Site icon Vistara News

Vicky Kaushal-Tripti Dimri: ತೃಪ್ತಿಯನ್ನು ತಬ್ಬಿ ಮುದ್ದಾಡಿದ ಕತ್ರಿನಾ ಪತಿ ವಿಕ್ಕಿ ಕೌಶಲ್;  ಹಾಟ್ ಸಾಂಗ್‌ಗೆ ಫ್ಯಾನ್ಸ್‌ ಫಿದಾ!

Vicky Kaushal-Tripti Dimri season’s most sultry track

ಬೆಂಗಳೂರು: ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಅಭಿನಯದ ‘ಬ್ಯಾಡ್ ನ್ಯೂಸ್’ (Bad Newz Movie) ಸಿನಿಮಾ ಜುಲೈ 19ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ (Tripti Dim) ಅಭಿನಯದ ಈ ಸಿನಿಮಾ ಹಾಡು ರಿಲೀಸ್​ ಆಗಿದ್ದು, ಸಾಂಗ್‌ನಲ್ಲಿ (Vicky Kaushal-Tripti Dimri) ಇಬ್ಬರ ರೊಮ್ಯಾನ್ಸ್ ನೋಡಿದ ನೆಟ್ಟಿಗರು ಈ ವರ್ಷದ ಹಾಟ್ ಸಾಂಗ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಹಾಡನ್ನು ವಿಶಾಲ್ ಮಿಶ್ರಾ ಬರೆದು, ಸಂಯೋಜಿಸಿ, ಹಾಡಿದ್ದಾರೆ.‘

ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ವಿಕ್ಕಿ ಹಾಗೂ ‘ಅನಿಮಲ್’ ಖ್ಯಾತಿಯ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡಿಗಾಗಿ ತೃಪ್ತಿ ಹಾಟ್ ಅವತಾರ ತಾಳಿದ್ದಾರೆ. ವಿಕ್ಕಿ ಕೌಶಲ್ ಮತ್ತು ತೃಪ್ತಿ ಡಿಮ್ರಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗಿದ್ದಾರೆ. ʻತೌಬಾ ತೌಬಾʼ ಹಾಡು ಹಿಟ್ ಆಗುತ್ತಿದ್ದಂತೆ ಚಿತ್ರತಂಡ ಮತ್ತೊಂದು ಸಾಂಗ್ ರಿಲೀಸ್ ಮಾಡಿದೆ. ನೀರಿನಲ್ಲಿ ತೃಪ್ತಿ ಡಿಮ್ರಿ ರೊಮ್ಯಾನ್ಸ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಅಭಿಮಾನಿಗಳು ವಿಕ್ಕಿಯ ಹೊಸ ಟ್ರ್ಯಾಕ್ ಅನ್ನು ಆನಂದಿಸುತ್ತಿರುವಾಗ ಪತ್ನಿ ಕತ್ರಿನಾ ಕೈಫ್ ಎಲ್ಲಿ? ಎಂದು ಕಮೆಂಟ್‌ ಮಾಡಿದ್ದಾರೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಿಗಿರುವಾಗ ವಿಕ್ಕಿ ಅವರು ಕತ್ರಿನಾ ಬದಲು ತೃಪ್ತಿಯನ್ನು ಅಪ್ಪಿ ನಿಂತಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ.  ‘ಬ್ಯಾಡ್ ನ್ಯೂಸ್’ ಸಿನಿಮಾವನ್ನು ಆನಂದ್ ತಿವಾರಿ ನಿರ್ದೇಶನ ಮಾಡಿದ್ದಾರೆ. ಇದು ರೊಮ್ಯಾಂಟಿಕ್ ಮತ್ತು ಹಾಸ್ಯ ಪ್ರಧಾನ ಚಿತ್ರವಾಗಿದೆ. ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ, ಅಮೃತಪಾಲ್ ಸಿಂಗ್ ಬಿಂದ್ರಾ ಮತ್ತು ಆನಂದ್ ತಿವಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Kannada New Movie: ಮೈಸೂರಿನ 100 ವರ್ಷಗಳ ಹಳೇ ಮನೆಯಲ್ಲಿ ʼಫಾದರ್ʼ ಸಿನಿಮಾ ಚಿತ್ರೀಕರಣಇದನ್ನೂ ಓದಿ:

ವಿಕ್ಕಿ ಕೌಶಲ್,ತೃಪ್ತಿ ಡಿಮ್ರಿ ಮತ್ತು ಆಮಿ ವಿರ್ಕ್ ಮೂವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಲಿಯೊ ಮೀಡಿಯಾ ಕಲೆಕ್ಟಿವ್ ಸಹಯೋಗದಲ್ಲಿ ಅಮೆಜಾನ್ ಪ್ರೈಮ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ವಿವಾಹ ಆಗಿದ್ದಾರೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಹಿಗಿರುವಾಗ ವಿಕ್ಕಿ ಅವರು ಕತ್ರಿನಾ ಬದಲು ತೃಪ್ತಿಯನ್ನು ಅಪ್ಪಿ ನಿಂತಿದ್ದು ಅನೇಕರ ಕೋಪಕ್ಕೆ ಕಾರಣ ಆಗಿದೆ. 

Exit mobile version