ಬೆಂಗಳೂರು: ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ ಮಾಡುತ್ತಿದ್ದಾರೆ ಎಂಬುದುರ ಬಗ್ಗೆ ಗೊತ್ತೇ ಇದೆ. ಆದರೆ ಜೋಡಿ ಇದುವರೆಗೆ ತಾವಿಬ್ಬರೂ ಸಂಬಂಧದಲ್ಲಿ ಇದ್ದೇವೆ ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ವರದಿ ಪ್ರಕಾರ 2024ರ ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ತಮ್ಮ ನಿಶ್ಚಿತಾರ್ಥದ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಇದೀಗ ಈ ಬಗ್ಗೆ ವಿಜಯ್ ದೇವರಕೊಂಡ ಅವರು ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ವಿಜಯ್ ದೇವರಕೊಂಡ ಮಾತನಾಡಿ ʻʻನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಹಾಗೇ ಮದುವೆ ಕೂಡ. ಪ್ರತಿ ಎರಡು ವರ್ಷಕ್ಕೊಮ್ಮೆ ನನಗೆ ಮಾಧ್ಯಮದವರು ಮದುವೆ ಮಾಡಿಸುತ್ತಲೇ ಇರುತ್ತಾರೆ. ಪ್ರತಿ ವರ್ಷ ಈ ವದಂತಿ ನನಗೆ ಕಾಮನ್ ಆಗಿದೆ. ಅವರು ನನಗೆ ಮದುವೆ ಮಾಡಿಸಲು ಕಾಯುತ್ತಿರುತ್ತಾರೆ’ ಎಂದಿದ್ದಾರೆ ವಿಜಯ್ ದೇವರಕೊಂಡ. ಈ ಮೂಲಕ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ.
ತೆಲುಗು ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ನಡೆಸುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಇಬ್ಬರು ತುಟಿ ಬಿಚ್ಚದಿದ್ದರೂ ಅವರ ನಡುವಿನ ಒಡನಾಟ ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಇಬ್ಬರು ಒಟ್ಟಿಗೆ ಓಡಾಡುತ್ತಿರುವ ಫೋಟೊಗಳು ಹಲವು ಬಾರಿ ವೈರಲ್ ಆಗಿದ್ದವು. ಡೇಟಿಂಗ್ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದೇ ಉತ್ತರಿಸಿದ್ದರು. ಕಳೆದ ಕೆಲವು ದಿನಗಳಿಂದ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥದ ಬಗ್ಗೆ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಫೆಬ್ರವರಿ ಎರಡನೇ ವಾರದಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ವರದಿಯಾಗಿತ್ತು.
ಇದನ್ನೂ ಓದಿ: Vijay Deverakonda: ವಿಜಯ್ ದೇವರಕೊಂಡ- ನಟಿಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಯೂಟ್ಯೂಬರ್ ಅರೆಸ್ಟ್!
ವದಂತಿಗಳು ಪ್ರಾರಂಭವಾದದ್ದು ಹೇಗೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್ ಸಕ್ಸಸ್ ಆಗಿತ್ತು. 2019 ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು..