ಗಾಯಕ-ಸಂಗೀತ ನಿರ್ದೇಶಕ ವಾಸುಕಿ ವೈಭವ್ (Vasuki Vaibhav) ಬಿಗ್ಬಾಸ್ ಸೀಸನ್ 7 ಮೂಲಕ ಮನೆಮಾತಾದರು. ಇದೀಗ ಅವರು ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ ಎನ್ನಲಾಗುತ್ತಿದೆ.
ಬೃಂದಾ ಅವರ ಕೂಡ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಇನ್‌ಸ್ಟಾದಲ್ಲಿ ವಾಸುಕಿ ಜತೆ ಇರುವ ಹಲವಾರು ಫೋಟೊಗಳು ಇವೆ. ಇದೀಗ ಫ್ಯಾನ್ಸ್ ಕಮೆಂಟ್ ಮೂಲಕ ಜೋಡಿಗೆ ವಿಶಸ್ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: Vasuki Vaibhav: ಬಹುಕಾಲದ ಗೆಳತಿ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಾ ವಾಸುಕಿ ವೈಭವ್?
ವಾಸುಕಿ ವೈಭವ್ ಕೂಡ ಇನ್‌ಸ್ಟಾ ಸ್ಟೋರಿಯಲ್ಲಿ ನಮ್ಮ ಹೊಸ ಜೀವನಕ್ಕೆ ನಿಮ್ಮ ಶುಭ ಹಾರೈಕೆ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ವಾಸುಕಿ ನಟನೆಯ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾರ್ವಜನಿಕವಾಗಿ ವಾಸುಕಿ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.ವೃತ್ತಿಜೀವನವನ್ನು ರಂಗಭೂಮಿಯಿಂದ ಪ್ರಾರಂಭಿಸಿದ್ದರು. ಈಗಲೂ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ.
ವಾಸುಕಿ ವೈಭವ್ ಈಗ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಖ್ಯಾತಿ ಪಡೆಯುತ್ತಿದ್ದಾರೆ. 2016ರಲ್ಲಿ ತೆರೆಗೆ ಬಂದ ʼಊರ್ವಿʼ ಚಿತ್ರದ ಮೂಲಕ ಅವರು ನಟನೆಯನ್ನು ಪ್ರಾರಂಭಿಸಿದ್ದರು.