Site icon Vistara News

Varun Tej and Lavanya: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ತೇಜ್, ಲಾವಣ್ಯ!

Varun Tej and Lavanya Tripathi tied the knot

ಬೆಂಗಳೂರು: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ (Varun Tej and Lavanya) ನ.1ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಭಾಗವಹಿಸಿದ್ದರು. ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್ ಫೆಲಿಸ್‌ನಲ್ಲಿ ನಡೆದ ಸಮಾರಂಭದಲ್ಲಿ ದಂಪತಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ನವವಿವಾಹಿತ ಜೋಡಿಯ ಮೊದಲ ಚಿತ್ರಗಳು ಮತ್ತು ಮದುವೆಯ ಫೋಟೊಗಳು ವೈರಲ್‌ ಆಗಿವೆ.

ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಫೋಟೊವನ್ನು ಹಂಚಿಕೊಂಡಿರುವ ತೆಲುಗು ನಟ ಮತ್ತು ನಿರ್ಮಾಪಕ ನಾಗೇಂದ್ರ ಬಾಬು “ನವ ವಿವಾಹಿತ ದಂಪತಿಗಳಾದ ವರುಣ್ ತೇಜ್ ಕೊನಿಡೇಲಾ ಮತ್ತು ಲಾವಣ್ಯ ಅವರಿಗೆ ಆಶೀರ್ವಾದ ಇರಲಿʼʼ ಎಂದು ಫೋಟೊ ಜತೆಗೆ ಟ್ವೀಟ್‌ ಮಾಡಿದ್ದಾರೆ. ಮದುವೆಗೆ, ವರುಣ್ ಚಿನ್ನದ ಶೆರ್ವಾನಿ ಮತ್ತು ಮ್ಯಾಚಿಂಗ್ ಶಾಲ್ ಧರಿಸಿದ್ದರು. ಲಾವಣ್ಯ ಕೆಂಪು ಸೀರೆಯಲ್ಲಿ ನೆಟ್ ದುಪಟ್ಟಾದಲ್ಲಿ ಮಿಂಚಿದ್ದರು. ರಾಮ್ ಚರಣ್, ಅಲ್ಲು ಅರ್ಜುನ್, ಅಲ್ಲು ಸಿರಿಶ್, ಸಾಯಿ ತೇಜ್ ಮತ್ತು ಪಂಜಾ ವೈಷ್ಣವ್ ತೇಜ್ ಇವರೆಲ್ಲರೂ ಮದುವೆಯಲ್ಲಿ ಭಾಗಿಯಾಗಿದ್ದರು. ನವವಿವಾಹಿತರನ್ನು ಅಭಿನಂದಿಸಿದ ಚಿರಂಜೀವಿ ಮದುವೆಯ ಫೋಟೋವನ್ನು ಟ್ವಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಟಲಿಯಲ್ಲಿ ವರುಣ್ ಮತ್ತು ಲಾವಣ್ಯ ಅವರ ಮದುವೆಯ ಹಲವಾರು ಫೋಟೋಗಳು ಸಹ ಔಟ್‌ ಆಗಿವೆ. ಕ್ಯಾಂಡಿಡ್ ಫೋಟೋದಲ್ಲಿ ನಟ ಅಲ್ಲು ಅರ್ಜುನ್ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಚಿತ್ರವು ಮದುವೆ ಸಮಾರಂಭದಲ್ಲಿ ಅತಿಥಿಗಳನ್ನು ತೋರಿಸಿದೆ. ಈ ಹಿಂದೆ, ಮೆಹೆಂದಿ ಸೇರಿದಂತೆ ದಂಪತಿಗ ವಿವಾಹದ ಪೂರ್ವ ಕಾರ್ಯಕ್ರಮಗಳ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್‌ ಆಗಿದ್ದವು.

ಇದನ್ನೂ ಓದಿ: Varun Tej and Lavanya: ವರುಣ್- ಲಾವಣ್ಯ ಪ್ರೀ ವೆಡ್ಡಿಂಗ್‌ ಪಾರ್ಟಿ; ಮಿಂಚಿದ ಅಲ್ಲು ಅರ್ಜುನ್, ರಾಮ್ ಚರಣ್!

ಈ ಜೋಡಿಯ ನಿಶ್ಚಿತಾರ್ಥ ನಾಗಬಾಬು ಅವರ ನಿವಾಸದಲ್ಲಿ ಜೂನ್‌ 9ರಂದು ನೆರವೇರಿತ್ತು ನಾಗ ಬಾಬು ಅವರು ವರುಣ್ ತೇಜ್ ಅವರ ತಂದೆ. ತೆಲುಗು ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ʻಮಿಸ್ಟರ್ʼ, ʻಅಂತರಿಕ್ಷಂʼ ನಂತಹ ಕೆಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. 2017ರಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು.

2014ರಲ್ಲಿ ‘ಮುಕುಂದ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು ವರುಣ್‌ ತೇಜ್‌. ಆನಂತರ ‘ಕಂಚೆ’, ‘ಫಿದಾ’, ‘ತೊಲಿ ಪ್ರೇಮ’, ‘ಎಫ್‌2’, ‘ಎಫ್‌3’ ಥರದ ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ‘ಗಾಂಡೀವಧಾರಿ ಅರ್ಜುನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Exit mobile version