ಜನವರಿ 26ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿಯ ಆರತಕ್ಷತೆ ಬೆಂಗಳೂರಿನ ದಾಸನಪುರದ ಬಳಿ ಖಾಸಗಿ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ನವದಂಪತಿಯ ರಿಸಪ್ಷನ್ಗೆ ಸ್ಯಾಂಡಲ್ವುಡ್ನ ಹಲವು ಗಣ್ಯರು ಶುಭಕೋರಿದರು. ಗುರು ದೇಶಪಾಂಡೆ, ಗೋಲ್ಡನ್ ಸ್ಟಾರ್ ಗಣೇಶ್, ಹಿರಿಯ ನಟ ಶ್ರೀನಾಥ್, ರಮೇಶ್ ಅರವಿಂದ್, ಲಹರಿ ವೇಲು, ಮಾಲಾಶ್ರೀ, ಅಮೂಲ್ಯ, ಶರಣ್, ಶ್ರುತಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ಚೇತನ್ ಕುಮಾರ್, ಹಂಸಲೇಖ, ಲತಾ ಹಂಸಲೇಖ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಅಭಿಷೇಕ್ ಅಂಬರೀಷ್ ಮತ್ತು ಇತರ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಅವರು ಜನವರಿ 26, ಗುರುವಾರ ಮೈಸೂರಿನ (Mysore) ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಮದುವೆಯಲ್ಲಿ ಭಾಗಿಯಾಗಿದ್ದರು. ನಟ ಶಿವರಾಜ್ಕುಮಾರ್, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಇತರರು ಮದುವೆಯಲ್ಲಿ ಪಾಲ್ಗೊಂಡು ಶುಭಕೋರಿದ್ದರು.
ಇದನ್ನೂ ಓದಿ: Vasishta simha and Haripriya: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠ ಸಿಂಹ-ಹರಿಪ್ರಿಯಾ