Site icon Vistara News

Kannada New Movie: ಸೈನ್ಸ್ ಫಿಕ್ಷನ್ ‘ಮಂಡಲ’ದಲ್ಲಿದೆ ಅನುಭವಿ ಕಲಾವಿದರ ದಂಡು: ಮಾರ್ಚ್ 10ರಂದು ತೆರೆಗೆ

Veteran cast in science fiction Kannada New Movie 'Mandala' Hits the screens on March 10

ಬೆಂಗಳೂರು: ಅಜಯ್ ಸರ್ಪೇಷ್ಕರ್‌ ನಿರ್ದೇಶನದ ಸೈನ್ಸ್ ಫಿಕ್ಷನ್ ʻಮಂಡಲʼ ಸಿನಿಮಾ (Kannada New Movie) ಫಸ್ಟ್‌ ಲುಕ್‌ ಬಿಡುಗಡೆಗೊಂಡಿದೆ. ‘ಮಂಡಲ’ ಚಿತ್ರ ಸೈನ್ಸ್ ಫಿಕ್ಷನ್ ಜತೆಗೆ ಫ್ಯಾಮಿಲಿ ಡ್ರಾಮಾ ಸಬ್ಜೆಕ್ಟ್ ಒಳಗೊಂಡಿದೆ. ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ʻʻ2018ರಲ್ಲೇ ‘ಮಂಡಲ’ ಚಿತ್ರೀಕರಣ ಮುಗಿದಿದ್ದು ಸೈನ್ಸ್ ಫಿಕ್ಷನ್ ಸಿನಿಮಾವಾದ್ದರಿಂದ ವಿಶ್ಯುವಲ್ ಎಫೆಕ್ಟ್ ಚಿತ್ರದಲ್ಲಿ ತುಂಬ ಇದೆ. ಆ ಕೆಲಸದಲ್ಲಿರುವಾಗಲೇ ಕೊರೋನಾ ಆರಂಭವಾಗಿ ಕೆಲಸಗಳು ನಿಂತು ಹೋಗಿತ್ತು. ಈಗ ಸಿನಿಮಾದ ಸಂಪೂರ್ಣ ಕೆಲಸ ಮುಗಿದಿದ್ದು, ಮಾರ್ಚ್ 10ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ʼʼಎಂದು ಚಿತ್ರದ ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾಹಿತಿ ಹಂಚಿಕೊಂಡಿದ್ದಾರೆ.

ಅಜಯ್ ಸರ್ಪೇಷ್ಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾವಿದು. ಆರಂಭದಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸಿ ಸೈನ್ಸ್ ಫಿಕ್ಷನ್ ಮಂಡಲ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ‘ಮಂಡಲ’ ಚಿತ್ರಕ್ಕೆ ಖುದ್ದು ಕಥೆ ಬರೆದು ನಿರ್ದೇಶನದ ಜತೆಗೆ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.

ಇದನ್ನೂ ಓದಿ: Kannada New Movie: ಪೃಥ್ವಿ ಅಂಬಾರ್ ಅಭಿನಯದ ‘ದೂರದರ್ಶನ’ ಮಾರ್ಚ್ 3ಕ್ಕೆ ತೆರೆಗೆ

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ.

Exit mobile version