Site icon Vistara News

Vicky Kaushal: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಕತ್ರಿನಾ; ವಿಕ್ಕಿ ಕೌಶಲ್ ಕೊಟ್ಟರು ಕಾರಣ!

Vicky Kaushal responds after paparazzi ask him where's Katrina Kaif

ಬೆಂಗಳೂರು: ಇಲ್ಲದೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ವಿಕ್ಕಿ ಕೌಶಲ್ (Vicky Kaushal) ಭಾಗವಹಿಸಿದ್ದರು. ಆದರೆ ಈ ಈವೆಂಟ್‌ಗೆ ಕತ್ರಿನಾ ಕೈಫ್ (Katrina Kaif) ಭಾಗಿಯಾಗಿರಲಿಲ್ಲ. ಈ ವೇಳೆ ವಿಕ್ಕಿ ಕೌಶಲ್ ಅವರಿಗೆ ಕತ್ರಿನಾ ಎಲ್ಲಿ?ಎಂದು ಪಾಪರಾಜಿಗಳು ಪ್ರಶ್ನೆ ಇಟ್ಟರು. ಬಾಂಬೆಯಿಂದ ಹೊರಗೆ ಇದ್ದಾರೆ ಎಂದು ಈ ವೇಳೆ ವಿಕ್ಕಿ ಕೌಶಲ್ ಉತ್ತರ ನೀಡಿದ್ದಾರೆ.

ಕಾರ್ಯಕ್ರಮಕ್ಕೆ, ಕಪ್ಪು ಬಣ್ಣದ ಶೇರ್ವಾನಿ, ಮ್ಯಾಚಿಂಗ್ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿ ವಿಕ್ಕಿ ಆಗಮಿಸಿದರು. ಪಾಪರಾಜಿಗಳಿಗೆ ಪೋಸ್ ಕೊಟ್ಟರು. ನಟ ಹೊರಡುವ ಮೊದಲು, ಪಾಪರಾಜಿಯೊಬ್ಬರು, ಅತ್ತಿಗೆ ಎಲ್ಲಿದ್ದಾರೆ ?ಎಂದು ಪ್ರಶ್ನೆ ಇಟ್ಟಿದ್ದಾರೆ. ಬಾಂಬೆಯಿಂದ ಹೊರಗೆ ಇದ್ದಾರೆ ಎಂದು ಈ ವೇಳೆ ವಿಕ್ಕಿ ಕೌಶಲ್ ಉತ್ತರ ನೀಡಿದ್ದಾರೆ.

ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ನಾವು ಕತ್ರಿನಾ ಅವರನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ. ವರ್ಷಗಳಿಂದ ಸಿನಿಮಾದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರು. ಮದುವೆ ಆದ ಬಳಿಕ ಬ್ರೇಕ್‌ ತೆಗೆದುಕೊಂಡಿದ್ದಾರೆ ವಿಕ್ಕಿ ಎಂದಿನಂತೆ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಮಿಸ್ ಯು, ಕತ್ರಿನಾ, ನೀವು ಇನ್ನೂ ಲಂಡನ್‌ನಲ್ಲಿ ಇದ್ದೀರಿ ಎಂದು ಭಾವಿಸುತ್ತೇನೆʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ,

ಈವೆಂಟ್‌ನಲ್ಲಿ, ವಿಕ್ಕಿ ಅವರು ಶೆಹನಾಜ್ ಗಿಲ್ ಅವರೊಂದಿಗೆ ತೌಬಾ ತೌಬಾ ಹಾಡಿಗೆ ನೃತ್ಯ ಮಾಡಿದರು. ಇಬ್ಬರೂ ಹಾಡಿಗೆ ನೃತ್ಯ ಮಾಡುವ ವೀಡಿಯೊವು ವೈರಕ್‌ ಆಗಿದೆ. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್, ಆಲಿಯಾ ಭಟ್, ಶಾಹಿದ್ ಕಪೂರ್, ರಣಬೀರ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ರಣವೀರ್ ಸಿಂಗ್, ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ: Kung Fu Panda 4 OTT: ಪುಟಾಣಿಗಳ ಫೇವರಿಟ್‌ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!

ಸಲ್ಮಾನ್ ವೇದಿಕೆಯಲ್ಲಿ ಅನಂತ್ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರು ಸಲ್ಮಾನ್ ಅವರ 2000ರ ಚಲನಚಿತ್ರ ʻಹರ್ ದಿಲ್ ಜೋ ಪ್ಯಾರ್ ಕರೇʼಗಾದ ʻಐಸಾ ಪೆಹ್ಲಿ ಬಾರ್ ಹುವಾ ಹೈʼ ಹಾಡಿಗೆ ಹೆಜ್ಜೆ ಹಾಕಿದರು. ಕ್ಲಿಪ್‌ನಲ್ಲಿ, ಈವೆಂಟ್‌ನಲ್ಲಿ ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಸಲ್ಮಾನ್ ಅವರನ್ನು ಅನಂತ್ ಸ್ವಾಗತಿಸುತ್ತಿರುವುದು ಕಂಡುಬಂದಿದೆ.

ಇನ್ನೊಂದು ವೀಡಿಯೊದಲ್ಲಿ, ರಣವೀರ್ ಸಿಂಗ್ ಅವರು ಸಲ್ಮಾನ್ ಅವರ ನೋ ಎಂಟ್ರಿ ಗೀತೆಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಪತ್ನಿ ದೀಪಿಕಾ ಪಡುಕೋಣೆ ಕೂಡ ಸಮಾರಂಭದಲ್ಲಿ ಇದ್ದರು. ಕಾರ್ಯಕ್ರಮಕ್ಕಾಗಿ ದೀಪಿಕಾ ನೇರಳೆ ಬಣ್ಣದ ಸೀರೆಯನ್ನು ಧರಿಸಿದ್ದರು. ದೀಪಿಕಾ ಪಡುಕೋಣೆ ಕೂಡ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಅವರು ಡ್ಯಾನ್ಸ್ ಮಾಡಿಲ್ಲ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ಹಿಂದೂ ವೈದಿಕ ಸಮಾರಂಭದ ಪ್ರಕಾರ ಮದುವೆಯಾಗಲಿದ್ದಾರೆ. ವಿವಾಹ ಆಮಂತ್ರಣ ಪತ್ರಿಕೆಯ ಚಿತ್ರ ಬಹಿರಂಗಗೊಂಡಿದ್ದು ಅದರ ಪ್ರಕಾರ ಮೂರು ಸಮಾರಂಭಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಭವ್ಯವಾದ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್​ನಲ್ಲಿ ಮದುವೆ ನಡೆಯಲಿದೆ.

Exit mobile version