೇರಿತ್ತು ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. 2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ವರುಣ್‌ ತೇಜ್‌. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್‌2’, ‘ಎಫ್‌3’ ಥರದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ‘ಗಾಂಡೀವಧಾರಿ ಅರ್ಜುನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ; Varun Tej: ನಟಿ ಲಾವಣ್ಯ ತ್ರಿಪಾಠಿ ಜತೆಗೆ ವರುಣ್ ತೇಜ್ ಎಂಗೇಜ್‌ಮೆಂಟ್‌? ಮೆಗಾ ಫ್ಯಾಮಿಲಿಯಿಂದ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌!

ಲಾವಣ್ಯ ತ್ರಿಪಾಠಿ ‘ಅಂಡಾಲ ರಾಕ್ಷಸಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ನೀಡಿದರು. ಕೆಲ ತಮಿಳು ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಗೆ ಬಂದ ‘ಹ್ಯಾಪಿ ಬರ್ತ್‌ಡೇ’ ನಂತರ ಯಾವುದೇ ತೆಲುಗು ಸಿನಿಮಾಗಳಲ್ಲೂ ಲಾವಣ್ಯ ನಟಿಸುತ್ತಿಲ್ಲ..

Exit mobile version