Site icon Vistara News

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

Vashu Bhagnani

ಬಾಲಿವುಡ್ ನ (Bollywood) ಖ್ಯಾತ ಚಿತ್ರ ನಿರ್ಮಾಪಕ (Producer) ವಶು ಭಗ್ನಾನಿ (Vashu Bhagnani) ಅವರು ತಮ್ಮ 250 ಕೋಟಿ ಸಾಲವನ್ನು ಪಾವತಿಸಲು ಪೂಜಾ ಎಂಟರ್‌ಟೈನ್‌ಮೆಂಟ್‌ನ (Pooja Entertainment) ಏಳು ಮಹಡಿಗಳ ಕಚೇರಿಯನ್ನು ಮಾರಾಟ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳಿಂದ ಪೂಜಾ ಎಂಟರ್‌ಟೈನ್‌ಮೆಂಟ್‌ ಭಾರೀ ನಷ್ಟ ಅನುಭವಿದೆ.

ವಶು ಭಗ್ನಾನಿ ಮಾರಾಟದಿಂದ ಪಡೆದ ಹಣದಿಂದ ಸಾಲವನ್ನು ತೀರಿಸುತ್ತಿದ್ದಾರೆ ಮತ್ತು ಪ್ರೊಡಕ್ಷನ್ ಹೌಸ್ ಶೇ. 80ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ.

2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಬೆಲ್ ಬಾಟಮ್. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋತಿತು ಮತ್ತು ಮುಂದಿನ ಚಿತ್ರ ಮಿಷನ್ ರಾಣಿಗಂಜ್, ದೊಡ್ಡ ಬಜೆಟ್ ನ ಗಣಪತ್ ಪ್ರದರ್ಶನ ನೀಡಲು ವಿಫಲವಾದಾಗ ಕಂಪನಿಗೆ ಭಾರೀ ಹಿನ್ನಡೆಯಾಯಿತು. ಸ್ವಾಧೀನ ಒಪ್ಪಂದದ ಹೊರತಾಗಿಯೂ ನೆಟ್‌ಫ್ಲಿಕ್ಸ್‌ನಿಂದ ತಿರಸ್ಕರಿಸಲ್ಪಟ್ಟಿತು.

ಈ ಹೊತ್ತಿಗೆ ಕಂಪನಿಯ ನಷ್ಟವನ್ನು ಅನುಭವಿಸುತ್ತಿತ್ತು. ಬಡೇ ಮಿಯಾನ್ ಚೋಟೆ ಮಿಯಾನ್‌ನಲ್ಲಿನ ಅಗಾಧ ಹೂಡಿಕೆ ಮಾಡಿ ಸಂಪೂರ್ಣ ಕೈಸುಟ್ಟುಕೊಂಡಿತ್ತು.

Vashu Bhagnani


ಇಷ್ಟೊಂದು ನಷ್ಟದಲ್ಲಿದ್ದರೂ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಆಕ್ಷನ್ ಚಿತ್ರಕ್ಕೆ ಹಣ ಪಾವತಿಸುವುದಾಗಿ ಭರವಸೆಯನ್ನು ನೀಡಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದ ಐತಿಹಾಸಿಕ ವೈಫಲ್ಯವು ಕಂಪನಿಯನ್ನು ಬಹುತೇಕ ದುರ್ಬಲಗೊಳಿಸಿತು. ಅಪಾರ ಸಾಲವನ್ನು ತೀರಿಸಲು ಕಟ್ಟಡವನ್ನು ಮಾರಾಟ ಮಾಡದೆ ವಶುಗೆ ಬೇರೆ ದಾರಿ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Nisha Ravikrishnan:ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ʻಗಟ್ಟಿಮೇಳ’ ನಟಿ!

ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ವಶು ಮತ್ತು ಅವರ ಮಗ ಜಾಕಿ ಭಗ್ನಾನಿ ಅವರು ತಮ್ಮ ಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ಮತ್ತು ಅವರು ಮತ್ತೆ ಪುಟಿದೇಳಲು ಸಹಾಯ ಮಾಡುವ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪ್ರೊಡಕ್ಷನ್ ಹೌಸ್‌ನ ಸಿಬ್ಬಂದಿಯೊಬ್ಬರು ಪೂಜಾ ಎಂಟರ್‌ಟೈನ್‌ಮೆಂಟ್‌ಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿದ ಒಂದು ದಿನದ ಅನಂತರ ಈ ಮಾಹಿತಿ ಹೊರಬಿದ್ದಿದೆ.

Exit mobile version