Site icon Vistara News

Veera Simha Reddy: ಬಾಲಯ್ಯ ಅಭಿನಯದ ‘ವೀರ ಸಿಂಹ ರೆಡ್ಡಿ’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Veera Simha Reddy

ಬೆಂಗಳೂರು: ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ‘ವೀರ ಸಿಂಹ ರೆಡ್ಡಿ’ ಸಿನಿಮಾ (Veera Simha Reddy) ಜನವರಿ 12ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಫೆಬ್ರವರಿ 23ರ ಸಂಜೆ 6 ಗಂಟೆಗೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ನಲ್ಲಿ ಪ್ರಸಾರವಾಗಲಿದೆ.

ಗೋಪಿಚಂದ್ ಮಲಿನೇನಿ ನಿರ್ದೇಶನದ ವೀರಸಿಂಹ ರೆಡ್ಡಿ ಮಾಸ್-ಆ್ಯಕ್ಷನ್ ಡ್ರಾಮಾ ಚಿತ್ರ. ಇದೇ ಮೊದಲ ಬಾರಿಗೆ ಶ್ರುತಿ ಹಾಸನ್ ಮತ್ತು ಬಾಲಕೃಷ್ಣ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕನ್ನಡದ ನಟ ದುನಿಯಾ ವಿಜಯ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಯ್ಯ ಫುಲ್ ಎಮೋಷನಲ್ ಮತ್ತು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ಫ್ಯಾಮಿಲಿ ಎಂಟರ್‌ಟೈನರ್ ಎಂದು ಟ್ವೀಟ್‌ನಲ್ಲಿ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರುತಿ ಹಾಸನ್, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಕನ್ನಡದ ಸ್ಟಾರ್ ನಟ ದುನಿಯಾ ವಿಜಯ್‌ ವಿಲನ್‌ ಆಗಿ ನಟಿಸಿದ್ದಾರೆ. ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರವನ್ನು ದುನಿಯಾ ವಿಜಯ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Veera Simha Reddy | ವೀರ ಸಿಂಹ ರೆಡ್ಡಿ ಸಿನಿಮಾಕ್ಕಾಗಿ ದುನಿಯಾ ವಿಜಿ, ನಂದಮುರಿ ಬಾಲಕೃಷ್ಣ ಪಡೆದ ಸಂಭಾವನೆ ಎಷ್ಟು?

ಸಂಗೀತವನ್ನು ಎಸ್ ಥಮನ್ ಸಂಯೋಜಿಸಿದ್ದಾರೆ. ಅಖಂಡ ಸಿನಿಮಾ ನಂತರ ಈ ವರ್ಷ ಬಾಲಕೃಷ್ಣ ಅವರ ಮೊದಲ ಚಿತ್ರ ಇದಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

Exit mobile version