ಟಾಲಿವುಡ್ ನಟ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಜೋಡಿ (Varun Tej-Lavanya Tripathi) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ನಾಯಕಿ ಲಾವಣ್ಯ ತ್ರಿಪಾಠಿ ಜತೆ ಲವ್ ಟ್ರ್ಯಾಕ್‌ನಲ್ಲಿದ್ದ ವರುಣ್ ಕೊನೆಗೂ ಮದುವೆಯಾಗುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಸೋದರಳಿಯ ವರುಣ್ ತೇಜ್ ಜೋಡಿಗೆ ಪ್ರಿ ವೆಡ್ಡಿಂಗ್ ಪಾರ್ಟಿ ಆಯೋಜಿಸಿದ್ದರು. ಇದೀಗ ಈ ಫೋಟೊಗಳು ವೈರಲ್ ಆಗಿವೆ.
ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಜೂನ್ 9ರಂದು ಹೈದರಾಬಾದ್‌ನಲ್ಲಿ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ಕೂಡ ಅದ್ಧೂರಿಯಾಗಿ ನಡೆಯಲಿದ್ದು, ಅದಕ್ಕೆ ಬೇಕಾದ ಸಿದ್ಧತೆಗಳು ನಡೆಯುತ್ತಿವೆ.
ವರುಣ್ ತೇಜ್ ಬಟನ್-ಡೌನ್ ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿದ್ದರು, ಲಾವಣ್ಯ ಎಥ್ನಿಕ್ ವೇರ್ ಧರಿಸಿದ್ದರು. ಈ ಸಮಾರಂಭದಲ್ಲಿ ಇಡೀ ಮೆಗಾ ಫ್ಯಾಮಿಲಿ ಭಾಗವಹಿಸಿತ್ತು.
ಇದನ್ನೂ ಓದಿ:Varun Tej: ರಾಮ್‌ಚರಣ್ ಸಹೋದರ ವರುಣ್ ತೇಜ್ ನಟನೆಯʻಮಟ್ಕಾʼ ಪೋಸ್ಟರ್ ಔಟ್!
ವರುಣ್ ತೇಜ್ ಖಾಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. 2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ವರುಣ್ ತೇಜ್. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್2’, ‘ಎಫ್3’ ಸೇರಿ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.