Site icon Vistara News

Vijay Devarakonda: ವಿಜಯ್ ದೇವರಕೊಂಡ-ಸಮಂತಾ ಅಭಿನಯದ ಖುಷಿ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

Vijay Deverakonda and Samantha’s Kushi release date

ಬೆಂಗಳೂರು: ಸಮಂತಾ ರುತ್ ಪ್ರಭು (Samantha) ಮತ್ತು ವಿಜಯ್ ದೇವರಕೊಂಡ (Vijay Devarakonda) ಕಾಂಬಿನೇಶನ್‌ ಸಿನಿಮಾವಾದ ಖುಷಿ ಸಿನಿಮಾದ ತಂಡ ಈಗ ಸಿನಿಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಮಂತಾ ಖುಷಿ ಸಿನಿಮಾ ಪೂರ್ಣಗೊಳ್ಳುವುದರ ಮಧ್ಯದಲ್ಲೆ ಸ್ವಲ್ಪ ಬ್ರೇಕ್‌ ತೆಗೆದುಕೊಂಡಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಮತ್ತೆ ಸಿನಿಮಾ ಸೆಟ್‌ಗೆ ಮರಳಿದ್ದರು. ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್‌ ಮಾಡಿದೆ. ಇದೇ ಸೆಪ್ಟೆಂಬರ್‌ 1ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.

2018ರ ಮಹಾನಟಿ ಚಿತ್ರದ ನಂತರ ವಿಜಯ್‌ ಹಾಗೂ ಸ್ಯಾಮ್‌ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಳ್ಳವುದರ ಮೂಲಕ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಫೋಟೋದಲ್ಲಿ, ಸಮಂತಾ ತನ್ನ ಬಾಲ್ಕನಿಯಲ್ಲಿ ನಿಂತು, ವಿಜಯ್ ಅವರ ಕೈಯನ್ನು ಹಿಡಿದಿರುವುದನ್ನು ಕಾಣಬಹುದು. ಇನ್ನೊಂದು ಕೈಯಲ್ಲಿ ನಾಯಿಯನ್ನೂ ಹಿಡಿದುಕೊಂಡಿದ್ದಾರೆ.

ಖುಷಿ ಸಿನಿಮಾ ಪೋಸ್ಟರ್‌

ಕಳೆದ ವರ್ಷ ಸಮಂತಾ ಅವರ ಮೈಯೋಸಿಟಿಸ್ ನಿಂದಾಗಿ ಖುಷಿ ಸಿನಿಮಾ ರಿಲೀಸ್‌ ವಿಳಂಬವಾಗಬಹುದು ಎಂಬ ವದಂತಿಗಳು ಹಬ್ಬಿದ್ದವು. ವಿಜಯ್ ದೇವರಕೊಂಡ, ಸಮಂತಾ, ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ ಮುಂತಾದ ಅದ್ಭುತ ನಟ, ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ, ಪೀಟರ್ ಹೆನ್ಸ್ ಸಾಹಸ ನಿರ್ದೇಶನ, ಪ್ರವೀನ್ ಪುಡಿ ಅವರ ಸಂಕಲನ, ಜಿ ಮುರಳಿ ಕ್ಯಾಮೆರಾ ಕೆಲಸ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತವಿದೆ.ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇದನ್ನೂ ಓದಿ: Samantha: ʻಖುಷಿʼ ಸಿನಿಮಾ ಸೆಟ್‌ನಲ್ಲಿ ಸಮಂತಾ: ಕೇಕ್‌ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ

ನಟಿ ಈಗ ಸಿಟಾಡೆಲ್‌ ಸೀರೀಸ್‌ನ ಭಾರತೀಯ ರೂಪಾಂತರಕ್ಕಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಅವರೊಂದಿಗೆ ಕೈಜೋಡಿಸಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಚಿತ್ರವನ್ನು ನಿರ್ದೇಶಿಸಿದ ರಾಜ್ ಮತ್ತು ಡಿಕೆ ಇದನ್ನು ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲದೇ ಸಮಂತಾ ಅವರ ನಟನೆಯ ಶಾಕುಂತಲಂ ಚಿತ್ರದ ಬಿಡುಗಡೆಗೆ ಸಜ್ಜಾಗಿದ್ದಾರೆ.

Exit mobile version