ಬೆಂಗಳೂರು: ಕಂಚಿನ ಕಂಠದ ನಟ ಎಂದೇ ಪ್ರಖ್ಯಾತಿ ಪಡೆದ ವಸಿಷ್ಠ ಸಿಂಹ ಅಭಿನಯದ ಬಹು ನಿರೀಕ್ಷಿತ ಚಿತ್ರ ಲವ್ ಲಿ (Love Li) ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿರುವ ಚಿತ್ರತಂಡ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ನಾಗರಬಾವಿಯ ಕಿಂಗ್ಸ್ ಕ್ಲಬ್ ನಲ್ಲಿ ‘ಲವ್ ಲಿ’ ಚಿತ್ರದ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಕಿಂಗ್ಸ್ ಕ್ಲಬ್‌ನಲ್ಲಿ ಆಫೀಸ್ ಸೆಟ್ ನಿರ್ಮಾಣ ಮಾಡಲಾಗಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಟಿ ಸಮೀಕ್ಷಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
‘ಲವ್ ಲಿ’ ಚಿತ್ರಕ್ಕೆ ಚೇತನ್ ಕೇಶವ್ ನಿರ್ದೇಶನವಿದೆ. ಇದೊಂದು ಕಮರ್ಶಿಯಲ್ ರೋಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದೆ. ರೌಡಿಸಂ ಕಥಾಹಂದರವನ್ನು ಹೊಂದಿದೆ.
ವಸಿಷ್ಠ ಸಿಂಹಗೆ ನಾಯಕಿಯಾಗಿ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್ ನಟಿಸುತ್ತಿದ್ದಾರೆ. ಕೊರಿಯನ್ ವೆಬ್ ಸೀರೀಸ್, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸ್ಟೆಫಿ ಪಟೇಲ್‌ಗೆ ಇದು ಮೊದಲ ಕನ್ನಡ ಸಿನಿಮಾ. ಮಾಸ್ಟರ್ ಆನಂದ್ ತ್ರಿ ವಂಶಿಕಾ ಕೂಡ ಲವ್ ಲಿ ಚಿತ್ರತಂಡ ಸೇರಿಕೊಂದ್ದಾರೆ. ಸುಬ್ಬುಲಕ್ಷ್ಮಿ ಸಂಸಾರ ಧಾರಾವಾಹಿ ಖ್ಯಾತಿಯ ಸಮೀಕ್ಷಾ ಲವ್ ಲಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ.
ಚಿತ್ರವನ್ನು ಎಂ.ಆರ್ ರವೀಂದ್ರ ಕುಮಾರ್ ನಿರ್ಮಿಸುತ್ತಿದ್ದು, ಅಶ್ವಿನ್ ಕೆನಡಿ ಛಾಯಾಗ್ರಹಣವಿದೆ. ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಸಿನಿಮಾಕ್ಕಿದೆ.
ತೆಲುಗಿನಲ್ಲಿ ವಸಿಷ್ಠ ಸಿಂಹಗೆ ಸಾಕಷ್ಟು ಬೇಡಿಕೆ ಇದ್ದು, ‘ನಾರಪ್ಪ’ ಸಿನಿಮಾದಲ್ಲಿ ಮುಖ್ಯ ಖಳ ಪಾತ್ರ ಮಾಡಿದ್ದರು. ನಂತರ ‘ಓದೆಲಾ ರೇಲ್ವೇ ಸ್ಟೇಷನ್’ ಸಿನಿಮಾದಲ್ಲೂ ನಟಿಸಿದ್ದಾರೆ. ಇದರಲ್ಲಿ ಅವರ ಪಾತ್ರ ಬಹಳ ವಿಭಿನ್ನವಾಗಿದೆ. ಬಹಳ ನಿರೀಕ್ಷೆ ಮೂಡಿಸಿದ್ದ ‘ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾ ಇತ್ತೀಚೆಗೆ ನೇರವಾಗಿ ಓಟಿಟಿಯಲ್ಲಿ ತೆರೆಗೆ ಬಂದಿದೆ. ಸಿನಿಮಾ ವೀಕ್ಷಣೆ ಮಾಡಿದವರು ವಸಿಷ್ಠ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ | ವಸಿಷ್ಠ ಸಿಂಹ ಲವ್‌ಲಿ ಸಿನಿಮಾ: ಜೋಡಿ ಆದ ಜಾರ್ಖಂಡ್ ಮೂಲದ ಸ್ಟೆಫಿ ಪಟೇಲ್