Site icon Vistara News

Venkatesh Maha: ಕೆಜಿಎಫ್-2 ಸಿನಿಮಾವನ್ನು ಹೀಯಾಳಿಸಿದ ತೆಲುಗು ನಿರ್ದೇಶಕ: ಕ್ಷಮೆಗೆ ಅಭಿಮಾನಿಗಳ ಆಗ್ರಹ

Venkatesh Maha abuses Yash's KGF 2 Rocky character

ಬೆಂಗಳೂರು: ತೆಲುಗಿನ ನಿರ್ದೇಶಕ ವೆಂಕಟೇಶ್​ ಮಹಾ (Venkatesh Maha) ಕೆಜಿಎಫ್-2 ಮತ್ತು ಯಶ್ ಅವರ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತರ ಚಲನಚಿತ್ರ ನಿರ್ದೇಶಕರು, ನಂದಿನಿ ರೆಡ್ಡಿ, ಇಂದ್ರಗಂಟಿ ಮೋಹನ ಕೃಷ್ಣ, ಶಿವ ನಿರ್ವಾಣ, ಮತ್ತು ವಿವೇಕ್ ಆತ್ರೇಯ ಅವರೊಂದಿಗೆ ರೌಂಡ್ ಟೇಬಲ್ ಸಂದರ್ಶನದಲ್ಲಿ, ವೆಂಕಟೇಶ್ ಮಹಾ ಅವರು ಪ್ರಶಾಂತ್ ನೀಲ್ ಅವರ ಕೆಜಿಎಫ್-2 ಬಗ್ಗೆ ಹೀಯಾಳಿಸಿದ್ದಾರೆ. ಅವರು ಈ ರೀತಿ ಮಾತನಾಡಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಕಥಾನಾಯಕನ ಪಾತ್ರವನ್ನು ಅವರು ಕೆಟ್ಟ ಭಾಷೆಯಲ್ಲಿ ಹೀಯಾಳಿಸಿದ್ದಾರೆ. ಅದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇನ್ನುಳಿದ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಅವರೆಲ್ಲರ ಬಗ್ಗೆಯೂ ನೆಟ್ಟಿಗರು ಗರಂ ಆಗಿದ್ದಾರೆ. ನಿರ್ದೇಶಕರಾಗಿ ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದ್ದಕ್ಕಾಗಿ ಬಹಳಷ್ಟು ಅಭಿಮಾನಿಗಳು ಮಹಾ ಅವರನ್ನು ಬೆಂಬಲಿಸಿದರೆ, ಯಶ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಾಗಿ ಕ್ಷಮೆಯಾಚಿಸಬೇಕೆಂದು ಮತ್ತು ಕರ್ನಾಟಕದಲ್ಲಿ ಅವರ ಚಲನಚಿತ್ರಗಳನ್ನು ನಿಷೇಧಿಸುವುದಾಗಿ ಹಲವರು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: Chandanavana Film Critics Academy 2023: ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ: ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡ ಕಾಂತಾರ, ಕೆಜಿಎಫ್‌-2

“ಮೊದಲು ಯಶ್‌ ಮತ್ತು ಅವರ ಅಭಿಮಾನಿಗಳಿಗೆ ಮತ್ತು ಇಡೀ ಕನ್ನಡಿಗರಿಗೆ ಕ್ಷಮೆ ಕೇಳಿ, ಇಲ್ಲದಿದ್ದರೆ ನೀವು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.. ಅಟೆನ್ಶನ್ ಸೀಕರ್” ಎಂದು ಟ್ವಿಟರ್ ಬಳಕೆದಾರರು ಕಮೆಂಟ್ ಮಾಡುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ವೆಂಕಟೇಶ್​ ಮಹಾ ಆಡಿದ ಮಾತುಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ವೆಂಕಟೇಶ್​ ಮಹಾ ತೆಲುಗಿನಲ್ಲಿ ಅಷ್ಟಾಗಿ ಸಿನಿಮಾಗಳನ್ನು ಮಾಡಿಲ್ಲ. ಯಶ್ ಮತ್ತು ಪ್ರಶಾಂತ್ ನೀಲ್ ಅಭಿನಯದ ಕೆಜಿಎಫ್-2 ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಖ್ಯಾತಿ ಇರಿಸುವಲ್ಲಿ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ, ಕೆಜಿಎಫ್ 2 ದಕ್ಷಿಣದಲ್ಲಿ ಮಾತ್ರವಲ್ಲದೆ ಹಿಂದಿ ಬೆಲ್ಟ್‌ನಲ್ಲೂ ಅನೇಕ ದಾಖಲೆಗಳನ್ನು ಮುರಿದಿದೆ.

Exit mobile version