ಸ್ಯಾಂಡಲ್‌ವುಡ್ ಗಾಯಕ, ಯುವ ಸಂಗೀತ ನಿರ್ದೇಶಕ, ನಟ ವಾಸುಕಿ ವೈಭವ್ (Vasuki Vaibhav) ಅವರು ಇಂದು (ನವೆಂಬರ್ 16) ಜೆ ಪಿ ನಗರದ. ಸಂಸ್ಕ್ರತಿ ಗೋಕುಲಂ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜತೆ ಅವರು ಸಪ್ತಪದಿ ತುಳಿದಿದ್ದಾರೆ. ಕೇವಲ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಕಾರ್ಯಗಳು ನಡೆದಿದೆ. ಇದೀಗ ವಾಸುಕಿ ಫ್ಯಾನ್ಸ್ ಸೇರಿದಂತೆ ಸಿನಿ ಗಣ್ಯರು ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.
ಬೃಂದಾ ರಂಗಕರ್ಮಿ ಮತ್ತು ಶಿಕ್ಷಕಿ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಈಗ ಅವರು ಬದುಕಿನ ಪ್ರಮುಖ ಘಟ್ಟಕ್ಕೆ ಬಂದಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ವಾಸುಕಿ ವೈಭವ್ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ.
ಬೃಂದಾ ವಿಕ್ರಮ್ ರೀತಿಯೇ ವಾಸುಕಿ ವೈಭವ್ ಕೂಡ ರಂಗಭೂಮಿಯಲ್ಲಿ ಅನುಭವ ಗಳಿಸಿದ್ದಾರೆ. ನಂತರ ಚಿತ್ರರಂಗದಲ್ಲಿ ವಾಸುಕಿ ವೈಭವ್ ಅವರಿಗೆ ಅವಕಾಶಗಳು ಸಿಕ್ಕವು. ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು.
ಇದನ್ನೂ ಓದಿ: Vasuki Vaibhav: ಇಂದು ವಾಸುಕಿ ವೈಭವ್ ಮದುವೆ; ಯಾರು ಆ ಹುಡುಗಿ?
ವಾಸುಕಿ ವೈಭವ್ ಈಗ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಖ್ಯಾತಿ ಪಡೆಯುತ್ತಿದ್ದಾರೆ. 2016ರಲ್ಲಿ ತೆರೆಗೆ ಬಂದ ʼಊರ್ವಿʼ ಚಿತ್ರದ ಮೂಲಕ ಅವರು ನಟನೆಯನ್ನು ಪ್ರಾರಂಭಿಸಿದ್ದರು. ವಸುಂಧರಾ (2014), ಪಟ್ಟಾಭಿಷೇಕ (2015), ರಾಮ ರಾಮ ರೇ (2016) , ಹ್ಯಾಪಿ ನ್ಯೂ ಇಯರ್ (2017) , ವಿಸ್ಮಯ ಹೀಗೆ ಹಲವಾರು ಚಿತ್ರಗಳಿಗೆ ಅವರು ತಮ್ಮ ಧ್ವನಿಯನ್ನು ನೀಡಿದ್ದಾರೆ. ಚೂರಿಕಟ್ಟೆ (2018) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಹರಿಕಥೆ ಅಲ್ಲ ಗಿರಿಕಥೆ’, ‘ತತ್ಸಮ ತದ್ಭವʼ ಇವರ ಸಂಗೀತ ಸಂಯೋಜನೆಯ ಪ್ರಮುಖ ಚಿತ್ರಗಳು.