Site icon Vistara News

Vijay Devrakonda: ಹೊಸ ನಿರ್ದೇಶಕರಿಗೆ ಕಾಲ್​ಶೀಟ್ ಕೊಡದ ದೇವರಕೊಂಡ; ನೆಟ್ಟಿಗರಿಂದ ತಪರಾಕಿ

Vijay Devarakonda

ಬೆಂಗಳೂರು: ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಖುಶಿ ಮತ್ತು ಅರ್ಜುನ್ ರೆಡ್ಡಿಯಂತಹ ಹಿಟ್ ಚಿತ್ರಗಳೊಂದಿಗೆ ವಿಜಯ್ ದೇವರಕೊಂಡ  (Vijay Devrakonda) ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿ ಇಂದು ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಅದು ಅಲ್ಲದೇ ಆಗಾಗ್ಗೆ ಏನಾದರೊಂದು ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೊಂದು ಹೇಳಿಕೆ ನೀಡುವ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. “ಇನ್ನು ಮುಂದೆ ಚೊಚ್ಚಲ ನಿರ್ದೇಶಕರೊಂದಿಗೆ ಕೆಲಸ ಮಾಡುವುದಿಲ್ಲ” ಎಂಬ ಹೇಳಿಕೆ ನೀಡಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ನಿಮ್ಮ ಮೊದಲ ಚಿತ್ರವು ನಿಮ್ಮನ್ನು ಹಳ್ಳಕ್ಕೆ ನೂಕಬಹುದು

ವಿಜಯ್ ದೇವರಕೊಂಡ ತಮ್ಮ ‘ಫ್ಯಾಮಿಲಿ ಸ್ಟಾರ್’ ಸಿನಿಮಾದ ಪ್ರಚಾರದ ವೇಳೆ ಇಂಡಿಯಾ ಗ್ಲಿಟ್ಜ್‌ ಗೆ ಸಂದರ್ಶನ ನೀಡುವಾಗ, “ನಾನು ಇನ್ನು ಮುಂದೆ ಚೊಚ್ಚಲ ನಿರ್ದೇಶಕರೊಂದಿಗೆ ಕೆಲಸ ಮಾಡುವುದಿಲ್ಲ., ಅವರಿಗೆ ಕನಿಷ್ಠ ಒಂದು ಚಿತ್ರ ಮಾಡಿದ ಅನುಭವವಾದರೂ ಇರಬೇಕು. ನೀವು ನೇರವಾಗಿ ಸೆಟ್‌ ಗೆ ಬಂದಾಗ ಅದನ್ನು ಸ್ವೀಕರಿಸುವುದು ದೊಡ್ಡ ಸವಾಲಾಗಿದೆ. ಬಜೆಟ್ ನಿಭಾಯಿಸಲು, ಸ್ಕೇಲ್ ಅನ್ನು ನಿರ್ವಹಿಸಲು ಬಹಳಷ್ಟು ಒತ್ತಡವಿರುತ್ತದೆ. ಒಂದು ಚಿತ್ರ ಮಾಡಿದಾಗ, ಎಲ್ಲವೂ ತಿಳಿಯುತ್ತದೆ, ಮೊದಲ ಸಿನೆಮಾ ವಾರ್ಮ್ ಅಪ್ ಆಗಲು ಪ್ರ್ಯಾಕ್ಟಿಸ್ ಮ್ಯಾಚ್ ಇದ್ದ ಹಾಗೆ. ನಾವೆಲ್ಲರೂ ಪ್ರತಿ ಚಿತ್ರದೊಂದಿಗೆ ಉತ್ತಮವಾಗುತ್ತೇವೆ, ಆದರೆ ನಿಮ್ಮ ಮೊದಲ ಚಿತ್ರವು ನಿಮ್ಮನ್ನು ಹಳ್ಳಕ್ಕೆ ನೂಕಬಹುದು” ಎಂದಿದ್ದಾರೆ. ಚೊಚ್ಚಲ ನಿರ್ದೇಶಕರ ಬಗ್ಗೆ ವಿಜಯ್ ದೇವರಕೊಂಡ ಅವರ ಈ ಹೇಳಿಕೆ ಸಾಕಷ್ಟು ಸುದ್ದಿ ಮಾಡಿದೆ.

ನನ್ನ ನಿರ್ದೇಶಕರು ನನ್ನನ್ನು ಬಳಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು

ಪ್ರಾಜೆಕ್ಟ್‌ ಗೆ ಸಹಿ ಹಾಕುವ ಮೊದಲು ನಾನು ನಿರ್ದೇಶಕರ ಪ್ರತಿಯೊಂದು ಅಂಶವನ್ನು ಗಮನಿಸುತ್ತೇನೆ ಎಂದಿದ್ದಾರೆ ವಿಜಯ್ . “ನನ್ನ ನಿರ್ದೇಶಕರು ನನ್ನನ್ನು ಬಳಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು. ನಾನು ಚೊಚ್ಚಲ ನಿರ್ದೇಶಕರೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ. ಒಂದು ಚಿತ್ರ ಮಾಡಿದ್ದರೂ, ನಾನು ಅವರ ಸಂಗೀತ ಪ್ರಜ್ಞೆ, ಎಡಿಟಿಂಗ್ ಪ್ರಜ್ಞೆ ಮತ್ತು ಕಥೆ ಹೇಳುವ ವಿಧಾನದ ಕುರಿತು ಹೆಚ್ಚಿನ ಗಮನ ಹರಿಸುತ್ತೇನೆ. ಅವರು ಮಾಡಿದ ಒಂದು ಸಿನಿಮಾ ಯಶಸ್ವಿ ಆಗಬೇಕೆಂದೇನಿಲ್ಲ ಅವರು ಒಂದು ಚಿತ್ರ ಮಾಡಿದ್ದರೆ ಮತ್ತು ನಾನು ಅವರನ್ನು ಇಷ್ಟಪಟ್ಟರೆ, ನಾನು ಯಾರೊಂದಿಗೂ ಕೂಡ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:Vijay Deverakonda: ಹೌದು… ನಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದ ವಿಜಯ್ ದೇವರಕೊಂಡ!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಜಯ್ ಹೇಳಿಕೆಯ ಬಗ್ಗೆ ಬಿಸಿಬಿಸಿ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರಂತೂ ನಟನನ್ನು ದುರಹಂಕಾರಿ ಎಂದು ಕರೆದು ಅವರ ತರ್ಕವನ್ನು ಪ್ರಶ್ನಿಸಿದ್ದಾರೆ.

ಸಂಭಾವನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟ

ಇದೇ ವೇಳೆ ಸಂದರ್ಶನದಲ್ಲಿ ತಮಗೆ ಹಿಂದೆ ನೀಡುತ್ತಿದ್ದ ಸಂಭಾವನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಈಗ ಸ್ಟಾರ್. ಆದರೆ, ದೊಡ್ಡ ಸಂಭಾವನೆ ಸಿಗುತ್ತಿರುವುದು ಇತ್ತೀಚೆಗೆ ಮಾತ್ರ. ಖುಷಿ ಸಿನಿಮಾ ಬಳಿಕ ನಾನು ಮಾರುಕಟ್ಟೆ ದರದಲ್ಲಿ ಸಂಭಾವನೆ ಪಡೆಯೋಕೆ ಆರಂಭಿಸಿದೆ’ಎಂದಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಅಭಿನಯದ ಫ್ಯಾಮಿಲಿ ಸ್ಟಾರ್ ಚಿತ್ರ ಏಪ್ರಿಲ್ 5 ರಂದು ತೆರೆಕಾಣಲಿದೆ. ಚಿತ್ರದ ಟ್ರೇಲರ್ ಈಗಾಗಲೇ  ಸಾಕಷ್ಟು ಸದ್ದು ಮಾಡುತ್ತಿದೆ.

Exit mobile version