Site icon Vistara News

Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ಟ್ರೈಲರ್‌ ಔಟ್‌!

Vedha Movie

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ 125ನೇ ಸಿನಿಮಾ (Vedha Movie) ವೇದ ಟ್ರೈಲರ್‌ ಬಿಡುಗಡೆಗೊಂಡಿದೆ. ಸಿನಿಮಾ ಡಿಸೆಂಬರ್‌ 23ರಂದು ಬಿಡುಗಡೆಯಾಗುತ್ತಿದೆ. ʻವೇದʼ ಸಿನಿಮಾ ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಮೂಡಿ ಬರುತ್ತಿದೆ. ನಿರ್ದೇಶಕ ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನ ನಾಲ್ಕನೇ ಸಿನಿಮಾ ಇದಾಗಿದೆ.

ಟ್ರೈಲರ್‌ ನೋಡುವಾಗ ನಟ ಶಿವರಾಜ್‌ಕುಮಾರ್‌ ರಗಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಜೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ. ವೇದ ಚಿತ್ರ 1960ರ ದಶಕದಲ್ಲಿ ನಡೆಯುವ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಇದನ್ನೂ ಓದಿ | Shivrajkumar | ಇಂದು ಮಂಗಳೂರಿನಲ್ಲಿ ವೇದ ಪ್ರಿ ರಿಲೀಸ್‌ ಇವೆಂಟ್‌: ಕೊರಗಜ್ಜ ಸನ್ನಿಧಿಗೆ ನಟ ಶಿವರಾಜ್‌ಕುಮಾರ್‌ ಭೇಟಿ

ಭಜರಂಗಿ-2 ಸಿನಿಮಾದ ನಂತರ ತೆರೆಗೆ ಬರುತ್ತಿರುವ ಶಿವಣ್ಣ ಅವರ ʻವೇದʼ ಸಿನಿಮಾ ಎಷ್ಟರ ಮಟ್ಟಿಗೆ ಅಭಿಮಾನಿಗಳ ಮನ ಸೆಳೆಯಲಿದೆ ಎಂಬುದು ಕಾದು ನೋಡಬೇಕಿದೆ.

ಇದನ್ನೂ ಓದಿ | Vedha Movie | ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼ ಟೀಸರ್‌ ಔಟ್‌!

Exit mobile version