Site icon Vistara News

Vijay Deverakonda: ರಶ್ಮಿಕಾ ಜತೆಗಿನ ಸಂಬಂಧದ ಬಗ್ಗೆ ವಿಜಯ್‌ ದೇವರಕೊಂಡ ಪೋಷಕರು ಚಿಂತೆಗೆ ಒಳಗಾಗಿದ್ಯಾಕೆ?

Vijay Deverakonda Rumours with Rashmika Mandanna

ಬೆಂಗಳೂರು: ಮೇ 9 ನಟ ವಿಜಯ್‌ ದೇವರಕೊಂಡ (Vijay Deverakonda) ಅವರ ಜನುಮದಿನ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಅವರಿಗೆ ಶುಭಾಶಯ ತಿಳಿಸಿದ್ದಾರೆ. ತಮ್ಮ ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಕೆಲವು ವರ್ಷಗಳಿಂದ ಅಷ್ಟಾಗಿ ಅವರ ಸಿನಿಮಾಗಳು ಯಶಸ್ಸು ಕಂಡಿಲ್ಲ. ಅವರ ಕೊನೆಯ ಸಿನಿಮಾ ʻಲೈಗರ್‌ʼ ಅಷ್ಟಾಗಿ ಗಳಿಕೆ ಕಂಡಿಲ್ಲ. ಅದರ ಹೊರತಾಗಿ ನಟಿ ರಶ್ಮಿಕಾ ಮಂದಣ್ಣ ಜತೆಗಿನ ಸಂಬಂಧದ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇಬ್ಬರೂ ಕೂಡ ಈಗಾಗಲೇ ತಮ್ಮಿಬ್ಬರ ಮಧ್ಯೆ ಏನಿಲ್ಲ. ನಾವಿಬ್ಬರೂ ಸ್ನೇಹಿತರಷ್ಟೇ ಎಂತಲೂ ಸ್ಪಷ್ಟನೆ ನೀಡಿದ್ದಾರೆ. ಈ ವಂದಂತಿಗಳಿಗೆ ವಿಜಯ್‌ ದೇವರಕೊಂಡ ಪೋಷಕರು ಚಿಂತೆಗೆ ಒಳಗಾಗಿದ್ದರು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷ ನ್ಯಾಷನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಜತೆಗೆ ವಿಜಯ್‌ ದೇವರಕೊಂಡ ಹೆಸರು ತುಳುಕು ಹಾಕಿಕೊಂಡಿತ್ತು. ಈ ಬಗ್ಗೆ ವಿಜಯ್‌ ದೇವರಕೊಂಡ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ʻʻಈ ಬಗ್ಗೆ ನಾನು ಎನೂ ಸ್ಪಷ್ಟಪಡಿಸಬೇಕಾಗಿಲ್ಲ . ಕೆಲವೊಮ್ಮೆ ನಾನು ಮತ್ತು ರಶ್ಮಿಕಾ ಭೇಟಿಯಾದಾಗ ಈ ಬಗ್ಗೆ ಮಾತನಾಡಿಕೊಂಡು ತಮಾಷೆ ಮಾಡಿಕೊಳ್ಳುತ್ತೇವೆ. ನಾನು ಯಾರೊಂದಿಗೂ ಯಾವದನ್ನೂ ಸ್ಪಷ್ಟಪಡಿಸುವ ಅಗತ್ಯವಿಲ್ಲ. ವೈಯಕ್ತಿಕ ಜೀವನದ ಗಾಸಿಪ್‌ಗಳ ಬಗ್ಗೆ ನನ್ನ ಪೋಷಕರು ಕೂಡ ಚಿಂತಿಸುತ್ತಿದ್ದರು. ಇದೀಗ ಅವರು ಕೂಡ ಅದನ್ನು ಕೇವಲ ಸುದ್ದಿ ಎಂದು ಭಾವಿಸಿ ಸುಮ್ಮನಾಗುತ್ತಾರೆʼʼಎಂದು ಹೇಳಿದರು.

ಇದನ್ನೂ ಓದಿ: Vijay Deverakonda | ನಟ ವಿಜಯ್‌ ದೇವರಕೊಂಡ ಹೊಸ ಸಿನಿಮಾ ಪೋಸ್ಟರ್‌ ಔಟ್‌!

ವದಂತಿಗಳು ಪ್ರಾರಂಭವಾದದ್ದು ಹೇಗೆ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮೊದಲ ಬಾರಿಗೆ ಪರಶುರಾಮ್ ನಿರ್ದೇಶನದ 2018ರ ʻಗೀತ ಗೋವಿಂದಂʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಚಲನಚಿತ್ರ ಸೂಪರ್‌ ಸಕ್ಸೆಸ್‌ ಕಂಡಿತು. 2019ರಲ್ಲಿ, ರಶ್ಮಿಕಾ ಮತ್ತು ವಿಜಯ್ ಮತ್ತೆ ʻಡಿಯರ್ ಕಾಮ್ರೇಡ್ʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಸಿನಿಮಾ ಹಿಟ್ ಆಗಿದ್ದು, ಮತ್ತೊಮ್ಮೆ ಇವರಿಬ್ಬರ ಕೆಮಿಸ್ಟ್ರಿ ಟಾಕ್ ಆಫ್ ದಿ ಟೌನ್ ಆಯಿತು. 2019ರ ಆರಂಭದಲ್ಲಿ, ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ವದಂತಿಗಳು ಹೊರಹೊಮ್ಮಲು ಶುರುವಾದವು. ಹಲವಾರು ಪಾರ್ಟಿಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಾಗ ಊಹಾಪೋಹಗಳು ಶುರುವಾದವು. ಆದಾಗ್ಯೂ, ಇಬ್ಬರೂ ವದಂತಿಗಳು ಶುರುವಾದಂತೆ ತಮ್ಮಿಬರ ಮಧ್ಯೆ ಏನೂ ಇಲ್ಲ. ಇಬ್ಬರು ಸ್ನೇಹಿತರು ಎಂದು ಸಮರ್ಥಿಸಿಕೊಂಡರು.

ವಿಜಯ್‌ ದೇವರಕೊಂಡ ಅವರು ಈಗಾಗಲೇ `ಖುಷಿ’ ಸಿನಿಮಾದ ಶೂಟಿಂಗ್‌ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೆಸರಿಡದ ಎರಡು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿದ್ದು, VD12 ಸಿನಿಮಾದ ಮುಹೂರ್ತ ಕೆಲವು ದಿನಗಳ ಹಿಂದೆಯಷ್ಟೆ ನೆರವೇರಿತ್ತು. ಇದರಲ್ಲಿ ಶ್ರೀಲೀಲಾ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇನ್ನೊಂದು ಗೀತ ಗೋವಿಂದಂ ನಿರ್ದೇಶಕ ಪರಶುರಾಮ್ ಜತೆ ಸಿನಿಮಾ ಮಾಡಲಿದ್ದಾರೆ.

Exit mobile version