Site icon Vistara News

Vicky Kaushal : ವಿಕ್ಕಿ ಕೌಶಲ್-ಸಾರಾ ಅಲಿ ಖಾನ್ ಚಿತ್ರದ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್‌!

Vicky Kaushal and Sara Ali Khan's next Film Trailer to release

ಬೆಂಗಳೂರು: ವಿಕ್ಕಿ ಕೌಶಲ್ (Vicky Kaushal) ಮತ್ತು ಸಾರಾ ಅಲಿ ಖಾನ್ ತಮ್ಮ ಮುಂದಿನ ಚಿತ್ರದ ಟೈಟಲ್‌ ಅನೌನ್ಸ್‌ ಮಾಡಿದ್ದಾರೆ. ಮುಂಬರುವ ಚಿತ್ರಕ್ಕೆ `ಜರಾ ಹಟ್ಕೆ ಜರಾ ಬಚ್ ಕೆ’ (Zara Hat Ke Zara Bach Ke) ಎಂದು ಹೆಸರಿಡಲಾಗಿದೆ. ಇದೀಗ ನಟ ಇನ್‌ಸ್ಟಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾದ ಟ್ರೈಲರ್‌ ಮೇ 15ರಂದು ಬಿಡುಗಡೆ ಮಾಡಲಾಗುವುದು ಎಂದು ಬಹಿರಂಗಪಡಿಸಿದ್ದಾರೆ.

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ (Sara Ali Khan) ಅವರ ಮುಂದಿನ ಚಿತ್ರಕ್ಕೆ ಅಂತಿಮವಾಗಿ `ಜರಾ ಹಟ್ಕೆ ಜರಾ ಬಚ್ ‘ಕೆ ಎಂದು ಶೀರ್ಷಿಕೆ ಇಡಲಾಗಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರ ಜೂನ್ 2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಮೇ 15ರಂದು ವಿಕ್ಕಿ ಕೌಶಲ್ ಅವರ ಹುಟ್ಟುಹಬ್ಬದ ಒಂದು ದಿನ ಮುಂಚಿತವಾಗಿ ಟ್ರೈಲರ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

ವಿಕ್ಕಿ ಕೌಶಲ್ ಜನುಮದಿನಕ್ಕೆ ಹೊಸ ಸುದ್ದಿಯನ್ನು ನೀಡುತ್ತಾರೆ ಎಂದು ಅವರ ಅಭಿಮಾನಿಗಳು ಕಾದಿದ್ದರು.ಈ ಚಿತ್ರವನ್ನು ದಿನೇಶ್ ವಿಜನ್ ಅವರ ಮ್ಯಾಡಾಕ್ ಸ್ಟುಡಿಯೋಸ್ ನಿರ್ಮಿಸಿದೆ.

2018ರಲ್ಲಿ ಕೇದಾರನಾಥ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದ ಸಾರಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವ ಸಿನಿಮಾಗಳೂ ಸಕ್ಸೆಸ್‌ ಕಂಡಿಲ್ಲ.

ಐತಿಹಾಸಿಕ ಸಿನಿಮಾದಲ್ಲಿ ವಿಕ್ಕಿ

ಚಿತ್ರೀಕರಣದ ನಂತರ ಮತ್ತೆ ನಿರ್ದೇಶಕ ದಿನೇಶ್ ವಿಜನ್ ಅವರ ಜತೆ ನಟ ಕೈ ಜೋಡಿಸುತ್ತಿದ್ದಾರೆ. ಈ ಬಾರಿ ನಟ ರಶ್ಮಿಕಾ ಮಂದಣ್ಣ (Rashmika Mandanna) ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಐತಿಹಾಸಿಕ ವಿಚಾರ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಇದಕ್ಕೆ ‘ಛವಾ’ (Chhava) ಎಂದು ಹೆಸರು ಇಡಲಾಗಿದೆ. ಈ ಸಿನಿಮಾಗೆ ರಶ್ಮಿಕಾ ವಿಶೇಷವಾದ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Sara Ali Khan: Lakme Fashion Weekನಲ್ಲಿ ಬ್ರೈಟ್‌ ರೆಡ್‌ ಲೆಹೆಂಗಾ ಧರಿಸಿ ರ‍್ಯಾಂಪ್ ವಾಕ್ ಮಾಡಿದ ಸಾರಾ ಅಲಿ ಖಾನ್ ಫೋಟೊ

ವರದಿಯ ಪ್ರಕಾರ, ಮರಾಠಾ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ನಿಭಾಯಿಸಲಿದ್ದಾರೆ. ಚಿತ್ರದ ಪ್ರೊಡಕ್ಷನ್‌ ಹಂತ ಭರದಿಂದ ಸಾಗಿದೆ. “ಚಿತ್ರವು ಪ್ರಾಥಮಿಕವಾಗಿ ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ, ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ನಿರ್ವಹಿಸುತ್ತಿದ್ದರು ಎನ್ನುವುದು ವಿಶೇಷ. ಈ ವಿಚಾರ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಲಿದೆ.

ಕತ್ತಿ ಕಾಳಗ, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಲು ನಾಲ್ಕು ತಿಂಗಳ ಕಾಲ ತರಬೇತಿಯನ್ನು ವಿಕ್ಕಿ ಅವರು ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಈ ಪ್ರಾಜೆಕ್ಟ್‌ ದೊಡ್ಡದಾಗಿ ಮಾಡಲು ತಾಂತ್ರಿಕವಾಗಿಯೂ ಪಳಗಿದವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ವಿಕ್ಕಿ ಕೌಶಲ್ ಕೊನೆಯದಾಗಿ ಕಿಯಾರಾ ಆಡ್ವಾಣಿ ಮತ್ತು ಭೂಮಿ ಪೆಡ್ನೇಕರ್ ಅವರೊಂದಿಗೆ ʻಗೋವಿಂದ ನಾಮ್ ಮೇರಾʼದಲ್ಲಿ ಕಾಣಿಸಿಕೊಂಡಿದ್ದರು.

Exit mobile version