Site icon Vistara News

Kaikala Satyanarayana | ತೆಲುಗು ಹಿರಿಯ ನಟ ಕೈಕಲ ಸತ್ಯನಾರಾಯಣ ವಿಧಿವಶ: ಸಂತಾಪ ಸೂಚಿಸಿದ ಟಾಲಿವುಡ್‌

Kaikala Satyanarayana

ಬೆಂಗಳೂರು : ಟಾಲಿವುಡ್ ಹಿರಿಯ ನಟ ಕೈಕಲ ಸತ್ಯನಾರಾಯಣ (Kaikala Satyanarayana) ಅವರು ಡಿಸೆಂಬರ್‌ 23, ಶುಕ್ರವಾರ ಬೆಳಗ್ಗೆ ಹೈದ್ರಾಬಾದ್‌ನ ಫಿಲಂನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಹಲವಾರು ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ಜುಲೈ 25, 1935ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಜನಿಸಿದ ಕೈಕಲ ಸತ್ಯನಾರಾಯಣ ಅವರು 1959ರಲ್ಲಿ ತೆರೆಗೆ ಬಂದ ‘ಸಿಪಾಯಿ ಕೂತುರು’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಡಿ ಎಲ್​ ನಾರಾಯಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಕೈಕಲ ಸತ್ಯನಾರಾಯಣ ಅವರು ಆರು ದಶಕಗಳ ವೃತ್ತಿಜೀವನದಲ್ಲಿ ಸುಮಾರು 800 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸತ್ಯನಾರಾಯಣ ಅವರ ನಿಧನ ಸುದ್ದಿ ಕೇಳಿ ಚಿತ್ರರಂಗ ಸಂತಾಪ ಸೂಚಿಸಿದ್ದಾರೆ. 1962ರಲ್ಲಿ ತೆರೆಗೆ ಬಂದ ರಾಜ್​ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಶಿವನ ಪಾತ್ರ ಮಾಡಿದ್ದರು ಎಂಬುದು ವಿಶೇಷ.

ಇದನ್ನೂ ಓದಿ | Actor Tabassum | ಫೂಲ್‌ ಖಿಲೆ ಹೈ ಗುಲ್ಶನ್‌ ಗುಲ್ಶನ್‌ ಖ್ಯಾತಿಯ ನಟಿ ತಬಸ್ಸುಮ್‌ ನಿಧನ

Kaikala Satyanarayana

ಟಾಲಿವುಡ್ ಚಲನಚಿತ್ರ ತಾರೆಯರ ಜತೆ ನಟನೆ
ಎನ್‌ಟಿ ರಾಮರಾವ್, ನಾಗೇಶ್ವರ ರಾವ್, ಚಿರಂಜೀವಿ, ನಾಗಾರ್ಜುನ, ವೆಂಕಟೇಶ್, ಬಾಲಕೃಷ್ಣ, ಮತ್ತು ಪ್ರಭಾಸ್, ಅಲ್ಲು ಅರ್ಜುನ್ ಹೀಗೆ ಹಲವು ತಾರೆಯರ ಜತೆಯಲ್ಲಿ ಕೈಕಲ ಸತ್ಯನಾರಾಯಣ ನಟಿಸಿದ್ದಾರೆ. ಕೊನೆಯದಾಗಿ 2019ರಲ್ಲಿ ತೆರೆ ಕಂಡ ಮಹೇಶ್ ಬಾಬು ಅಭಿನಯದ ʻಮಹರ್ಷಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕೈಕಲ ಸತ್ಯನಾರಾಯಣ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ ಸೂಚಿಸಿದ ತೆಲುಗು ತಾರೆಯರು
ನಂದಮೂರಿ ಕಲ್ಯಾಣ್​ ರಾಮ್ ಅವರು ಕೈಕಲ ಸತ್ಯನಾರಾಯಣ ಅವರ ನಿಧನ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ‘ಕೈಕಲ ಸತ್ಯನಾರಾಯಣ ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರ ಹೇಳಲು ಬೇಸರ ಆಗುತ್ತಿದೆ. ಅವರು ಓರ್ವ ಅದ್ಭುತ ನಟ. ತೆಲುಗಿನಲ್ಲಿ ಹಲವು ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ’ ಎಂದು ನಂದಮೂರಿ ಕಲ್ಯಾಣ್​ ರಾಮ್ ಬರೆದುಕೊಂಡಿದ್ದಾರೆ.

ʻʻಕೈಕಲ ಸತ್ಯನಾರಾಯಣ ಅವರ ನಿಧನ ಕೇಳಿ ಅತೀವ ದುಃಖವಾಗಿದೆ. ನಮ್ಮ ಚಿತ್ರರಂಗಕ್ಕೆ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯವಾಗಿದೆ. ಅವರ ಆತ್ಮಕೆ ಶಾಂತಿ ಸಿಗಲಿʼʼ ಎಂದು ನಟ ರಾಮ್‌ಚರಣ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Vikram Gokhale| ಫಲಿಸದ ಚಿಕಿತ್ಸೆ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ವಿಕ್ರಮ್​ ಗೋಖಲೆ ನಿಧನ

Exit mobile version