Site icon Vistara News

Vedaant Madhavan : ಪೋರ್ಷ್‌ ಕಾರಿನಲ್ಲಿ ಡ್ರೈವಿಂಗ್‌ ಕಲಿಯುತ್ತಿರುವ ಮಾಧವನ್‌ ಪುತ್ರ ವೇದಾಂತ್‌!

Vedaant Madhavan driving

ದುಬೈ: ಬಾಲಿವುಡ್‌ ನಟ ಆರ್‌ ಮಾಧವನ್‌ ಅವರ ಪುತ್ರ ವೇದಾಂತ್‌ ಮಾಧವನ್‌ (Vedaant Madhavan) ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಜುಗಾರರಾಗಿರುವ ಅವರು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದು, ದೇಶಕ್ಕೆ ಕೀರ್ತಿ ತಂದುಕೊಡುತ್ತಿರುತ್ತಾರೆ. ಇದೀಗ ಇದೇ ವೇದಾಂತ್‌ ಮತ್ತೊಂದು ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅವರು ದೂರದ ದುಬೈನಲ್ಲಿ ಕಾರಿನ ಡ್ರೈವಿಂಗ್‌ ಕಲಿಯುತ್ತಿದ್ದಾರೆ. ಅದು ಲಕ್ಸುರಿ ಕಾರಾದ ದುಬಾರಿ ಮೌಲ್ಯದ ಪೋರ್ಷ್‌ನಲ್ಲಿ ಡ್ರೈವಿಂಗ್‌ ಕಲಿಯುತ್ತಿದ್ದು, ಅದು ಎಲ್ಲೆಡೆ ಭಾರೀ ಸದ್ದಾಗುತ್ತಿದೆ.

ವೇದಾಂತ್‌ ಮಾಧವನ್‌ ಅವರು ದುಬೈನ ಗಲಾದರಿ ಮೋಟಾರ್‌ ಡ್ರೈವಿಂಗ್‌ ಸೆಂಟರ್‌ನಲ್ಲಿ ಡ್ರೈವಿಂಗ್‌ ಕಲಿಯುತ್ತಿದ್ದಾರೆ. ಅದರ ವಿಡಿಯೊವನ್ನು ಗಲಾದರಿ ಮೋಟಾರ್‌ ಡ್ರೈವಿಂಗ್‌ ಸೆಂಟರ್‌ನವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಜೀನ್ಸ್‌ ಪ್ಯಾಂಟ್‌ನೊಂದಿಗೆ ಬಿಳಿ ಬಣ್ಣದ ಟಿ ಶರ್ಟ್‌ ಧರಿಸಿರುವ ವೇದಾಂತ್‌, “ಹಾಯ್‌, ನಾನು ವೇದಾಂತ್‌ ಮಾಧವನ್‌. ಇಂದು ನಾನು ಗಲಾದರಿ ಮೋಟಾರ್‌ ಡ್ರೈವಿಂಗ್‌ ಸೆಂಟರ್‌ನಲ್ಲಿದ್ದೇನೆ. ನಾನು ನನ್ನ ಥಿಯರಿ ಪರೀಕ್ಷೆಯನ್ನು ಪಾಸ್‌ ಮಾಡಿದ್ದೇನೆ. ಈಗ ಇನ್‌ಸ್ಟಕ್ಟರ್‌ ಜತೆಯಲ್ಲಿ ಡ್ರೈವಿಂಗ್‌ ಕಲಿಯುತ್ತಿದ್ದೇನೆ. ನಾನು ಈ ಅಮೇಜಿಂಗ್‌ ಪೋರ್ಷ್‌ ಅನ್ನು ಕಲಿಯುತ್ತಿದ್ದೇನೆ. ಲೈಸೆನ್ಸ್‌ ಪಡೆಯುವುದಕ್ಕೆ ಕಾತುರದಿಂದ ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ. ಈ ವಿಡಿಯೊವನ್ನು ಡ್ರೈವಿಂಗ್‌ ಸೆಂಟರ್‌ ಜಾಹಿರಾತಿನ ರೂಪದಲ್ಲಿ ಬಳಸಿಕೊಂಡಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಹುಬ್ಬೇರಿಸಿಕೊಂಡು ನೋಡಿದ್ದಾರೆ. ಅದ್ಧೂರಿ ಕಾರಾದ ಪೋರ್ಷ್‌ನಲ್ಲಿ ಡ್ರೈವಿಂಗ್‌ ಕಲಿಯುವುದೇ? ನಾವೆಲ್ಲ ಮಾರುತಿ 800 ಮತ್ತು ಆಲ್ಟೋ ಕಾರಿನಲ್ಲಿ ಡ್ರೈವಿಂಗ್‌ ಕಲಿತಿದ್ದು ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಲಾರಂಭಿಸಿದ್ದಾರೆ. ಹಾಗೆಯೇ ಇನ್ನು ಕೆಲವರು, “ದುಬೈನಲ್ಲಿ ಇದು ಸಾಮಾನ್ಯ. ಹೆಚ್ಚು ವರಮಾನವಿರುವ ಕುಟುಂಬದ ಮಕ್ಕಳಿಗೆ ಈ ರೀತಿ ಅದ್ಧೂರಿ ಕಾರಿನಲ್ಲೇ ಡ್ರೈವಿಂಗ್‌ ಕಲಿಸಲಾಗುತ್ತದೆ. ಇವರೇನು ಅದರಲ್ಲಿ ಹೊಸಬರಲ್ಲ” ಎಂದು ಹೇಳಿದ್ದಾರೆ.


ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿರುವ ಈ ಪೋಸ್ಟ್‌ ಲಕ್ಷಾಂತರ ಮಂದಿಯಿಂದ ವೀಕ್ಷಣೆಗೊಂಡಿದೆ. 90 ಸಾವಿರದಷ್ಟು ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ. ಹಲವಾರು ಮಂದಿ ವಿಡಿಯೊವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Gruha Jyothi Scheme : 1.43 ಕೋಟಿ ಜನರಿಗೆ ಮಾತ್ರ ಈ ಬಾರಿ ಫ್ರೀ ವಿದ್ಯುತ್;‌ ಉಳಿದವರಿಗಿಲ್ಲ!
ಈ ವರ್ಷದ ಆರಂಭದಲ್ಲಿ ವೇದಾಂತ್‌ ಅವರು ಮಲೇಷ್ಯಾ ಇನ್ವಿಟೇಶನಲ್‌ ಏಜ್‌ ಗ್ರೂಪ್‌ ಸ್ವಿಮ್ಮಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಭಾರತಕ್ಕೆ ಪದಕ ತಂದುಕೊಟ್ಟಿದ್ದರು. ಅದೇ ರೀತಿಯಲ್ಲಿ ಕಳೆದ ವರ್ಷ ಕೂಡ ಈಜು ಸ್ಪರ್ಧೆಯಲ್ಲಿ ಅವರು ಅನೇಕ ಪದಕಗಳನ್ನು ಗೆದ್ದು ತಂದಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಖೇಲೋ ಇಂಡಿಯಾ 2023 ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ತಂಡದಿಂದ ಭಾಗವಹಿಸಿದ್ದರು. ಅದರಲ್ಲಿ ಅವರು ಐದು ಚಿನ್ನ ಮತ್ತು ಎರಡು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಕಳೆದ ವರ್ಷ, ಅವರು 800 ಮೀಟರ್ ಪುರುಷರ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಡ್ಯಾನಿಶ್ ಓಪನ್‌ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದರು.

Exit mobile version