Site icon Vistara News

Vedha Movie | ಜೋರಾಗಿದೆ ʻವೇದʼ ಅಬ್ಬರ: ಮಸ್ತ್‌ ಸಿನಿಮಾ ಅಂದ್ರು ಫ್ಯಾನ್ಸ್‌, ಇಲ್ಲಿದೆ ಟ್ವಿಟರ್ ವಿಮರ್ಶೆ!

Vedha Movie

ಬೆಂಗಳೂರು : ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅಭಿನಯದ ʻವೇದʼ ಸಿನಿಮಾ (Vedha Movie) ಡಿಸೆಂಬರ್‌ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೆಳ್ಳಂಬೆಳಗ್ಗೆ 5 ಗಂಟೆಗೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಶೋಗಳು ಶುರುವಾಗಿವೆ. ರಾಜ್ಯಾದ್ಯಂತ ಅಭಿಮಾನಿಗಳು ಶಿವಣ್ಣನನ್ನು ಭರ್ಜರಿಯಾಗಿ ವೆಲ್‌ಕಮ್ ಮಾಡಿದ್ದಾರೆ. ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ʻವೇದʼ ಸಿನಿಮಾ ತೆರೆಕಂಡಿದೆ.

ಸಿನಿಮಾ ನೋಡಿದ ಅಭಿಮಾನಿಗಳು ಈಗಾಗಲೇ ಸೋಷಿಯಲ್‌ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻʻನಿರ್ದೇಶಕ ಹರ್ಷ ಅವರ ವಂಡರ್‌ಫುಲ್‌ ಸ್ಕ್ರೀನ್ ಪ್ಲೇ. ಶಿವಣ್ಣ ಆ್ಯಕ್ಷನ್, ಡೈಲಾಗ್ ಮತ್ತು ಆ್ಯಕ್ಟಿಂಗ್ ಹಾಗೂ ಗಾನವಿ ಅದಿತಿ ಅಭಿನಯ ನೋಡಿ ಫಿದಾ ಆದೆವುʼʼಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ. ವೇದ ಇತಿಹಾಸದ ಪುಟ ಸೇರುತ್ತೆ, ಇದನ್ನು ನೋಡೋಕೆ ಡಬಲ್ ಮೀಟರ್ ಬೇಕು ಎಂದು ಸಿನಿಪ್ರಿಯರೊಬ್ಬರು ಬರೆದುಕೊಂಡಿದ್ದಾರೆ.

ಬೆಳಗ್ಗೆ 5 ಗಂಟೆಯಿಂದಲೇ ಹಲವು ಥಿಯೇಟರ್‌ಗಳಲ್ಲಿ ಪ್ರದರ್ಶನ ಆರಂಭಗೊಂಡಿದೆ. ಬೆಂಗಳೂರಿನ ಪ್ರಸನ್ನ, ರಾಬಿನ್, ಶ್ರೀನಿವಾಸ ಥಿಯೇಟರ್, ವೀರಭದ್ರಶ್ವರ ಹಾಗೂ ಸಿದ್ದೇಶ್ವರ ಸೇರಿದಂತೆ ಹಲವೆಡೆ 5:00ಗಂಟೆ ಶೋ ಆರಂಭವಾಗಿದೆ. ಪ್ರಸನ್ನ ಚಿತ್ರಮಂದಿರದಲ್ಲಿ ಅಭಿಮಾನಿಗಳಿಂದ ಚಂಡಿಕಾ ಹೋಮ ಮಾಡಲಾಯಿತು. 239 ಸಿಂಗಲ್ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದು, 1216ಕ್ಕೂ ಅಧಿಕ ಶೋ ಪ್ರದರ್ಶನಗೊಳ್ಳುತ್ತಿದೆ. ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10:25ಕ್ಕೆ ವೇದ ಪ್ರದರ್ಶನ ಶುರುವಾಗಿದ್ದು, ಚಿತ್ರಮಂದಿರ ಮುಂದೆ ಕಟೌಟ್‌ಗಳು ರಾರಾಜಿಸುತ್ತಿವೆ.

ಈ ಚಿತ್ರಕ್ಕೆ ಝೀ ಸ್ಟುಡಿಯೊ ಕೈ ಜೋಡಿಸಿದೆ. ಗಾನವಿ ಚಿತ್ರದ ನಾಯಕಿಯಾಗಿದ್ದು, ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದೆ. ವೇದ ಚಿತ್ರ 1960ರ ದಶಕದಲ್ಲಿ ನಡೆಯುವ ಕ್ರೂರ ಕಥೆಯನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಶಿವಣ್ಣನ ಮಗಳಾಗಿ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ಜಗ್ಗಪ್ಪ, ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಇದನ್ನೂ ಓದಿ | Vedha Movie | ಶಿವಣ್ಣ 125ನೇ ಸಿನಿಮಾ ʼವೇದʼ ರಿಲೀಸ್‌, ತುಂಬಿದ ಗೃಹಗಳಲ್ಲಿ ಪ್ರದರ್ಶನ

Exit mobile version