Site icon Vistara News

Katrina Kaif | ವಿಕ್ಕಿ ಕೌಶಲ್ ಡೈರೆಕ್ಟರ್‌ ಆಗಿದ್ದಾರಂತೆ: ವೈರಲ್‌ ಆಯ್ತು ಕತ್ರಿನಾ ಕೈಫ್‌ ದಂಪತಿ ವಿಡಿಯೊ!

Katrina Kaif

ಬೆಂಗಳೂರು : ಬಾಲಿವುಡ್‌ ನಟಿ ಕತ್ರಿನಾ ಕೈಫ್ (Katrina Kaif) ನಟನೆಯ ಹೊಸ ಸಿನಿಮಾ ‘ಫೋನ್ ಭೂತ್’ ಇದೇ ನವೆಂಬರ್‌ 4ರಂದು ಬಿಡುಗಡೆಯಾಗುತ್ತಿದೆ. ಮುಂಬೈನಲ್ಲಿ ನಡೆದ ‘ಫೋನ್ ಭೂತ್’ ಚಿತ್ರದ ಪ್ರದರ್ಶನಕ್ಕೆ ಕತ್ರಿನಾ ಜತೆ ವಿಕ್ಕಿ ಹಾಜರಾಗಿದ್ದರು. ವಿಕ್ಕಿ ಕೌಶಲ್ ತಮ್ಮ ಇನ್‌ಸ್ಟಾ ಸ್ಟೋರಿಯ ಮೂಲಕ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಕತ್ರಿನಾ ಅವರ ಹ್ಯಾಲೋವಿನ್ ಫೋಟೊಶೂಟ್‌ ವೇಳೆ ವಿಕ್ಕಿ ಕೌಶಲ್ ಪೋಸ್‌ ಕೊಡುವುದನ್ನು ಹೇಳಿಕೊಡುತ್ತಿರುವ ವಿಡಿಯೊ ನಟಿ ಹಂಚಿಕೊಂಡಿದ್ದಾರೆ.

ವಿಕ್ಕಿ ಕೌಶಲ್ ಈಗಾಗಲೇ ಪತ್ನಿ ಕತ್ರಿನಾ ಕೈಫ್ ಅವರ ಹೊಸ ಚಿತ್ರ ‘ಫೋನ್ ಭೂತ್’ ಅನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ತಮ್ಮ ಆಲೋಚನೆಗಳನ್ನು ನಟ ತಮ್ಮ ಇನ್ಸ್‌ಸ್ಟಾ ಖಾತೆಯಲ್ಲಿ ವ್ಯಕ್ತಪಡಿಸಿದ್ದಾರೆ. ಹ್ಯಾಲೋವಿನ್ ಪೋಟೊಶೂಟ್‌ ವೇಳೆ ಕತ್ರಿನಾ ಕೈಫ್‌ ಅವರಿಗೆ ವಿಕ್ಕಿ ಅವರು ಹೇಗೆ ಪೋಸ್‌ ನೀಡಬೇಕೆಂದು ಹೇಳಿಕೊಡುತ್ತಿದ್ದಾರೆ. ಈ ವಿಡಿಯೊ ಹಂಚಿಕೊಂಡ ನಟಿ ʻʻನನ್ನ ಪತಿ ಡೈರೆಕ್ಟರ್‌ ಆಗಿದ್ದಾರೆʼʼಎಂದು ತಮಾಷೆಯಾಗಿ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಕಳಪೆ ಎಂದ ಬಾಲಿವುಡ್‌ ನಿರ್ದೇಶಕ ಅಭಿರೂಪ್‌ ಬಸು, ಜಾಡಿಸಿದ ನೆಟ್ಟಿಗರು

ಈ ವಿಡಿಯೊ ನೋಡಿ ಕತ್ರಿನಾ ಫ್ಯಾನ್ಸ್‌ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬರು, ʻವಿಕ್ಕಿ ತುಂಬಾ ಕ್ಯೂಟ್‌ ಕಾಣಿಸುತ್ತಿದ್ದಾರೆʼ ಎಂದರೆ ಇನ್ನೊಬ್ಬರು ʻಒಬ್ಬರನ್ನೊಬ್ಬರು ಬೆಂಬಲಿಸುವ ಪರಿಪೂರ್ಣ ದಂಪತಿʼ ಎಂದು ಕಮೆಂಟ್‌ ಮಾಡಿದ್ದಾರೆ. ಸೆಲೆಬ್ರಿಟಿಗಳು ಕೂಡ ಜೋಡಿ ತುಂಬಾ ಮುದ್ದಾಗಿದೆ ಎಂದು ಸೂಚಿಸಿದ್ದಾರೆ.

ಇತ್ತಿಚೆಗಷ್ಟೆ ಕತ್ರಿನಾ ಕೈಫ್ ಬಿಗ್ ಬಾಸ್ ಸೀಸನ್‌ 16ರಲ್ಲಿ ಕಾಣಿಸಿಕೊಂಡಿದ್ದರು.’ಫೋನ್ ಭೂತ್’ ಚಿತ್ರದ ಪ್ರಚಾರಕ್ಕಾಗಿ ನಟ ಇಶಾನ್ ಖಟ್ಟರ್ ಮತ್ತು ನಟ ಸಿದ್ಧಾಂತ್ ಚತುರ್ವೇದಿ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಗುರ್ಮೀತ್ ಸಿಂಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರವಿ ಶಂಕರನ್ ಮತ್ತು ಜಸ್ವಿಂದರ್ ಸಿಂಗ್ ಬಾತ್ ಕಥೆ ಬರೆದಿರುವುದು ವಿಶೇಷ.


ಇದನ್ನೂ ಓದಿ | Celebrities Halloween Look | ಹಾಲೋವೀನ್‌ ಪಾರ್ಟಿಯಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳ ವಿಯರ್ಡ್ ಲುಕ್‌
  

Exit mobile version