Site icon Vistara News

Vijay Deverakonda: ವಿಜಯ್‌ ದೇವರಕೊಂಡ- ನಟಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್ ಅರೆಸ್ಟ್‌!

Vijay Deverakonda

ಬೆಂಗಳೂರು: ಹಲವು ಯೂಟ್ಯೂಬ್‌ ಚಾನ್‌ಗಳು ಮನಬಂದಂತೆ ಸ್ಟಾರ್‌ ನಟರು, ನಟಿಯರ ಬಗ್ಗೆ ಆಕ್ಷೇಪಾರ್ಹ‌ ವಿಡಿಯೊಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತವೆ. ತಾವು ಏನೇ ಪೋಸ್ಟ್ ಮಾಡಿದರೂ ಯಾರೂ ಪ್ರಶ್ನೆ ಮಾಡಲ್ಲ ಎನ್ನುವ ನಂಬಿಕೆ ಅವರದ್ದು. ಆದರೆ ವಿಜಯ್ ದೇವರಕೊಂಡ (Vijay Deverakonda) ಅವರು ಇದೀಗ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದ್ದಾರೆ. ವಿಜಯ್ ದೇವರಕೊಂಡ ಹಾಗೂ ನಟಿಯೊಬ್ಬರ ಮಧ್ಯೆ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್ ಇದೀಗ ಅರೆಸ್ಟ್‌ ಆಗಿದ್ದಾನೆ. ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಆಕ್ಷೇಪಾರ್ಹ ವಿಡಿಯೊ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ವಿಜಯ್ ದೇವರಕೊಂಡ ಟೀಂ ನಟನ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ದೂರು ದಾಖಲಿಸಿದೆ. ಇದೀಗ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಆಕ್ಷೇಪಾರ್ಹ ವಿಡಿಯೊ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ವಿಜಯ್ ದೇವರಕೊಂಡ ಯೂಟ್ಯೂಬರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಯುಟ್ಯೂಬರ್‌ ಆಕ್ಷೇಪಾರ್ಹ ಕ್ಲಿಪ್ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.

ವರದಿಯ ಪ್ರಕಾರ ಸಿನಿಪೋಲಿಸ್‌ (CinePolis) ಹೆಸರಿನ ಯೂಟ್ಯೂಬ್​ ಚಾನೆಲ್​ನ ಅಡ್ಮಿನ್​​ನ ಬಂಧಿಸಲಾಗಿದೆ. ವಿಜಯ್ ದೇವರಕೊಂಡ ಟೀಂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ʻʻವಿಜಯ್ ದೇವರಕೊಂಡ ಮತ್ತು ನಟಿಯ ಬಗ್ಗೆ ಇಲ್ಲ ಸಲ್ಲದ ವದಂತಿಗಳನ್ನು ಹಬ್ಬಿಸಿ, ಸಂಬಂಧ ಕಲ್ಪಿಸಿ ಅಸಭ್ಯ ಸುದ್ದಿಗಳನ್ನು ವೈರಲ್‌ ಮಾಡಿದ್ದ. ಈ ಸುದ್ದಿ ಪೊಲೀಸರ ಗಮನಕ್ಕೆ ತಂದೆವು. ಆ ಬಳಿಕ ಪೊಲೀಸರು ತಕ್ಷಣಕ್ಕೆ ಪ್ರತಿಕ್ರಿಯಿಸಿದರು. ಇದೀಗ ವಿಡಿಯೊಗಳು ಡಿಲಿಟ್‌ ಆಗಿವೆ. ಎಫ್‌ಐಆರ್ ದಾಖಲಿಸಲಾಗಿದೆʼʼಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: Vijay Deverakonda: ಖುಷಿ ಚಿತ್ರದ ಗಳಿಕೆಯಿಂದ 1 ಕೋಟಿ ರೂ. ಫ್ಯಾನ್ಸ್‌ಗೆ ಹಂಚ್ತಾರಂತೆ ವಿಜಯ್‌ ದೇವರಕೊಂಡ!

‘ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕಿದೆ. ವಿಜಯ್ ಬಗ್ಗೆ ಕೆಲವರು ವದಂತಿಗಳನ್ನು ಹರಡುತ್ತಿದ್ದಾರೆ. ಕೆಲವರು ಲೈನ್‌ ಕ್ರಾಸ್‌ ಮಾಡುತ್ತಿದ್ದಾರೆ. ಈ ರೀತಿ ಮನಬಂದಂತೆ ಸುದ್ದಿ ಹಬ್ಬಿಸುವವರಿಗೆ ಈ ಪ್ರಕರಣ ಉದಾಹರಣೆ ಆಗಲಿ ಎನ್ನುವುದು ವಿಜಯ್ ಅವರ ಉದ್ದೇಶʼʼಎಂದು ಟೀಂ ಹೇಳಿಕೊಂಡಿದೆ.

‘ಹಾಯ್​ ನಾನ್ನʼ ಚಿತ್ರತಂಡದಿಂದ ವಿಜಯ್‌-ರಶ್ಮಿಕಾ ಖಾಸಗಿ ಫೋಟೊ ಬಳಕೆ!

ಇತ್ತೀಚೆಗೆ ‘ಹಾಯ್ ನಾನ್ನ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ವಿಜಯ್​ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಫೋಟೋವನ್ನು ಬಿತ್ತರ ಮಾಡಲಾಗಿತ್ತು. ಇದಕ್ಕೆ ಈಗ ನಟ ನಾನಿ ಪ್ರತಿಕ್ರಿಯೆ ನೀಡಿ ಚಿತ್ರತಂಡದಿಂದ ಆದ ಪ್ರಮಾದಕ್ಕೆ ಕ್ಷಮೆ ಕೇಳಿದ್ದರು. ಹಾಯ್​ ನಾನ್ನ’ ಚಿತ್ರಕ್ಕೆ ಮತ್ತು ರಶ್ಮಿಕಾ-ವಿಜಯ್​ ದೇವರಕೊಂಡ ಅವರಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ವೇದಿಕೆಯ ಎಲ್​ಇಡಿ ಪರದೆಯಲ್ಲಿ ಇಬ್ಬರ ವೈಯಕ್ತಿಕ ಫೋಟೋ ಬಿತ್ತರ ಆಗಿತ್ತು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರವಾಸದಲ್ಲಿರುವ ಫೋಟೊವನ್ನು ಸ್ಕ್ರೀನ್‌ನಲ್ಲಿ ಪ್ರತ್ಯಕ್ಷವಾಗಿತ್ತು. ಬಳಿಕ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದರು.

ವಿಜಯ್ ದೇವರಕೊಂಡ ಕೊನೆಯದಾಗಿ ‘ಖುಶಿ’ ಚಿತ್ರದಲ್ಲಿ ಸಮಂತಾ ಜೊತೆ ಕಾಣಿಸಿಕೊಂಡಿದ್ದರು. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಸದ್ಯ ನಿರ್ದೇಶಕ ಪರಶುರಾಮ್ ಪೆಟ್ಲಾ ಅವರೊಂದಿಗೆ ‘ಫ್ಯಾಮಿಲಿ ಸ್ಟಾರ್’ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2024 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಗೌತಮ್ ತಿನ್ನನೂರಿನ ಮುಂದಿನ ಹೆಸರಿಡದ ಪ್ರಾಜೆಕ್ಟ್‌ನಲ್ಲಿಯೂ ವಿಜಯ್ ಕಾಣಿಸಿಕೊಳ್ಳಲಿದ್ದಾರೆ.

Exit mobile version